ಕೃಷಿ ವಿದ್ಯಾರ್ಥಿಗಳಿಂದ ರಸಗುಲ್ಲ ಹಾಗೂ ರಸಮಲೈ ತಯಾರಿಕೆ..!
ಕೃಷಿ ವಿದ್ಯಾರ್ಥಿಗಳಿಂದ ರಸಗುಲ್ಲ ಹಾಗೂ ರಸಮಲೈ ತಯಾರಿಕೆ..!
ಶಿಕಾರಿಪುರ ತಾಲ್ಲೂಕಿನ ನೆಲವಾಗಿಲು ಗ್ರಾಮದಲ್ಲಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿಯ ಅಂತಿಮ ವರ್ಷದ ವಿದ್ಯಾರ್ಥಿಗಳು ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿಯಲ್ಲಿ ಕುರಿತು ಗುಂಪು ಚರ್ಚೆ ಹಾಗೂ ಪದ್ಧತಿ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ರಸಗುಲ್ಲ ಮತ್ತು ರಸಮಲೈ ಎಂದರೆ ಏನು,ಹೇಗೆ ಮಾಡುವುದು ಹಾಗೂ ಅದರ ಪ್ರಯೋಜನಗಳನ್ನು ತಿಳಿಸಿದರು.
ರಸಗುಲ್ಲ ಒಂದು ಹಾಲಿನ ಮೌಲ್ಯವರ್ಧನೆಯಾಗಿದೆಇದನ್ನು ತಯಾರಿಸಲು ಹಾಲನ್ನು ಕುದಿಸಿ ಅದಕ್ಕೆ ನಿಂಬೆ ಹಣ್ಣಿನ ರಸವನ್ನು ಅಥವಾ ವಿನೇಗರ್ ಹಾಕಿ ಕುದಿಸಬೇಕು ತದನಂತರ ಹಾಲು ಒಡೆಯುತ್ತದೆ ಅದನ್ನ ಸೋಸಿ ನೀರಿನ ಅಂಶ ಹೋಗುವವರೆಗೂ ಕಾಟನ್ ಬಟ್ಟೆಯಿಂದ ಹಿಂಡಬೇಕು ನಂತರ ಸ್ವಲ್ಪ ಹೊತ್ತು ಬಿಟ್ಟು ಅದನ್ನ ಚೆನ್ನಾಗಿ ಮೈದಾ ಹಿಟ್ಟು ಹಾಕಿ ನಾದಬೇಕು ನಂತರ ಉಂಡೆ ಮಾಡಬೇಕು ಅವುಗಳನ್ನು ಸಕ್ಕರೆ ಪಾಕದಲ್ಲಿ ಹಾಕಿ ಸ್ವಲ್ಪ ಸಮಯ ಬಿಡಬೇಕು ನಂತರ ಆರಿಸಬೇಕು. ರಸಗುಲ್ಲ ಪ್ರೊಟೀನ್ ಮತ್ತು ಆರೋಗ್ಯಕರ ಫ್ಯಾಟ್ಸ ಗಳಿಂದ ತುಂಬಿದೆ ಹಾಗೂ ಇದರ ಮೌಲ್ಯ ಒಂದು ಕೇಜಿ ಗೆ ಸುಮಾರು 150 ರೂಪಾಯಿಗಳು ಹಾಗೂ 1 ಲೀಟರ್ ಹಾಲಿಗೆ 200 ಗ್ರಾಂ ರಸಗುಲ್ಲ ತಯಾರಿಸಬಹುದು ಎಂಬುದನ್ನು ನಮಗೆ ಪದ್ಧತಿ ಪ್ರಾತ್ಯಕ್ಷಿಕೆ ಮುಖಾಂತರ ತೋರಿಸಿಕೊಟ್ಟರು.
ರಸಮಲೈ ಒಂದು ಹಾಲಿನ ಮೌಲ್ಯವರ್ಧನೆಯಾಗಿದೆಇದನ್ನು ತಯಾರಿಸಲು ಹಾಲನ್ನು ಕುದಿಸಿ ಅದಕ್ಕೆ ನಿಂಬೆ ಹಣ್ಣಿನ ರಸವನ್ನು ಅಥವಾ ವಿನೇಗರ್ ಹಾಕಿ ಕುದಿಸಬೇಕು ತದನಂತರ ಹಾಲು ಒಡೆಯುತ್ತದೆ ಅದನ್ನ ಸೋಸಿ ನೀರಿನ ಅಂಶ ಹೋಗುವವರೆಗೂ ಕಾಟನ್ ಬಟ್ಟೆಯಿಂದ ಹಿಂಡಬೇಕು ನಂತರ ಸ್ವಲ್ಪ ಹೊತ್ತು ಬಿಟ್ಟು ಅದನ್ನ ಚೆನ್ನಾಗಿ ಮೈದಾ ಹಿಟ್ಟು ಹಾಕಿ ನಾದಬೇಕು ನಂತರ ಚಪ್ಪಟೆ ಆಕಾರದಲ್ಲಿ ಮಾಡಬೇಕು ಅವುಗಳನ್ನು ಸಕ್ಕರೆ ಪಾಕದಲ್ಲಿ ಹಾಕಿ ಸ್ವಲ್ಪ ಸಮಯ ಬಿಡಬೇಕು ನಂತರ ಆರಿಸಬೇಕು.ಹಾಗೆಯೇ ಒಂದು ಪಾತ್ರೆಯಲ್ಲಿ ಹಾಲಿಗೆ ಬಾದಾಮ್ ಪುಡಿಯನ್ನು ಹಾಕಿ ಮಿಶ್ರಣ ಮಾಡಬೇಕು ಅದಕ್ಕೆ ಚಪ್ಪಟೆ ಆಕಾರದ ರಸಮಲೈಯನ್ನು ಹಾಕಬೇಕು.ಇದು ಪ್ರೊಟೀನ್ ಮತ್ತು ಆರೋಗ್ಯಕರ ಫ್ಯಾಟ್ಸ ಗಳಿಂದ ತುಂಬಿದೆ ಹಾಗೂ ಇದರ ಮೌಲ್ಯ ಒಂದು ಕೇಜಿ ಗೆ ಸುಮಾರು 200 ರೂಪಾಯಿಗಳು ಹಾಗೂ 1 ಲೀಟರ್ ಹಾಲಿಗೆ 200 ಗ್ರಾಂ ರಸಮಲೈ ತಯಾರಿಸಬಹುದು ಎಂಬುದನ್ನು ನಮಗೆ ಪದ್ಧತಿ ಪ್ರಾತ್ಯಕ್ಷಿಕೆ ಮುಖಾಂತರ ತೋರಿಸಿಕೊಟ್ಟರು.
ನೆಲವಾಗಿಲಿನ ಜನರು ಈ ಎರಡು ಪದಾರ್ಥವನ್ನು ಮೆಚ್ಚಿದರು ಹಾಗೂ ಮಹಿಳೆಯರು ಮನೆಯಲ್ಲೇ ಮಾಡಿ ವಾಣಿಜ್ಯೋದ್ಯಮಿ ಯಾಗಬಹುದು. ಇದು ಲಾಭದಾಯಕವಾಗಿದೆ ಮತ್ತು ಸ್ವಚ್ಛತೆಯಿಂದ ಮಾಡುವುದರಿಂದ ಆರೋಗ್ಯಕರವಾಗಿದೆ ಎಂದು ವಿವರಿಸಿದರು.
ಈ ಕಾರ್ಯಕ್ರಮದಲ್ಲಿ ಊರಿನ ಗ್ರಾಮಸ್ಥರು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.