ಸಿಕ್ಕಿಬಿದ್ದ ಭಯಾನಕ ಕಾಮುಕ;* *ಬರೋಬ್ಬರಿ 13 ಸಾವಿರ ಮಹಿಳೆಯರ ಅಶ್ಲೀಲ ಫೋಟೋ, ವಿಡಿಯೋ ಪತ್ತೆ*
*ಸಿಕ್ಕಿಬಿದ್ದ ಭಯಾನಕ ಕಾಮುಕ;*
*ಬರೋಬ್ಬರಿ 13 ಸಾವಿರ ಮಹಿಳೆಯರ ಅಶ್ಲೀಲ ಫೋಟೋ, ವಿಡಿಯೋ ಪತ್ತೆ*
ನಕಲಿ ಖಾತೆ ಸೃಷ್ಟಿಸಿ (Fake Accounts) ಮಹಿಳೆ ಹಾಗೂ ಯುವತಿಯರ ನಗ್ನ ಪೋಟೋ, ವಿಡಿಯೋಗಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ಪೋಸ್ಟ್ ಮಾಡುತ್ತಿದ್ದ ಮೋಸ್ಟ್ ವಾಂಟೆಡ್ ಕಾಮುಕ ಕೊನೆಗೂ ಬಳ್ಳಾರಿಯ (Bellary) ಸಂಡೂರಿನಲ್ಲಿ (Sandur) ಸಿಕ್ಕಿಬಿದ್ದಿದ್ದಾನೆ.
ಶುಭಂ ಕುಮಾರ್ ಮನೋಜ್ ಪ್ರಸಾದ್ ಸಿಂಗ್(25) ಎನ್ನುವಾತ ನಕಲಿ ಖಾತೆಯಲ್ಲಿ ಬೆತ್ತಲೆ ಫೋಟೋ, ವಿಡಿಯೋ ಅಪ್ಲೋಡ್ ಮಾಡಿ ಮಹಿಳೆಯರ ಮಾನಹಾನಿ ಮಾಡುತ್ತಿದ್ದ.
ಈ ಸಂಬಂಧ ವಿದ್ಯಾರ್ಥಿನಿಯೋರ್ವಳು ನೀಡಿದ್ದ ದೂರಿನ ಮೇರೆಗೆ ಹಲವು ದಿನಗಳಿಂದ ತನಿಖೆ ನಡೆಸಿದ್ದ ಮುಂಬೈ ಪೊಲೀಸರು(Mumbai Police) ಗೂಗಲ್ ಸಹಾಯದಿಂದ ಸಂಡೂರಿನಲ್ಲಿ ಕಾಮುಕ ಶುಭಂನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನ ಮೊಬೈಲ್ ನಲ್ಲಿ ಬರೋಬ್ಬರಿ 13,000ಕ್ಕೂ ಹೆಚ್ಚು ಮಹಿಳೆಯರ ಅಶ್ಲೀಲ ಛಾಯಾಚಿತ್ರಗಳು ಮತ್ತು ವೀಡಿಯೊಗಳು ಪತ್ತೆಯಾಗಿದ್ದು, ಇವುಗಳನ್ನು ನೋಡಿ ಪೊಲೀಸರೇ ದಂಗಾಗಿದ್ದಾರೆ.
ದೆಹಲಿಯಲ್ಲಿ ಕಂಪ್ಯೂಟರ್ ಸಾಫ್ಟ್ವೇರ್ನಲ್ಲಿ ಡಿಪ್ಲೊಮಾ ಪಡೆದಿದ್ದ ಶುಭಂ, ಸಂಡೂರಿನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಇದರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿ ಮಹಿಳೆಯರು, ಯುವತಿಯರನ್ನು ಪರಿಚಯ ಮಾಡಿಕೊಂಡು ಬಳಿಕ ಅವರಿಗೆ ಬೆತ್ತಲೆ ವಿಡಿಯೋ ಕಾಲ್ ಮಾಡುವಂತೆ ಪೀಡಿಸುತ್ತಿದ್ದ. ಇದಕ್ಕೆ ಒಪ್ಪದಿದ್ದಾಗ ಅವರ ಹೆಸರಿನಲ್ಲೇ ನಕಲಿ ಖಾತೆ ಸೃಷ್ಟಿಸಿ ಅಶ್ಲೀಲ ಫೋಟೋ, ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದ.
ತನ್ನ ಹೆಸರಿನಲ್ಲಿ ನಕಲಿ ಖಾತೆ ರಚಿಸಿ ಅಶ್ಲೀಲ ವಿಡಿಯೋಗಳನ್ನು ಪೋಸ್ಟ್ ಮಾಡಿರುವ ಸಂಬಂಧ ವಿದ್ಯಾರ್ಥಿನಿಯೊಬ್ಬಳು ನೀಡಿದ್ದ ದೂರು ದಾಖಲಿಸಿಕೊಂಡ ಬಳಿಕ ಮುಂಬೈ ಪೊಲೀಸರು ತನಿಖೆ ಕೈಗೊಂಡಿದ್ದರು. ಈ ಪ್ರಕರಣ ಸಂಬಂಧ ಗೂಗಲ್ನಿಂದ ತಾಂತ್ರಿಕ ಮಾಹಿತಿ ಸಂಗ್ರಹಿಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಶುಭಂ 10 ನಕಲಿ ಖಾತೆಗಳನ್ನು ಮತ್ತು 90ಕ್ಕೂ ಹೆಚ್ಚು ಇ-ಮೇಲ್ ಐಡಿಗಳನ್ನು ಸೃಷ್ಟಿಸಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ.