ಕೊಲೆ ಆರೋಪಿ ಮಂಜನ ಮೇಲೆ ಗುಂಡು ಹಾರಿಸಿದ ಹೊಳೆಹೊನ್ನೂರು ಇನ್ಸ್ ಪೆಕ್ಟರ್ ಲಕ್ಷ್ಮೀಪತಿ* *ಯಾರು ಈ ಮಂಜ?*
*ಕೊಲೆ ಆರೋಪಿ ಮಂಜನ ಮೇಲೆ ಗುಂಡು ಹಾರಿಸಿದ ಹೊಳೆಹೊನ್ನೂರು ಇನ್ಸ್ ಪೆಕ್ಟರ್ ಲಕ್ಷ್ಮೀಪತಿ*
*ಯಾರು ಈ ಮಂಜ?*
ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ತಲೆ ಮರೆಸಿಕೊಂಡಿದ್ದ ಆರೋಪಿಯ ಮೇಲೆ ಹೊಳೆಹೊನ್ನೂರು ಪೊಲೀಸರು ಗುಂಡು ಹಾರಿಸಿದ ಘಟನೆ ಇಂದು ನಡೆದಿದೆ.
ಗುಂಡಿನ ದಾಳಿಗೊಳಗಾದವನು ಮಂಜ. ಹೊಳೆಹೊನ್ನೂರು ಠಾಣೆಯ ಕೊಲೆ ಪ್ರಕರಣದ ಆರೋಪಿ.
ಅವನ ಇರುವಿಕೆಯ ಬಗ್ಗೆ ಮಾಹಿತಿ ಪಡೆದುಕೊಂಡ ಪೊಲೀಸ್ ಇನ್ಸ್‌ಪೆಕ್ಟರ್ ಲಕ್ಷ್ಮೀಪತಿ ಮತ್ತು ತಂಡ ಅವನನ್ನು ಹಿಡಿಯಲು ಪ್ರಯತ್ನಿಸಿದಾಗ ಅವನು ಪೊಲೀಸ್ ಸಿಬ್ಬಂದಿ ಪ್ರಕಾಶ್ ಮೇಲೆ ಹಲ್ಲೆ ನಡೆಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ.
ಆರೋಪಿಯನ್ನು ಹಿಡಿಯಲು ಮತ್ತು ಸಿಬ್ಬಂದಿಯನ್ನು ರಕ್ಷಿಸಲು ಇನ್ಸ್‌ಪೆಕ್ಟರ್ ಲಕ್ಷ್ಮೀಪತಿ ಆರೋಪಿ ಮಂಜನ ಮೇಲೆ ಗುಂಡು ಹಾರಿಸಿ ಬಂಧಿಸಿದ್ದಾರೆ.
ಕೆಲವು ದಿನಗಳ ಹಿಂದೆ ದಾಖಲಾದ ಹೇಮಣ್ಣನ ಕೊಲೆ ಪ್ರಕರಣದಲ್ಲಿ ಮಂಜ ಆರೋಪಿಯಾಗಿದ್ದ ಎಂದು ಎಸ್ ಪಿ ಮಿಥುನ್ ಕುಮಾರ್ ಹೇಳಿದ್ದಾರೆ.