ಶಿವಮೊಗ್ಗದ ಲ್ಯಾಂಡ್ ಡೆವೆಲಪರ್ ಜಗದೀಶ ಅ್ಯಂಡ್ ಗ್ಯಾಂಗಿನ ರಾಕ್ಷಸೀ ಕೃತ್ಯ* *ಕ್ರಿಕೇಟ್ ಬ್ಯಾಟಿನಿಂದ ಅಮಾನವೀಯವಾಗಿ ಬಡಿದು ಲೂಟಿ ಮಾಡಿದ ಜಗದೀಶನ ಗ್ಯಾಂಗ್!* *ಡಾ.ಅನಿಲ್ ಪಾಟೀಲ್ ಅವತ್ತು ಬದುಕಿದ್ದೇ ಹೆಚ್ಚು!* *ಲ್ಯಾಂಡ್ ಡೆವೆಲಪರ್ ಜಗದೀಶನ ಕರ್ಮಕಾಂಡಗಳೆಷ್ಟು? ಪುರಲೆ ಲೇ ಔಟಿನ ಕಥೆ ಏನು?*
*ಶಿವಮೊಗ್ಗದ ಲ್ಯಾಂಡ್ ಡೆವೆಲಪರ್ ಜಗದೀಶ ಅ್ಯಂಡ್ ಗ್ಯಾಂಗಿನ ರಾಕ್ಷಸೀ ಕೃತ್ಯ*
*ಕ್ರಿಕೇಟ್ ಬ್ಯಾಟಿನಿಂದ ಅಮಾನವೀಯವಾಗಿ ಬಡಿದು ಲೂಟಿ ಮಾಡಿದ ಜಗದೀಶನ ಗ್ಯಾಂಗ್!*
*ಡಾ.ಅನಿಲ್ ಪಾಟೀಲ್ ಅವತ್ತು ಬದುಕಿದ್ದೇ ಹೆಚ್ಚು!*
*ಲ್ಯಾಂಡ್ ಡೆವೆಲಪರ್ ಜಗದೀಶನ ಕರ್ಮಕಾಂಡಗಳೆಷ್ಟು? ಪುರಲೆ ಲೇ ಔಟಿನ ಕಥೆ ಏನು?*

ಲ್ಯಾಂಡ್ ಡೆವಲಪರ್ ಜಗದೀಶನ ಅಟ್ಟಹಾಸ ಈಗ ಜಗತ್ತಿನ ಮುಂದೆ ಬಟಾ ಬಯಲಾಗಿದೆ. ಮನುಷ್ಯತ್ವ ಮೀರಿ, ಕಾನೂನು ತನ್ನದೊಂದು ಕೂದಲಿಗೆ ಸಮ ಎಂಬಂತೆ ಭಾವಿಸಿರುವ ದುಡ್ಡಿನ ಮದದಲ್ಲಿರುವ ಜಗದೀಶ ಮತ್ತವನ ಗ್ಯಾಂಗ್ ಥೇಟು ಸಿನಿಮಾ ರೀತಿಯಲ್ಲೇ ಓರ್ವ ವ್ಯಕ್ತಿಯ ಮೇಲೆ ತೀವ್ರ ಹಲ್ಲೆ ಮಾಡಿದೆ.
ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಜುಲೈ 8 ರಂದು ಲಿಖಿತ ದೂರೊಂದು ದಾಖಲಾಗಿದ್ದು, ಶಿವಮೊಗ್ಗದ ಕುಖ್ಯಾತ ಲ್ಯಾಂಡ್ ಡೆವೆಲಪರ್ ಜಗದೀಶ ಮತ್ತು ಅವನ ಗ್ಯಾಂಗಿನ ವಿರುದ್ಧ ಪೊಲೀಸರು ಎಫ್ ಐ ಆರ್ ದಾಖಲಾಗಿದೆ.
ಶಿವಮೊಗ್ಗದ ಪ್ಯಾಬಲ್ ಅಪಾರ್ಟ್ ಮೆಂಟಿನ ವಾಸಿ ಡಾ.ಅನಿಲ್ ಪಾಟೀಲ್ ತಮ್ಮ ಮೇಲೆ ಆಗಿರುವ ಭೀಕರ ಹಲ್ಲೆಯ ಬಗ್ಗೆ ದೂರಿನಲ್ಲಿ ವಿವರಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಸಿಕ್ಕಿರುವ ಸಿಸಿ ಟಿವಿ ಕ್ಯಾಮರಾದ ದೃಶ್ಯಗಳು ಭಯ ಹುಟ್ಟಿಸುವಂತಿವೆ. ಲ್ಯಾಂಡ್ ಡೆವೆಲಪರ್ ಜಗದೀಶನ ಕ್ರೂರತನಕ್ಕೆ ಸಾಕ್ಷಿ ಹೇಳುತ್ತಿವೆ.
*ಏನಿದೆ ಎಫ್ ಐ ಆರ್ ನಲ್ಲಿ?*
ಶಿವಮೊಗ್ಗದ ನಂಜಪ್ಪ ಆಸ್ಪತ್ರೆಯಲ್ಲಿ, ಡಾ.ಅನಿಲ್ ಪಾಟೀಲ್ ನೀಡಿದ ಹೇಳಿಕೆ ನೀಡಿದ್ದು, ಕೃಷಿನಗರದಲ್ಲಿ ಭಾರ್ಗವ ಎಂಬ ಹೆಸರಿನ ಲೇ ಔಟ್ ಮಾಡಿದ್ದು, ಅಲ್ಲೇ ಒಂದು ಆಫೀಸ್ ಮತ್ತು ಕಚೇರಿಯನ್ನು ನಿರ್ಮಾಣ ಮಾಡುತ್ತಿರುತ್ತಾರೆ. ಸ್ಥಳದಲ್ಲಿ ಸಿಸಿ ಕ್ಯಾಮರಾವನ್ನು ಸಹ ಹಾಕಿಸಿರುತ್ತಾರೆ. ದಿನಾ0ಕ:07/07/2025 ರಂದು ಮಧ್ಯಾಹ್ನ 02-30 ಗಂಟೆಯ ಸಮಯದಲ್ಲಿ ರಾಮಚಂದ್ರ ಎಂಬುವವರು ಪಿರ್ಯಾದುದಾರರ ನಿರ್ಮಾಣ ಹಂತದಲ್ಲಿರುವ ಮನೆಯ ಮುಂದೆ ಆಟೋವನ್ನು ನಿಲ್ಲಿಸಿದ. ಆಗ ಪಿರ್ಯಾದುದಾರರ ಲೇ ಔಟ್, ಮನೆಯನ್ನು ನೋಡಿಕೊಳ್ಳುವ ಲಕ್ಷ್ಮಿ ಎಂಬುವವರು ಮನೆಯ ಮುಂದೆ ಆಟೋವನ್ನು ನಿಲ್ಲಿಸಬೇಡಿ ಎಂದು ಹೇಳಿದ್ದಾರೆ. ಆಗ, ಕೆ.ರಾಮಚಂದ್ರನು ಲಕ್ಷ್ಮಿ ರವರಿಗೆ ಹೀನ ಮಾನ ಬೈದು ಅವಮಾನ ಮಾಡುತ್ತಿದ್ದಾಗ ಪಿರ್ಯಾದುದಾರರು ಸಹ ಸ್ಥಳಕ್ಕೆ ಹೋಗಿದ್ದು, ಆಗ ಪಿರ್ಯಾದುದಾರರು ಆಟೋವನ್ನು ನಿಲ್ಲಿಸಬೇಡ ಎಂದು ಹೇಳಿದ್ದಾರೆ. ಪಿರ್ಯಾದುದಾರರಿಗೂ ಸಹ ಹೀನಾಮಾನ ಬೈದಿದ್ದಾನೆ. ಈ ವಿಚಾರವಾಗಿ ಲಕ್ಷ್ಮಿ ರವರು ದಿನಾಂಕ: 07/07/2025 ರಂದು ಗ್ರಾಮಾಂತರ ಠಾಣೆಗೆ ದೂರು ನೀಡಿರುತ್ತಾರೆ.
ನಂತರ ದಿನಾಂಕ:08/07/2025 ರಂದು ಮಧ್ಯಾಹ್ನ 03-45 ಪಿಎಂ ಗಂಟೆ ಸಮಯದಲ್ಲಿ ಡಾ.ಅನಿಲ್ ಪಾಟೀಲ್ ಕೃಷಿನಗರದಲಿರುವ ಭಾರ್ಗವ ಲೇ ಔಟ್ ನಲ್ಲಿರುವ ತಮ್ಮ ನಿರ್ಮಾಣ ಹಂತದ ಮನೆಗೆ ಹೋಗಿದ್ದಾಗ ಅಲ್ಲಿಗೆ ಜಗದೀಶ, ಮಲ್ಲಿಕಾರ್ಜುನ, ರಾಘು ಹಾಗೂ ಇತರೆ ಇಬ್ಬರು ವ್ಯಕ್ತಿಗಳು ಪಿರ್ಯಾದುದಾರರ ಮನೆಗೆ ನುಗ್ಗಿದರು.ಅಕ್ರಮ ಪ್ರವೇಶ ಮಾಡಿ ಸಿಸಿ ಕ್ಯಾಮರಾ ಹಾಗೂ ಡಿವಿಆರ್ ನ್ನು ಕಿತ್ತುಹಾಕಿ ಎಲ್ಲದನ್ನು ಎತ್ತೊಯ್ಯುತ್ತಾರೆ ಆಗ ಪಿಯಾಮದಾರ ಡಾ. ಪಾಟೀಲರು, ನೀವೆಲ್ಲ ಯಾರು ಎಂದು ಕೇಳಿದಾಗ, ಜಗದೀಶ ಮತ್ತು ಗ್ಯಾಂಗ್, ರಾಮಚಂದ್ರರವರ ಮೇಲೆ ದೂರು ನೀಡಿದ್ದೀಯ. ಅವರು ನಮಗೆ ಮಾವನಾಗಬೇಕು ಎಂದು ಹೇಳಿ ಪಿರ್ಯಾದುದಾರರಿಗೆ ಅವಾಚ್ಯವಾಗಿ ಬೈದು, ನಮ್ಮ ಮಾವನಿಗೆ ಹೊಡೆಯುತ್ತೀಯಾ? ಈ ಲೇ ಔಟ್ ನಿಮ್ಮಪ್ಪಂದ ಅಂತಾ ಎಲ್ಲರೂ ಸೇರಿ ಕೈಗಳಿಂದ ಪಿರ್ಯಾದುದಾರರ ಮೈ ಕೈಗೆ ಗುದ್ದುತ್ತಾರೆ. ನಂತರ, ಜಗದೀಶನು ಕ್ರಿಕೆಟ್ ಬ್ಯಾಟ್ ನಿಂದ ಪಿರ್ಯಾದುದಾರರ ಬೆನ್ನಿಗೆ ಮತ್ತು ಎರಡು ಕಾಲುಗಳಿಗೆ ಹೊಡೆದು ಪಿರ್ಯಾದುದಾರರ ಕೈಯಲ್ಲಿದ ಮೊಬೈಲ್ ಕಿತ್ತುಕೊಳ್ಳುತ್ತಾನೆ. ನಂತರ ದಪ್ಪನೆಯ ವ್ಯಕ್ತಿ ಪಿರ್ಯಾದುದಾರರ ಕೊರಳಿನಲ್ಲಿದ್ದ, ಬಂಗಾರದ ಸರವನ್ನು ಕಿತ್ತುಕೊಂಡಿದ್ದಾನೆ. ಆ ನಂತರ ಮಲ್ಲಿಕಾರ್ಜುನನು, ಸೂಳೆ ಮಗನೇ.. ಲೇ ಔಟ್ ಮಾಡುತ್ತೀಯಾ? ಈಗ ಮಾಡು ಮಗನೇ ಎಂದು ಪಿರ್ಯಾದುದಾರರಿಗೆ ಕೈಯೆತ್ತಿದಾಗ ಗಲಾಟೆ ಕೇಳಿ ಅಲ್ಲಿಗೆ ಬಂದ ಶ್ರೀನಿವಾಸ ಹಾಗೂ ಗಣೇಶ ರವರುಗಳು ಪಿರ್ಯಾದುದಾರರನ್ನು ಬಿಡಿಸಿಕೊಂಡಿದ್ದಾರೆ.
ನಂತರ ಜಗದೀಶನು ಕ್ರಿಕೇಟ್ ಬ್ಯಾಟನ್ನು ಅಲ್ಲಿಯೇ ಬಿಸಾಕಿ, ಸೂಳೆ ಮಗನೇ…ಇನ್ನೊಂದು ಸಾರಿ ನಮ್ಮ ತಂಟೆಗೆ ಬಂದರೇ ಜೀವ ಸಹಿತ ಬಿಡುವುದಿಲ್ಲ ಎಂದು ಹೇಳಿ ಬೈದು ಹೋಗಿದ್ದಾನೆ.
ಶ್ರೀನಿವಾಸ ಮತ್ತು ಗಣೇಶ್ ರವರು ಡಾ.ಪಾಟೀಲರನ್ನು , ಚಿಕಿತ್ಸೆಗೆ ನಂಜಪ್ಪ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆದ್ದರಿಂದ ನನ್ನ ಮನೆಗೆ ಅತಿಕ್ರಮ ಪ್ರವೇಶ ಮಾಡಿ, ಕಾಮರಾ ಕಿತ್ತು ಹಾಳುಮಾಡಿ, ನನಗೆ ಬೈದು ಬ್ಯಾಟಿನಿಂದ ಹೊಡೆದು ಮೊಬೈಲ್ ಮತ್ತು ಬಂಗಾರದ ಸರವನ್ನು ಹಾಗೂ ಡಿವಿಆರ್ ನ್ನು ಕಿತ್ತುಕೊಂಡು ಹೋದವರುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳ ಬೇಕೆಂದು ಡಾ.ಅನಿಲ್ ಪಾಟೀಲ್ ಕೋರಿದ್ದರ ಮೇರೆಗೆ ಎಫ್ ಐ ಆರ್ ದಾಖಲಾಗಿದೆ.