ಆಕಳ ಕೆಚ್ಚಲು ಕೊಯ್ತ ಪ್ರಕರಣ; ಶಾಸಕ ಚೆನ್ನಿ ಗೋಶಾಲೆ ರಾಜಕಾರಣ ಬಿಚ್ಚಿಟ್ಟ ಕಾಂಗ್ರೆಸ್ ಮುಖಂಡ, 2023 ರ ವಿಧಾನಸಭಾ ಅಭ್ಯರ್ಥಿ ಹೆಚ್.ಸಿ.ಯೋಗೀಶ್

ಆಕಳ ಕೆಚ್ಚಲು ಕೊಯ್ತ ಪ್ರಕರಣ;
ಶಾಸಕ ಚೆನ್ನಿ ಗೋಶಾಲೆ ರಾಜಕಾರಣ ಬಿಚ್ಚಿಟ್ಟ
ಕಾಂಗ್ರೆಸ್ ಮುಖಂಡ, 2023 ರ ವಿಧಾನಸಭಾ ಅಭ್ಯರ್ಥಿ ಹೆಚ್.ಸಿ.ಯೋಗೀಶ್

ಚಾಮರಾಜಪೇಟೆ ಪ್ರಕರಣ. ಶಾಸಕ ಚೆನ್ನಿ ಹೇಳಿಕೆ ಗಮನಿಸಿದ್ದೇನೆ. ಯಾರೇ ಈ ಕೃತ್ಯ ಮಾಡಿದರೂ ಅಮಾನವೀಯ, ಖಂಡನೀಯ. ಹಸು ಗೋಮಾತೆ ಎಂಬುದರಲ್ಲಿ ಅನುಮಾನವಿಲ್ಲ.

ವೆಟರ್ನರಿ ಇಲಾಖೆಯಿಂದ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಸರ್ಕಾರದಿಂದ 30 ಅಂಶದ ಕಾರ್ಯಕ್ರಮಗಳೂ ನಡೆಯುತ್ತಿವೆ.
ಶಾಸಕ ಚೆನ್ನಿಯವರೇ, ಪಶು ಇಲಾಖೆಯ ರಿವ್ಯೂ ಮೀಟಿಂಗ್ ಎಷ್ಟು ಮಾಡಿದ್ದೀರಿ? ನೀವು ಹೇಳಲೇಬೇಕು.

ಕಾರ್ಪೊರೇಷನ್ನಿನಿಂದ ಗೋಶಾಲೆಗೆ 50 ಲಕ್ಷ ಇಟ್ಟಿದ್ದು ನೆನಪಿಲ್ಲವೇ? ಶಾಂತಿನಗರದಲ್ಲಿ ಗುದ್ದಲಿಪೂಜೆ ಮಾಡಿದ್ದೀರಿ. ಗೋಶಾಲೆ ಆಗಿದೆಯಾ? ಪ್ರಪ್ರಥಮ ಗೋಶಾಲೆಗೆ ಜಾಗಕೊಟ್ಟಿದ್ದು ಕಾಂಗ್ರೆಸ್ ಶಾಸಕ ಹೆಚ್.ಎಂ.ಸಿ., ಮತ್ತು ಕೆ ಬಿ ಪ್ರಸನ್ನ ಕುಮಾರ್ ಅನುದಾನ ನೀಡಿದ್ದಾರೆ.

ಈಶ್ವರಪ್ಪ, ಚೆನ್ನಿ ಎಷ್ಟು ಗೋಶಾಲೆಗಳಿಗೆ ಅವಕಾಶ ಕೊಟ್ಟಿದ್ದೀರಿ? ಹೊಸನಗರದ ಸರ್ಕಾರಿ ಗೋಶಾಲೆ ಮುಚ್ಚಿದೆ. ಈ ಶಾಲೆ ಆಗಿದ್ದು ಬಿಜೆಪಿ ಶಾಸಕ ಹರತಾಳು ಹಾಲಪ್ಪ ಕಾಲದಲ್ಲಿ. ಆದರೂ ಯಾಕೆ ಮುಚ್ಚಿದೆ? ಹಸುವಿನ ಹೆಸರಲ್ಲಿ ಮತ ಎತ್ತೋದಷ್ಟೇ.

ಸರ್ಕಾರದ ವಿರುದ್ಧ ಮಾತಾಡ್ತಾ ಕೆಟ್ಟದಾಗಿ ಮಾತಾಡಿದ್ದಾರೆ ಶಾಸಕ ಚೆನ್ನಿ. ನೀವು ನಿಮ್ಮ ಅಧಿಕಾರಾವಧಿಯಲ್ಲಿ ಎಷ್ಟು ಗೋಶಾಲೆಗಳಿಗೆ ಅನುದಾನ ಕೊಟ್ಟಿದ್ದೀರಿ ಅಂತ ಗಂಡಸ್ತನದಿಂದ ಹೇಳಿ.

2 ಕೋಟಿ ಉದ್ಯೋಗ, 15 ಲಕ್ಷ ಸೇರಿದಂತೆ ಹಲವು ಭರವಸೆ ಕೊಟ್ಟು ನಿಭಾಯಿಸದ ಪ್ರಧಾನಿ XYZ ಅಥವಾ ಗಂಡಸರಾ?

ಆಕಳ ಕೆಚ್ಚಲು ಪ್ರಕರಣದ ಆರೋಪಿ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಿ.ಆತ ಹುಚ್ಚನೇ ಇರಲಿ…ಸಾಯುವವರೆಗೆ ಜೈಲಲ್ಲಿ ಹಾಕಿ.

ಇ- ಸ್ವತ್ತು ವಿಚಾರವಾಗಿ ರಿವ್ಯೂ ಮಾಡಿ ಪ್ರತಿದಿನ. ಎಲ್ಲದಕ್ಕೂ ಇ- ಸ್ವತ್ತು ಅನಿವಾರ್ಯವಾಗಿದೆ. ಸಚಿವರಿಗೂ ಸಮಸ್ಯೆ  ಗಮನಕ್ಕೆ ತಂದಿದ್ದೇನೆ. ಆರೋಪಿತ ಅಧಿಕಾರಿಗಳನ್ನು ಬದಲಾಯಿಸಲಾಗಿದೆ.

ಕಾರ್ಪೊರೇಷನ್ ಇನ್ನೂ ದೊಡ್ಡದಾಗಲಿದೆ. ಕಾಂಗ್ರೆಸ್ ಕಾಲದಲ್ಲೇ ಕಾರ್ಪೊರೇಷನ್ ನಿರ್ಮಾಣ ಆಗಿದ್ದು.

ಉಪಸ್ಥಿತಿ-
ಶಿವಕುಮಾರ್, ವಿಶ್ವನಾಥ ಕಾಶಿ, ವಿಜಯಲಕ್ಷ್ಮಿ ಪಾಟೀಲ್, ಮಧು, ಎಸ್ ಪಿ ಶೇಷಾದ್ರಿ, ಚಂದ್ರಶೇಖರ್ ಸೇರಿದಂತೆ ಹಲವರು…