ಡಿಸಿಸಿ ಬ್ಯಾಂಕ್ ನಕಲಿ ಚಿನ್ನ ಅಡಮಾನದ 63 ಕೋಟಿ ರೂ.,ಗಳ ಅಕ್ರಮ ಹಗರಣ* *ಮ್ಯಾನೇಜರ್ ಆಗಿದ್ದ ಶೋಭಾ- ಚಾಲಕನಾಗಿದ್ದ ಶಿವಕುಮಾರ್ ಮನೆಗಳ ಮೇಲೆ ದಾಳಿ ನಂತರ ಇವತ್ತೂ ಮುಂದುವರೆದ ಇಡಿ ದಾಳಿ* *ನಿರ್ದೇಶಕ ಸುಧೀರ್, ಆರ್ ಎಂ ಎಂ ಆಪ್ತ ತೀರ್ಥಹಳ್ಳಿ ಬೆಟ್ಟಮಕ್ಕಿ ಕೃಷ್ಣಮೂರ್ತಿ ಭಟ್ ಮನೆಗಳ ಮೇಲೂ ಮುಂದುವರೆದ ದಾಳಿ*

*ಡಿಸಿಸಿ ಬ್ಯಾಂಕ್ ನಕಲಿ ಚಿನ್ನ ಅಡಮಾನದ 63 ಕೋಟಿ ರೂ.,ಗಳ ಅಕ್ರಮ ಹಗರಣ*

*ಮ್ಯಾನೇಜರ್ ಆಗಿದ್ದ ಶೋಭಾ- ಚಾಲಕನಾಗಿದ್ದ ಶಿವಕುಮಾರ್ ಮನೆಗಳ ಮೇಲೆ ದಾಳಿ ನಂತರ ಇವತ್ತೂ ಮುಂದುವರೆದ ಇಡಿ ದಾಳಿ*

*ನಿರ್ದೇಶಕ ಸುಧೀರ್, ಆರ್ ಎಂ ಎಂ ಆಪ್ತ ತೀರ್ಥಹಳ್ಳಿ ಬೆಟ್ಟಮಕ್ಕಿ ಕೃಷ್ಣಮೂರ್ತಿ ಭಟ್ ಮನೆಗಳ ಮೇಲೂ ಮುಂದುವರೆದ ದಾಳಿ*

ನಕಲಿ ಚಿನ್ನ ಅಡಮಾನ ಪ್ರಕರಣ ಶಿವಮೊಗ್ಗದಲ್ಲಿ ಮತ್ತೆ ಸದ್ದು ಮಾಡಿದೆ. ನಿನ್ನೆ ಡಿಸಿಸಿ ಬ್ಯಾಂಕಿನ ನಗರ ಶಾಖೆಯ ಮ್ಯಾನೇಜರ್ ಆಗಿದ್ದ ಶೋಭಾ ಮತ್ತು ಚಾಲಕ ಆಗಿದ್ದ ಶಿವಕುಮಾರ್ ಮನೆಗಳೂ ಸೇರಿದಂತೆ ಹಲವರ ಮನೆಗಳ ಮೇಲೆ ದಾಳಿ ನಡೆದಿತ್ತು.

ಇಂದು ಡಿಸಿಸಿ ಬ್ಯಾಂಕ್ ಹಾಲಿ ನಿರ್ದೇಶಕ ಜಿ.ಎನ್. ಸುಧೀರ್ ರವರ ಅಚ್ಯುತರಾವ್ ಬಡಾವಣೆಯಲ್ಲಿರುವ ಮನೆ, ತೀರ್ಥಹಳ್ಳಿಯ ಬೆಟ್ಟಮಕ್ಕಿಯಲ್ಲಿರುವ ಆರ್ ಎಂ ಎಂ ಆಪ್ತ ಕೃಷ್ಣಮೂರ್ತಿ ಭಟ್ ರವರ ಮನೆ ಮೇಲೆ ಇಂದು ಇಡಿ( ಜಾರಿ ನಿರ್ದೇಶನಾಲಯ) ದಾಳಿ ಮಾಡಿದೆ.

ಶಿವಮೊಗ್ಗ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್(ಡಿಸಿಸಿ ಬ್ಯಾಂಕ್)ನಲ್ಲಿ 2014 ರಲ್ಲಿ ನಡೆದಿದ್ದ ನಕಲಿ ಚಿನ್ನ ಅಡಮಾನ ಸಾಲ ಪ್ರಕರಣಕ್ಕೆ ಭರ್ತಿ ಹತ್ತು ವರ್ಷ ತುಂಬಿದ ಈ ಸಂದರ್ಭದಲ್ಲಿ ಇ.ಡಿ. ಅಧಿಕಾರಿಗಳು ಶಿವಮೊಗ್ಗದ ವಿವಿಧೆಡೆ ದಾಳಿ ಮಾಡಿದ್ದಾರೆ.

ಡಿಸಿಸಿ ಬ್ಯಾಂಕ್ ನಗರ ಶಾಖೆ ಮ್ಯಾನೇಜರ್ ಆಗಿದ್ದ ಶೋಭಾ, ಬ್ಯಾಂಕಿನ ಅಧ್ಯಕ್ಷರ ಕಾರು ಚಾಲಕನಾಗಿದ್ದ ಶಿವಕುಮಾರ್ ರವರ ಶಿವಮೊಗ್ಗದ ಮನೆಗಳ ಮೇಲೆ ಇ ಡಿ ದಾಳಿ ಮಾಡಿತ್ತು.

2014ರ ಈ ಪ್ರಕರಣ ಸಂಬಂಧ 2021ರಲ್ಲಿ ಚಾರ್ಜ್ ಶೀಟ್ ಸಲ್ಲಿಸಲಾಗಿತ್ತು. ಒಟ್ಟು 63 ಕೋಟಿ ರೂ.,ಗಳ ಹಗರಣ ಇದಾಗಿತ್ತು. ಹಗರಣದ ವೇಳೆ ನಗರ ಶಾಖೆ ಮ್ಯಾನೇಜರ್ ಆಗಿದ್ದಾಕೆ ಶೋಭಾ. ಪ್ರಕರಣದ ತನಿಖೆ ಮುಂದುವರೆಸಿದ್ದ ಇಡಿ ಬ್ಯಾಂಕ್ ಅಧ್ಯಕ್ಷ ಮಂಜುನಾಥ ಗೌಡ ಆರ್.ಎಂ.ರಿಗೆ ಸಮನ್ಸ್ ಜಾರಿಗೊಳಿಸಿತ್ತು.

ಈ ಸಮನ್ಸ್ ವಿರುದ್ಧ ಮಂಜುನಾಥ ಗೌಡರು ಹೈಕೋರ್ಟ್ ನಲ್ಲಿ ತಡೆಯಾಜ್ಞೆ ಕೋರಿದ್ದರು. ಆದರೆ, ಅರ್ಜಿ ವಜಾಗೊಂಡಿತ್ತು.

ಈ ಹಿನ್ನೆಲೆಯಲ್ಲಿ ಶಿವಮೊಗ್ಗದ ಕಾಮಾಕ್ಷಿ ಬೀದಿಯಲ್ಲಿರು ಶಿವಕುಮಾರ್ ಮನೆ, ಗೋಪಾಲಗೌಡ ಬಡಾವಣೆಯಲ್ಲಿರುವ ಶೋಭಾ ಮನೆ ಮೇಲೆ ಇಡಿ ದಾಳಿ ಮಾಡಿತ್ತು.