12 ವರ್ಷ ಬರಲೇ ಇಲ್ಲ ಕೆಲಸಕ್ಕೆ;* *ಆದರೂ ಈ ಪೊಲೀಸ್ ಕಾನ್ಸ್ ಟೆಬಲ್ ನಿರಂತರವಾಗಿ ಪಡೆದ ಸಂಬಳ 35 ಲಕ್ಷ!* *ಹೇಗೆ ನಡೆಯಿತು ಈ ಪವಾಡ?!*

*12 ವರ್ಷ ಬರಲೇ ಇಲ್ಲ ಕೆಲಸಕ್ಕೆ;*

*ಆದರೂ ಈ ಪೊಲೀಸ್ ಕಾನ್ಸ್ ಟೆಬಲ್ ನಿರಂತರವಾಗಿ ಪಡೆದ ಸಂಬಳ 35 ಲಕ್ಷ!*

*ಹೇಗೆ ನಡೆಯಿತು ಈ ಪವಾಡ?!*

12 ವರ್ಷಗಳ ಕಾಲ ಒಂದೇ ಒಂದು ದಿನವೂ ಕೆಲಸಕ್ಕೆ ಹೋಗದೆ ಪೊಲೀಸ್ ಪೇದೆಯೊಬ್ಬ 35 ಲಕ್ಷ ರೂಪಾಯಿ ವೇತನ ಪಡೆದ ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದ್ದು, ಈ ಪ್ರಕಣ ಇಲಾಖೆಯ ನಿರ್ಲಕ್ಷ್ಯ ಮತ್ತು ವ್ಯವಸ್ಥೆಯಲ್ಲಿನ ಲೋಪಗಳನ್ನು ಬಹಿರಂಗಪಡಿಸಿದೆ.

ಮಧ್ಯಪ್ರದೇಶದ ವಿದಿಶಾ ಜಿಲ್ಲೆಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. 2011ರಲ್ಲಿ ಪೊಲೀಸ್ ಕಾನ್ಸ್ಟೇಬಲ್ ಹುದ್ದೆಗೆ ನೇಮಕವಾಗಿದ್ದ ಅಭಿಷೇಕ್ ಎಂಬ ವ್ಯಕ್ತಿಯನ್ನು ಸಗರ ಪೊಲೀಸ್ ತರಬೇತಿ ಕೇಂದ್ರಕ್ಕೆ ಕಳುಹಿಸಲಾಗಿತ್ತು. ಆತ ತರಬೇತಿ ಕೇಂದ್ರಕ್ಕೆ ಹೋಗದೆ ಮನೆಗೆ ಮರಳಿದ್ದ. ಆದರೂ ವೇತನ ಮಾತ್ರ ಪ್ರತಿ ತಿಂಗಳು ಆತನ ಬ್ಯಾಂಕ್ ಖಾತೆಗೆ ಜಮಾ ಆಗಿದೆ.

ಸಗರ ಪೊಲೀಸ್ ತರಬೇತಿ ಕೇಂದ್ರಕ್ಕೆ ಆತ ತರಬೇತಿಗೆ ಹೋಗಿಲ್ಲ ಮತ್ತು ನಿರಂತರವಾಗಿ ಆತನ ಖಾತೆಗೆ ಸಂಬಳ ಜಮಾ ಆಗುತ್ತಿರುವುದು ಯಾರ ಗಮನಕ್ಕೂ ಬಂದಿಲ್ಲ.

ಕರ್ತವ್ಯಕ್ಕೆ ಗೈರು ಹಾಜರಾದರೂ ಇಲಾಖೆಗೆ ಈ ಬಗ್ಗೆ ಮಾಹಿತಿ ನೀಡಿಲ್ಲ, ರಜೆಗೆ ಅರ್ಜಿಯನ್ನೂ ಸಲ್ಲಿಸಿಲ್ಲ. ಒಂದು ದಿನವೂ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡದಿದ್ದರೂ ಇಲಾಖೆಯಲ್ಲಿ ಆತನ ಹೆಸರು ದಾಖಲಾಗಿದೆ. ಮಾತ್ರವಲ್ಲ, 35 ಲಕ್ಷ ರೂ. ವೇತನ ಆತನ ಖಾತೆಗೆ ಜಮಾ ಆಗಿದೆ.

ಕಾನ್ಸ್ಟೇಬಲ್ ತನ್ನ ಸೇವಾ ದಾಖಲೆಗಳನ್ನು ಸ್ಪೀಡ್ ಪೋಸ್ಟ್ ಮೂಲಕ ಭೋಪಾಲ್ ಪೊಲೀಸ್ ಲೈನ್ಸ್ ಗೆ ಕಳುಹಿಸಿದ್ದಾನೆ. ಆದರೆ, ಇದ್ಯಾವುದನ್ನೂ ಪರಿಶೀಲಿಸದೆ ದಾಖಲೆಗಳನ್ನು ಸ್ವೀಕರಿಸಿ ಅನುಮೋದಿಸಲಾಗಿದೆ. ತರಬೇತಿ ಕೇಂದ್ರದಲ್ಲಿ ಯಾರೂ ಅವನ ಗೈರುಹಾಜರಿಯನ್ನು ಗಮನಿಸಿಲ್ಲ. ಇಲಾಖೆಯಲ್ಲಿ ಬೆಳಕಿಗೆ ಬಂದಿರುವ ಈ ಪ್ರಕರಣ ಹಲವರ ಹುಬ್ಬೇರುವಂತೆ ಮಾಡಿದೆ