ಕೇಂದ್ರದಿಂದ ‘ಸಹಕಾರ ಟ್ಯಾಕ್ಸಿ’;* *ಚಾಲಕರಿಗೆ ಬಂಪರ್* *ಆದಾಯದಲ್ಲಿ ಸಿಂಹಪಾಲು, ಜೊತೆಗೆ ಷೇರುಪಾಲು* ಕರ್ನಾಟಕಕ್ಕೆ ಯಾವಾಗ ಬರಲಿದೆ ಸಹಕಾರ ಟ್ಯಾಕ್ಸಿ?

*ಕೇಂದ್ರದಿಂದ ‘ಸಹಕಾರ ಟ್ಯಾಕ್ಸಿ’;*

*ಚಾಲಕರಿಗೆ ಬಂಪರ್*

*ಆದಾಯದಲ್ಲಿ ಸಿಂಹಪಾಲು, ಜೊತೆಗೆ ಷೇರುಪಾಲು*

ಕರ್ನಾಟಕಕ್ಕೆ ಯಾವಾಗ ಬರಲಿದೆ ಸಹಕಾರ ಟ್ಯಾಕ್ಸಿ?

ಸಹಕಾರಿ ತತ್ವದಲ್ಲಿ ಟ್ಯಾಕ್ಸಿ ಸೇವೆಯನ್ನು (Sahakar Taxi) ಆರಂಭಿಸಲಾಗುತ್ತಿದೆ. ವಿವಿಧ ರಾಜ್ಯಗಳ ಸಹಕಾರಿ ಸಂಸ್ಥೆಗಳ ನಡುವಿನ ಸಮನ್ವತೆಯಲ್ಲಿ ಈ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಯ ಪ್ರಯೋಗ ಭಾರತದಲ್ಲಿ ಇದೇ ಮೊದಲು. ಓಲಾ, ಊಬರ್​​ನ ಪ್ರಾಬಲ್ಯಕ್ಕೆ ಸವಾಲೊಡ್ಡುವ ನಿರೀಕ್ಷೆ ಇದೆ. ‘ಸಹಕಾರ್ ಟ್ಯಾಕ್ಸಿ ಕೋ ಆಪರೇಟಿವ್’ (Sahakar Taxi Co-operative) ಅನ್ನು ಬಹು ರಾಜ್ಯ ಸಹಕಾರಿ ಸಂಸ್ಥೆ ಕಾಯ್ದೆ (Multi-state cooperative societies act) ಅಡಿ ನೊಂದಾಯಿಸಲಾಗಿದೆ.

ಎನ್​​ಸಿಡಿಸಿ, ಅಮುಲ್, ನಬಾರ್ಡ್, ಇಫ್​​ಕೋ, ಎನ್​​ಡಿಡಿಬಿ ಇತ್ಯಾದಿ ದೇಶದ ಎಂಟು ಪ್ರಮುಖ ಸಹಕಾರಿ ಸಂಸ್ಥೆಗಳು ಈ ಸಹಕಾರಿ ಟ್ಯಾಕ್ಸಿ ಸೇವೆ ಯೋಜನೆಯನ್ನು ಬೆಂಬಲಿಸಿವೆ. ಆರಂಭಿಕ ಹಂತದಲ್ಲಿ ಈ ಪ್ರತಿಯೊಂದು ಸಹಕಾರಿ ಸಂಸ್ಥೆಯೂ ತಲಾ 10 ಕೋಟಿ ರೂ ಹೂಡಿಕೆಗೆ ಬದ್ಧವಾಗಿವೆ.

ಸಹಕಾರಿ ಟ್ಯಾಕ್ಸಿ ಸೇವೆಯು ಲಾಭದ ಉದ್ದೇಶಕ್ಕೆ ನಡೆಯುತ್ತಿಲ್ಲ. ಸಹಕಾರಿ ತತ್ವಗಳಲ್ಲಿ ನಡೆಯುವ ಈ ಟ್ಯಾಕ್ಸಿ ಸರ್ವಿಸ್​ನಲ್ಲಿ ಪ್ರಯಾಣಿಕರಿಗೆ ಹೊರೆಯಾಗುವಷ್ಟು ದುಬಾರಿ ದರ ಇರುವುದಿಲ್ಲ. ಓಲಾ, ಊಬರ್ ರೀತಿಯಲ್ಲಿ ಪ್ಲಾಟ್​ಫಾರ್ಮ್ ಫೀ ಪಡೆಯಲಾಗುವುದಿಲ್ಲ. ಪೀಕ್ ಅವರ್ ಹೆಸರಲ್ಲಿ ಹೆಚ್ಚಿನ ದರ ವಸೂಲಿ ಮಾಡಲಾಗುವುದಿಲ್ಲ. ಪ್ರಯಾಣದಿಂದ ಬರುವ ಬಹುತೇಕ ಆದಾಯವು ಚಾಲಕರಿಗೆ ಸಂದಾಯವಾಗುತ್ತದೆ.

ಚಾಲಕರಿಗೆ ಆದಾಯದಲ್ಲಿ ಸಿಂಹಪಾಲು ಸಿಕ್ಕಂತೆ ಸಹಕಾರಿ ಸಂಸ್ಥೆಯಲ್ಲಿ ಷೇರುಪಾಲು ಕೂಡ ಸಿಗುವ ಅವಕಾಶ ಇರುತ್ತದೆ. ಈ ಟ್ಯಾಕ್ಸಿ ಸರ್ವಿಸ್​​ನಲ್ಲಿ ಆರು ತಿಂಗಳು ಕೆಲಸ ಮಾಡಿದ ಬಳಿಕ ಚಾಲಕರು ಈ ಸಂಸ್ಥೆಯ ಸದಸ್ಯತ್ವ ಪಡೆಯಲು ಅವಕಾಶ ಇರುತ್ತದೆ. 100 ರೂ ಬೆಲೆಯಂತೆ ಐದು ಷೇರುಗಳನ್ನು ಖರೀದಿಸಿ ಸದಸ್ಯತ್ವ ಪಡೆಯಬಹುದು. ಚಾಲಕರಿಗೆ ಮತ್ತೊಂದು ಅನುಕೂಲವೆಂದರೆ, ಸೋಷಿಯಲ್ ಸೆಕ್ಯೂರಿಟಿ ಸ್ಕೀಮ್​​ಗಳ ಮೂಲಕ ಹಣಕಾಸು ಭದ್ರತೆ ಸಿಗುತ್ತದೆ.

ಸಹಕಾರಿ ಟ್ಯಾಕ್ಸಿ ಸೇವೆ ಇದೇ ಡಿಸೆಂಬರ್ ತಿಂಗಳಲ್ಲಿ ದೆಹಲಿ, ಗುಜರಾತ್ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಮೊದಲಿಗೆ ಆರಂಭವಾಗಬಹುದು. ಆ ಬಳಿಕ ದೇಶಾದ್ಯಂತ ಇದನ್ನು ವಿಸ್ತರಿಸುವ ಗುರಿ ಇದೆ. ಆರಂಭಿಕ ಹಂತದಲ್ಲಿ 400-500 ಚಾಲಕರು ಇದರಲ್ಲಿ ಕೈ ಜೋಡಿಸಿಕೊಳ್ಳುವ ನಿರೀಕ್ಷೆ ಇದೆ.