ಹೊಸಳ್ಳಿ ಜಿಕ್ರುಲ್ಲಾ ಮರ್ಡರ್ ಕೇಸ್;**ಮಿಳಘಟ್ಟದ ಶಹಬಾಜ್ ಶರೀಫ್(20), ಟೆಂಪೋಸ್ಟ್ಯಾಂಡಿನ ವಸೀಂ ಅಕ್ರಂ @ ಚೆ ಉಂಗ್ಲಿ(20), ಬುದ್ಧನಗರದ ವಸೀಂ ಅಕ್ರಂ @ ಕಾಲಾ ವಸೀಂ(20), ಮುರಾದ್ ನಗರದ ಫಯಾಜ್ ಉಲ್ಲಾ ರೆಹಮಾನ್ @ ರುಮಾನ್(23) ಗೆ ಜೀವಾವಧಿ ಶಿಕ್ಷೆ*
*ಹೊಸಳ್ಳಿ ಜಿಕ್ರುಲ್ಲಾ ಮರ್ಡರ್ ಕೇಸ್;*
*ಮಿಳಘಟ್ಟದ ಶಹಬಾಜ್ ಶರೀಫ್(20), ಟೆಂಪೋಸ್ಟ್ಯಾಂಡಿನ ವಸೀಂ ಅಕ್ರಂ @ ಚೆ ಉಂಗ್ಲಿ(20), ಬುದ್ಧನಗರದ ವಸೀಂ ಅಕ್ರಂ @ ಕಾಲಾ ವಸೀಂ(20), ಮುರಾದ್ ನಗರದ ಫಯಾಜ್ ಉಲ್ಲಾ ರೆಹಮಾನ್ @ ರುಮಾನ್(23) ಗೆ ಜೀವಾವಧಿ ಶಿಕ್ಷೆ*
ಹೊಸಳ್ಳಿಯ ಕಾರ್ ಮೆಕ್ಯಾನಿಕ್ ಜಿಕ್ರುಲ್ಲಾ(28)ನನ್ನು ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಮಾಡಿದ್ದ ನಾಲ್ವರಿಗೆ ಶಿವಮೊಗ್ಗದ ಎರಡನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ಮತ್ತು ತಲಾ 30 ಸಾವಿರ ರೂ.,ಗಳ ದಂಡ ವಿಧಿಸಿ ಆದೇಶ ಮಾಡಿದೆ.
ಮಿಳಘಟ್ಟದ ಶಹಬಾಜ್ ಶರೀಫ್(20), ಟೆಂಪೋಸ್ಟ್ಯಾಂಡಿನ ವಸೀಂ ಅಕ್ರಂ @ ಚೆ ಉಂಗ್ಲಿ(20), ಬುದ್ಧನಗರದ ವಸೀಂ ಅಕ್ರಂ @ ಕಾಲಾ ವಸೀಂ(20), ಮುರಾದ್ ನಗರದ ಫಯಾಜ್ ಉಲ್ಲಾ ರೆಹಮಾನ್ @ ರುಮಾನ್(23) ವಿರುದ್ಧ ಆರೋಪ ದೃಢಪಟ್ಟ ಹಿನ್ನೆಯಲ್ಲಿ ಶಿಕ್ಷೆಯಾಗಿದೆ.
ಫಲಕ್ ಶಾದಿಮಹಲ್ ಹತ್ತಿರ 2022ರ ಮಾರ್ಚ್ 19 ರಂದು ರಾತ್ರಿ ತನ್ನ ಸ್ನೇಹಿತರೊಂದಿಗೆ ಜಿಕ್ರುಲ್ಲಾ ಮಾತಾಡಿಕೊಂಡು ನಿಂತ ಸಂದರ್ಭದಲ್ಲಿ ಈ ನಾಲ್ವರು ಹರಿತ ಆಯುಧದಿಂದ ಹಲ್ಲೆ ಮಾಡಿದ್ದರು. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಮಾರನೇ ದಿನವೇ ಜಿಕ್ರುಲ್ಲಾ ಸಾವು ಕಂಡಿದ್ದ.
ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆಗಿನ ತನಿಖಾಧಿಕಾರಿ ಅಂಜನ್ ಕುಮಾರ್ ತನಿಖೆ ಕೈಗೊಂಡು ಆರೋಪಿತರ ವಿರುದ್ಧ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಶ್ರೀಮತಿ ಪಿ.ಓ.ಪುಷ್ಪಾ ವಾದಿಸಿದ್ದರು.
ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ನ್ಯಾಯಾಧೀಶರಾದ ಶ್ರೀಮತಿ ಪಲ್ಲವಿ ಬಿ.ಆರ್.ರವರು ಶಿಕ್ಷೆ ವಿಧಿಸಿದ್ದಾರೆ.