ಡಾ.ಹಸೀನಾ ಹೆಚ್.ಕೆ. ರವರಿಗೆ ಡಾ.ಎಂ.ಎಂ. ಕಲಬುರಗಿ ರಾಷ್ಟ್ರೀಯ ಸಂಶೋಧನಾ ಪುರಸ್ಕಾರ
ಡಾ.ಹಸೀನಾ ಹೆಚ್.ಕೆ ಇವರಿಗೆ ಡಾ.ಎಂ.ಎಂ. ಕಲಬುರಗಿ ರಾಷ್ಟ್ರೀಯ ಸಂಶೋಧನಾ ಪುರಸ್ಕಾರ
ಕುವೆಂಪು ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ಹಸೀನಾ ಹೆಚ್ ಕೆ ಇವರಿಗೆ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ,ಬೆಂಗಳೂರು ಇಲ್ಲಿನ ಕೇಂದ್ರ ಸಮಿತಿಯವರು ಪ್ರತಿ ವರ್ಷ ಕೊಡ ಮಾಡುವ ಸಾಹಿತ್ಯ ಮತ್ತು ಸಂಘಟನೆಯ ಪ್ರಶಸ್ತಿಯನ್ನು ಈ ಸಾರಿ ಡಾ.ಎಂ.ಎಂ.ಕಲಬುರಗಿ ರಾಷ್ಟ್ರೀಯ ಸಂಶೋಧನಾ ಪುರಸ್ಕಾರವನ್ನು ಡಾ.ಹಸೀನಾ ಹೆಚ್ ಕೆ ಇವರಿಗೆ ನೀಡಲಾಗಿದೆ. ಇವರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾಧ್ಯಕ್ಷರಾಗಿ ಕಳೆದ ಐದು ವರ್ಷಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಅನೇಕ ಸಾಹಿತ್ಯ ,ಸಂಶೋಧನಾ ಕಾರ್ಯಕ್ರಮಗಳನ್ನು ನಡೆಸಿರುತ್ತಾರೆ. ಇವರು ಶಿವಮೊಗ್ಗದಲ್ಲಿ ಪಂಚಭಾಷ ಕವಿಗೋಷ್ಟಿ,ಕವಿಕಾವ್ಯ ಸಂಭ್ರಮಗಳನ್ನು ಆಯೋಜಿಸಿ ವಿದ್ಯಾರ್ಥಿಗಳು ಮತ್ತು ಕವಿಗಳಿಗೆ ಮಾದರಿಯಾಗಿರುತ್ತಾರೆ. ಈ ನಿಟ್ಟಿನಲ್ಲಿ ಇವರು ಕನ್ನಡ ಸಾಹಿತ್ಯ ಮತ್ತು ಭಾಷೆಯ ಬೆಳವಣಿಗೆಗೆ ನೀಡುತ್ತಿರುವ ಇವರ ಸೇವೆಯನ್ನು ಪರಿಗಣಿಸಿ ಈ ಸಾರಿಯ ಡಾ.ಎಂ.ಎಂ. ಕಲಬುರಗಿ ರಾಷ್ಟ್ರೀಯ ಸಂಶೋಧನಾ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ ಎಂದು ವೇದಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಕೊಟ್ರೇಶ್ ಎಸ್ ಉಪ್ಪಾರ್ ಇವರು ಪ್ರಕಟನೆಯಲ್ಲಿ ತಿಳಿಸಿರುತ್ತಾರೆ