ಶಿವಮೊಗ್ಗ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎನ್.ಗೋವಿಂದ ಪತ್ರಿಕಾಗೋಷ್ಠಿ* *5 ಪ್ರಮುಖ ಬೇಡಿಕೆಗಳಿಗೆ ಒತ್ತಾಯಿಸಿ ಇಂದಿನಿಂದ ಕಪ್ಪು ಪಟ್ಟಿ ಧರಿಸಿ ಹಂತ ಹಂತದ ಹೋರಾಟ* *ಬೇಡಿಕೆ ಈಡೇರದಿದ್ದರೆ ಮೇ.26 ರಿಂದ ಸ್ವಚ್ಛತಾ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ* *ಏನು ಆ ಬೇಡಿಕೆಗಳು?*

*ಶಿವಮೊಗ್ಗ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಎನ್.ಗೋವಿಂದ ಪತ್ರಿಕಾಗೋಷ್ಠಿ*

*5 ಪ್ರಮುಖ ಬೇಡಿಕೆಗಳಿಗೆ ಒತ್ತಾಯಿಸಿ ಇಂದಿನಿಂದ ಕಪ್ಪು ಪಟ್ಟಿ ಧರಿಸಿ ಹಂತ ಹಂತದ ಹೋರಾಟ*

*ಬೇಡಿಕೆ ಈಡೇರದಿದ್ದರೆ ಮೇ.26 ರಿಂದ ಸ್ವಚ್ಛತಾ ಕೆಲಸ ಸ್ಥಗಿತಗೊಳಿಸಿ ಪ್ರತಿಭಟನೆ*

*ಏನು ಆ ಬೇಡಿಕೆಗಳು?*

ಶಿವಮೊಗ್ಗ ಮಹಾನಗರ ಪಾಲಿಕೆ ಶಾಖೆಯು ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘದ ನಿರ್ದೇಶನದ ಮೇರೆಗೆ ಪ್ರಮುಖ ಐದು ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಇಂದಿನಿಂದ ಕಪ್ಪು ಪಟ್ಟಿ ಧರಿಸಿ ಕೆಲಸ ನಿರ್ವಹಿಸುವ ಮೂಲಕ ಪ್ರತಿಭಟನೆ ಆರಂಭಿಸಿದ್ದೇವೆ ಎಂದು ಸಂಘದ ಅಧ್ಯಕ್ಷ ಎನ್.ಗೋವಿಂದ ಹೇಳಿದರು.

ಇಂದು ಪಾಲಿಕೆ ಸಭಾಂಗಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಅವರು, ಅನಿವಾರ್ಯ ಕಾರಣಗಳಿಂದ ಹೋರಾಟ ಮಾಡಲೇಬೇಕಾಗಿದೆ. ಬೇಡಿಕೆಗಳನ್ನು ಸರ್ಕಾರ ಮೇ25 ರೊಳಗೆ ಈಡೇರಿಸದಿದ್ದರೆ, ಮೇ 26 ರಿಂದ ಸಾಂದರ್ಭಿಕ ರಜೆ ಹಾಕಿ, ಕೆಲಸ ಸ್ಥಗಿತಗೊಳಿಸಿ ಹೋರಾಟ ಮಾಡಲಿದ್ದೇವೆ ಎಂದರು.

ಏಪ್ರಿಲ್ 10 ರಂದು ಕೇಂದ್ರ ಸಂಘದ ತೀರ್ಮಾನದಂತೆ ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ನೌಕರರ ಸಂಘ ಹಾಗೂ ರಾಜ್ಯದ ನಗರ ಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಪೌರ ನೌಕರರ ಸಂಘದ ಜಂಟಿ ಸಭೆಯನ್ನು ಜರುಗಿಸಿ, ಸಭೆಯಲ್ಲಿ ಕರ್ನಾಟಕ ರಾಜ್ಯದ ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಮತ್ತು ಪೌರ ನೌಕರರ ಸಂಘದ ಅಧ್ಯಕ್ಷರು ಭಾಗವಹಿಸಿ ಒಮ್ಮತದ ನಿರ್ಣಯವನ್ನು ಈ ಕೆಳಕಂಡಂತೆ ಕೈಗೊಳ್ಳಲಾಯಿತು ಎಂದು ವಿವರಿಸಿದರು.

*ಪ್ರಮುಖ ಬೇಡಿಕೆಗಳು*

1.7ನೇ ವೇತನ ಆಯೋಗದ ಸೌಲಭ್ಯವನ್ನು ರಾಜ್ಯ ಸರ್ಕಾರಿ ನೌಕರರಿಗೆ ವಿಸ್ತರಿಸಿದಂತೆ, ಮಹಾನಗರ ಪಾಲಿಕೆ ಮತ್ತು ಪುರಸಭೆ/ನಗರ ಸಭೆ/ಪಟ್ಟಣ ಪಂಚಾಯಿತಿ ನೌಕರರಿಗೆ ಯಥಾವತ್ತಾಗಿ ಸರ್ಕಾರದ ಆರ್ಥಿಕ ಇಲಾಖೆಯಿಂದಲೇ ಪಾವತಿಸಲು ಅನುದಾನವನ್ನು ಬಿಡುಗಡೆ ಮಾಡುವುದು.

2.ಮಹಾನಗರ ಪಾಲಿಕೆ ಪುರಸಭೆ, ನಗರ ಸಭೆ, ಪಟ್ಟಣ ಪಂಚಾಯಿತಿ ನೌಕರರುಗಳಿಗೆ, ಎಸ್.ಎಫ್.ಸಿ ವೇತನ ನಿಧಿಯಲ್ಲಿ ಶೇ 20 ರಿಂದ 15 % ಪ್ರತಿಶತ ಅನುದಾನ ಕಡಿತ ಮಾಡಿ, ವೇತನ ಅನುದಾನ ಬಿಡುಗಡೆಮಾಡಿ, ಈ ವ್ಯತ್ಯಾಸದ ಮೊತ್ತವನ್ನು ಸ್ಥಳೀಯ ಸಂಸ್ಥೆಗಳ ನಿಧಿಯಿಂದಲೇ ಬಳಸಿ, ವೇತನ ಪಾವತಿಸುವಂತೆ ಹೊರಡಿಸಿ ನಡವಳಿ ಆದೇಶವನ್ನು ಹಿಂಪಡೆದು, ಸರ್ಕಾರದ ಆರ್ಥಿಕ ಇಲಾಖೆಯಿಂದಲೇ ಸಂರ್ಪೂಣ ವೇತನ ಭರಿಸುವುದು.

3.ರಾಜ್ಯ ಸರ್ಕಾರಿ ನೌಕರರಿಗೆ ಜಾರಿ ಮಾಡಿರುವ ಆರೋಗ್ಯ ಸಂಜೀವಿನಿ ಯೋಜನೆಯನ್ನು ಕರ್ನಾಟಕ ರಾಜ್ಯ ಪುರಸಭೆ, ನಗರ ಸಭೆ, ಪಟ್ಟಣ ಪಂಚಾಯ್ತಿ ಮತ್ತು ಮಹಾನಗರ ಪಾಲಿಕೆ ಅಧಿಕಾರಿ ನೌಕರರಿಗೂ ಜಾರಿ ಮಾಡಬೇಕು

4. ರಾಜ್ಯ ಸರ್ಕಾರಿ ನೌಕರರಿಗೆ ಜಾರಿ ಮಾಡಿರುವ KGID & GPF ನ್ನು ಎಲ್ಲಾ ಸ್ಥಳೀಯ ಸಂಸ್ಥೆಗಳಾದ ಕರ್ನಾಟಕ ರಾಜ್ಯ ಪುರಸಭೆ, ನಗರ ಸಭೆ, ಪಟ್ಟಣ ಪಂಚಾಯ್ತಿ ಮತ್ತು ಮಹಾನಗರ ಪಾಲಿಕೆ ಅಧಿಕಾರಿ ನೌಕರರಿಗೂ ಜಾರಿ ಮಾಡಬೇಕು

5.ಕರ್ನಾಟಕ ರಾಜ್ಯ ಮಹಾನಗರ ಪಾಲಿಕೆ ವೃಂದ ಮತ್ತು ನೇಮಕಾತಿ ನಿಯಮಾವಳಿಯನ್ನು ತಿದ್ದುಪಡಿ ಕರಡು ಅಧಿಸೂಚನೆ ಕೂಡಲೇ ಜಾರಿ ಮಾಡಬೇಕು.

*ಹಂತ ಹಂತ ಹೋರಾಟದ ಬಗ್ಗೆ ಸಭೆಯ ನಿರ್ಣಯ*

1.ದಿನಾಂಕ: 17-04-2025 ರಿಂದ ಕಛೇರಿಗಳಲ್ಲಿ ಕಪ್ಪು ಪಟ್ಟಿ (ಬಲತೋಳಿಗೆ) ಧರಿಸಿ ನ್ಯಾಯಯುತ ಬೇಡಿಕೆ ಪಡೆಯಲು ಆನಿವಾರ್ಯ ಕಾರಣಗಳಿಂದ ಹೋರಾಟ ಮಾಡಲು ತೀರ್ಮಾನಿಸಲಾಯಿತು.

2.ನಮ್ಮ ಸಂಘದ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸಲು ಈಗಾಗಲೇ ಸರ್ಕಾರಕ್ಕೆ ನೀಡಿರುವ ಮನವಿ ಪತ್ರವನ್ನು, ರಾಜ್ಯದ ಉಸ್ತುವಾರಿ ಸಚಿವರುಗಳಿಗೆ/ಶಾಸಕರಿಗೆ/ ಜಿಲ್ಲಾಧಿಕಾರಿಗಳಿಗೆ ಮತ್ತು ಸಂಘ ಸಂಸ್ಥೆಗಳಿಗೆ ಸಹ ಮನವಿ ಪತ್ರ ಸಲ್ಲಿಸಲು ತೀರ್ಮಾನಿಸಲಾಯಿತು.

3.ಅಂತಿಮವಾಗಿ ನಮ್ಮ ಸಂಘದ ವತಿಯಿಂದ ನೀಡಿರುವ ಬೇಡಿಕೆಗಳನ್ನು ಈಡೇರಿಸದೆ ಇದ್ದಲ್ಲಿ ದಿನಾಂಕ:26-05-2025 ರಂದು ಸಾಂಧರ್ಬಿಕ ರಜೆ ಹಾಕಿ ನ್ಯಾಯಯುತ ಬೇಡಿಕೆ ಪಡೆಯುವ ಹಿತದೃಷ್ಟಿಯಿಂದ ಕೆಲಸ ಕಾರ್ಯಗಳನ್ನು ಅನಿರ್ಧಿಷ್ಟಾವಧಿಗೆ ಸ್ಥಗಿತಗೊಳಿಸಿ, ನ್ಯಾಯಯುತ ಬೇಡಿಕೆಗಾಗಿ ಅನಿವಾರ್ಯ ಕಾರಣಗಳಿಂದ ಹೋರಾಟವನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಯಿತು. |

ರಾಜ್ಯದ ಮಹಾನಗರ ಪಾಲಿಕೆ ನೌಕರರ ಸಂಘದ, ಎಲ್ಲಾ ಅಧ್ಯಕ್ಷರು ಹಾಗೂ ರಾಜ್ಯದ ಪೌರಸಂಘದ ಅಧ್ಯಕ್ಷರು ಕೋರಿಕೊಂಡಿರುವ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ಸಂಬಂಧ ಈ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ.ಈ ಹೋರಾಟಕ್ಕೆ ಶಿವಮೊಗ್ಗ ಮಹಾನಗರಪಾಲಿಕೆ ಹಾಗೂ ಜಿಲ್ಲೆಯ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ನೌಕರರು ಒಗ್ಗಟ್ಟಿನಿಂದ ಈ ಹೋರಾಟದಲ್ಲಿ ಭಾಗವಹಿಸಬೇಕೆಂದು ಗೋವಿಂದ ಕೋರಿದರು.

ಈ ಹೋರಾಟಕ್ಕೆ ಸಾರ್ವಜನಿಕರು, ವಿವಿಧ ಸಂಘಟನೆಗಳು ಹಾಗೂ ಪತ್ರಿಕಾ ಮಾಧ್ಯಮ, ದೃಶ್ಯ ಮಾಧ್ಯಮದವರು ಬೆಂಬಲ ವ್ಯಕ್ತಪಡಿಸಬೇಕಾಗಿ ಗೋವಿಂದ ವಿನಂತಿಸಿಕೊಂಡರು.

ಸುದ್ದಿಗೋಷ್ಠಿಯಲ್ಲಿ
ಉಪಾಧ್ಯಕ್ಷರಾದ ಪಿ.ಕುಮಾರ್, ಕಾರ್ಯದರ್ಶಿ ಟಿ.ಮೋಹನ್, ನಿರ್ದೇಶಕರಾದ ಎಸ್.ಜಿ.ಮಂಜಣ್ಣ, ಖಜಾಂಚಿ ಕೆ.ಮಂಜಣ್ಣ, ಪೆಂಚಾಲಯ್ಯ, ಮಧುನಾಯಕ, ಲೋಹಿತ್, ವಿಕಾಸ್, ರೇಣುಕಮ್ಮ, ವೆಂಕಟಮ್ಮ, ಸಂತೋಷ್ ಕುಮಾರ್, ವಸಂತ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.