ಶಿವಮೊಗ್ಗ ಶರಾವತಿ ನಗರದಲ್ಲಿ ಸಿಲಿಂಡರ್ ಸ್ಫೋಟ; ಗಾಯಗೊಂಡ ಕುಟುಂಬಕ್ಕೆ ಸಹಕರಿಸಿ ಧೈರ್ಯ ತುಂಬಿದ ಹೆಚ್.ಸಿ.ಯೋಗೇಶ್ ಮತ್ತು ತಂಡ

ಶಿವಮೊಗ್ಗ ಶರಾವತಿ ನಗರದಲ್ಲಿ ಸಿಲಿಂಡರ್ ಸ್ಫೋಟ;

ಗಾಯಗೊಂಡ ಕುಟುಂಬಕ್ಕೆ ಸಹಕರಿಸಿ ಧೈರ್ಯ ತುಂಬಿದ ಹೆಚ್.ಸಿ.ಯೋಗೇಶ್ ಮತ್ತು ತಂಡ

ಶಿವಮೊಗ್ಗ ಶರಾವತಿ ನಗರದ 1ನೇ ಅಡ್ಡ ರಸ್ತೆ ಮಸೀದಿ ಪಕ್ಕ ಓಣಿಯಲ್ಲಿ ಮೊಹಮದ್ ಪೀರ್ (49) ಅವರ ಮನೆಯಲ್ಲಿ ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡು ತೀವ್ರವಾಗಿ ಗಾಯಗೊಂಡ ಕುಟುಂಬದ ಆರೋಗ್ಯ ವಿಚಾರಿಸಿದ ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರ ಅಭ್ಯರ್ಥಿಯಾದ ಹಾಗೂ ಮಹಾನಗರಪಾಲಿಕೆ ಮಾಜಿ ಸದಸ್ಯರಾದ *ಹೆಚ್. ಸಿ. ಯೋಗೇಶ್* ರವರು ಧೈರ್ಯ ತುಂಬಿದರು.

ಗಾಯಾಳು ರವರ ಪತ್ನಿ ಸಾಹೇರ ಹಾಗೂ ಸೊಸೆ ಜಯೇಬಾ ಸಹ  ಗಾಯಗೊಂಡಿದ್ದು ಸ್ಥಳೀಯ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.  ಹೆಚ್. ಸಿ. ಯೋಗೇಶ್ ರವರು ಧೈರ್ಯ ತುಂಬಿ ಹೆಚ್ಚಿನ ಚಿಕಿತ್ಸೆಗೆ ನೆರವು ನೀಡಿದರು.

ಉತ್ತರ ಹಾಗೂ ದಕ್ಷಿಣ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಶಿವಕುಮಾರ್  ಹಾಗೂ ಕಲೀಮ್ ಪಾಷಾ ಹಾಗೂ ಮೆಗ್ಗಾನ್ ಆಸ್ಪತ್ರೆ ಮಾಜಿ ಸಲಹಾ ಸಮಿತಿ ಸದಸ್ಯರಾದ ಎಸ್. ಚಿನ್ನಪ್ಪ ಹಾಗೂ ಕಾಂಗ್ರೆಸ್ ಮುಖಂಡರಾದ ಬಾಬು,ಪವನ್ ಕುಮಾರ್, ವಾರ್ಡ್ ಅಧ್ಯಕ್ಷ  ನವೀನ್,  ಸನಾವುಲ್ಲಾ , ನಿಜಾಮ್ ,ಪವನ್, ಆಸಿಫ್ , ಆಜಮ್ ಉಪಸ್ಥಿತರಿದ್ದರು.