ಈದ್ಗಾ ಮೈದಾನ ಬ್ಯಾರಿಕೇಡ್ ಸಮಸ್ಯೆ ಸುಖಾಂತ್ಯ; ಏ.10ರಂದು ಬೆಳಿಗ್ಗೆ 10ಕ್ಕೆ ತೆರವು*
*ಈದ್ಗಾ ಮೈದಾನ ಬ್ಯಾರಿಕೇಡ್ ಸಮಸ್ಯೆ ಸುಖಾಂತ್ಯ; ಏ.10ರಂದು ಬೆಳಿಗ್ಗೆ 10ಕ್ಕೆ ತೆರವು*
ಶಿವಮೊಗ್ಗದ ಈದ್ಗಾ ಮೈದಾನಕ್ಕೆ ಬ್ಯಾರಿಕೇಡ್ ಹಾಕಿದ ವಿಚಾರಕ್ಕೆ ಭುಗಿಲೆದ್ದಿದ್ದ ವಿವಾದ ಸುಖಾಂತ್ಯ ಕಂಡಿದ್ದು, ಬ್ಯಾರಿಕೇಡ್ ತೆರವು ಕಾರ್ಯಾಚರಣೆ ಏ.10ರ ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.
ಹಾಗೆಂದು ಎಸ್ ಪಿ ಮಿಥುನ್ ಕುಮಾರ್ ಹೇಳಿಕೆ ನೀಡಿದ್ದು, ಸಂಬಂಧಿಸಿದ ಎರಡೂ ಕಡೆಯ ನಾಯಕರ ಜೊತೆ ಮಾತು ನಡೆದು ಫಲಪ್ರದವಾಗಿದೆ. ಎರಡೂ ಕಡೆಯವರು ಕೆಲವೊಂದು ಕಂಡೀಷನ್ ಗಳ ಮೂಲಕ ಬ್ಯಾರಿಕೇಡ್ ತೆರವಿಗೆ ಒಪ್ಪಿಗೆ ನೀಡಿದ್ದಾರೆ.
ಮೈದಾನಕ್ಕೆ ಸಿಸಿ ಟಿವಿ ಕ್ಯಾಮರಾ, ವಿದ್ಯುತ್ ದೀಪದ ವ್ಯವಸ್ಥೆ, ಸ್ವಚ್ಛತೆಯ ವ್ಯವಸ್ಥೆಗೆ ಒಪ್ಪಿ ಈ ನಿರ್ಧಾರಕ್ಕೆ ಬರಲಾಗಿದೆ. ಜಿಲ್ಲಾಡಳಿತ ಮೈದಾನದಲ್ಲಿ ಸಾರ್ವಜನಿಕ ವಾಹನಗಳಿಗೂ ಪ್ರವೇಶ ಕಲ್ಪಿಸಲಿದೆ.
ಇದಕ್ಕೆ ಸಹಕರಿಸಿದ ಎಲ್ಲರಿಗೂ ಎಸ್ ಪಿ ಮಿಥುನ್ ಕುಮಾರ್ ಅಭಿನಂದಿಸಿದ್ದಾರೆ.