ಕವಿಸಾಲು

Gm ಶುಭೋದಯ💐💐

*ಕವಿಸಾಲು*
1.
ದೇವರೆಂಬುದು
ಮನುಷ್ಯನನ್ನು
ಬದಲಾಯಿಸಲು
ಆಗಲೇ ಇಲ್ಲ
ಇಂದಿಗೂ…

ಮನುಷ್ಯನೋ

ಎಷ್ಟೊಂದು ದೇವರುಗಳ
ಬದಲಾಯಿಸಿಬಿಟ್ಟ!

2.
ಯಾರು ಪ್ರಾರ್ಥಿಸುತ್ತಿದ್ದಾರೋ
ನನಗಾಗಿ?

ಮುಳುಗುವಾಗೆಲ್ಲ
ಎತ್ತೊಯ್ದು
ದಡದಲ್ಲಿ ನಿಲ್ಲಿಸಿಬಿಡುತ್ತೆ
ಸಮುದ್ರವೇ…

– *ಶಿ.ಜು.ಪಾಶ*
8050112067
(11/7/2025)