ನಾಳೆ ಶಿವಮೊಗ್ಗದಲ್ಲಿ ಮಾಚಿ ಸಚಿವ ಬೇಗಾನೆ ರಾಮಯ್ಯನವರ ಪುಣ್ಯ ಸ್ಮರಣೆ : ಮುಖ್ಯಮಂತ್ರಿಗಳಾದಿಯಾಗಿ,ಸಚಿವ ಸಂಪುಟದ ಸಚಿವರು ಭಾಗಿ…..
ನಾಳೆ ಶಿವಮೊಗ್ಗದಲ್ಲಿ ಮಾಚಿ ಸಚಿವ ಬೇಗಾನೆ ರಾಮಯ್ಯನವರ ಪುಣ್ಯ ಸ್ಮರಣೆ :
ಮುಖ್ಯಮಂತ್ರಿಗಳಾದಿಯಾಗಿ,ಸಚಿವ ಸಂಪುಟದ ಸಚಿವರು ಭಾಗಿ…..
ಶಿವಮೊಗ್ಗ
ಇತ್ತೀಚೆಗೆ ನಿಧನರಾಗಿದ್ದ ಮಾಜಿ ಸಚಿವರು, ಕರ್ನಾಟಕ ರಾಜ್ಯ ಸರ್ಕಾರದ ಅನಿವಾಸಿ ಭಾರತೀಯ ನಿಗಮದ ಅಧ್ಯಕ್ಷೆ ಡಾ.ಆರತಿ ಕೃಷ್ಣರವರ ತಂದೆಯವರಾದ ಬೇಗಾನೆ ರಾಮಯ್ಯನವರ ಪುಣ್ಯಸ್ಮರಣೆ ಕಾರ್ಯಕ್ರಮವು ನಾಳೆ(ದಿ:18.05.2025ರ ಭಾನುವಾರ) ಬೆಳಿಗ್ಗೆ 11.00 ಘಂಟೆಗೆ ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ಕಾಸ್ಮೋ ಫ್ಯಾಮಿಲಿ ಕ್ಲಬ್ ನಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯನವರು ಭಾಗವಹಿಸಲ್ಲಿದ್ದಾರೆ. ಅಲ್ಲದೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಮಧುಬಂಗಾರಪ್ಪ, ಗೃಹಸಚಿವರಾದ ಜಿ.ಪರಮೇಶ್ವರ್, ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಇನ್ನಿತರ ಸಚಿವ ಸಂಪುಟದ ಸಚಿವರು, ಜಿಲ್ಲೆಯ ಹಾಗೂ ಹೊರಜಿಲ್ಲೆಯ ಶಾಸಕರುಗಳು, ವಿವಿಧ ನಿಗಮಗಳ ಅಧ್ಯಕ್ಷರುಗಳು, ಏಐಸಿಸಿ ಹಾಗೂ ಕೆಪಿಸಿಸಿ ಪದಾಧಿಕಾರಿಗಳು, ವಿವಿಧ ಪಕ್ಷದ ಮುಖಂಡರುಗಳು, ರಾಜ್ಯದ ವಿವಿಧ ಮಠಾಧೀಶರು, ಅವರ ಅಭಿಮಾನಿಗಳು ಭಾಗವಹಿಸುತ್ತಿದ್ದಾರೆ.
ಮಾಜಿ ಸಚಿವರಾದ ದಿ:ಬೇಗಾನೆ ರಾಮಯ್ಯನವರು ಕಾಂಗ್ರೆಸ್ ಪಕ್ಷದ ನಿಷ್ಟಾವಂತ ಹಿರಿಯ ನಾಯಕರಾಗಿದ್ದಲ್ಲದೇ, ಮಾಜಿ ಪ್ರಧಾನಿ ದಿ:ಇಂದಿರಗಾಂಧಿ ಕುಟುಂಬಕ್ಕೆ ಅತ್ಯಂತ ನಿಷ್ಟಾವಂತರಾಗಿದ್ದರು. ಇತ್ತೀಚೆಗೆ ಏಐಸಿಸಿ ನಾಯಕರಾದ ರಾಹುಲ್ ಗಾಂಧಿಯವರು ಡಾ.ಆರತಿ ಕೃಷ್ಣ ಇವರಿಗೆ ಸಂತಾಪ ಸೂಚಕ ಪತ್ರ ಬರೆದು ಶ್ರದ್ದಾಂಜಲಿ ಅರ್ಪಿಸಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದಾಗಿದೆ.