ಕವಿಸಾಲು
01
ಶಿವಮೊಗ್ಗ ಮೂಲದ ನ್ಯಾಮತಿ ಪೊಲೀಸ್ ಇನ್ಸ್ ಪೆಕ್ಟರ್ ರವಿಯವರಿಗೆ ಸೆಲ್ಯೂಟ್ ಅವಾರ್ಡ್* *ಏನಕ್ಕೆ ಕೊಟ್ರು ಅವಾರ್ಡ್?* *ಚಿನ್ನದ ಆಭರಣ ದರೋಡೆ ಪ್ರಕರಣದ ಕಥೆ ಏನು?*
*ಶಿವಮೊಗ್ಗ ಮೂಲದ ನ್ಯಾಮತಿ ಪೊಲೀಸ್ ಇನ್ಸ್ ಪೆಕ್ಟರ್ ರವಿಯವರಿಗೆ ಸೆಲ್ಯೂಟ್ ಅವಾರ್ಡ್*
*ಏನಕ್ಕೆ ಕೊಟ್ರು ಅವಾರ್ಡ್?*
*ಚಿನ್ನದ ಆಭರಣ ದರೋಡೆ ಪ್ರಕರಣದ ಕಥೆ ಏನು?*
ಶಿವಮೊಗ್ಗ ಮೂಲದ, ಶಿವಮೊಗ್ಗದಲ್ಲೇ ವಿನೋಬ ನಗರ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಆಗಿದ್ದ, ಈಗ ನ್ಯಾಮತಿ ಠಾಣೆಯ ಇನ್ಸ್ ಪೆಕ್ಟರ್ ರವಿಯವರಿಗೆ ಸೆಲ್ಯೂಟ್ ಅವಾರ್ಡ್ ನೀಡಲಾಗಿದೆ.
ಖ್ಯಾತ ಸುದ್ದಿ ವಾಹಿನಿ tv9 ಈ ಅವಾರ್ಡ್ ನೀಡಿದ್ದು, ಇದರ ಪ್ರಸಾರ ಇಂದು ಆಗಲಿದೆ.
ಗೋಲ್ಡನ್ ಮ್ಯಾನ್ ಅಂತಲೂ ಗೋಲ್ಡ್ ರಿಕವರಿ ಮ್ಯಾನ್ ಅಂತಲೂ ಖ್ಯಾತರಾಗಿರುವ ಇನ್ಸ್ ಪೆಕ್ಟರ್ ರವಿಯವರಿಗೆ ಹೀಗೇಕೆ ಕರೆಯಲಾಗುತ್ತದೆ?
ನ್ಯಾಮತಿಯ ಎಸ್ ಬಿ ಐ ಬ್ಯಾಂಕಿನ 13 ಕೋಟಿ ರೂ.,ಬೆಲೆಯ ಬಂಗಾರದ ಆಭರಣಗಳ ದರೋಡೆ ಪ್ರಕರಣ ಬೇಧಿಸಿ, ದರೋಡೆಕೋರರನ್ನು ಜೈಲು ಕಂಬಿಗಳ ಹಿಂದೆ ತಳ್ಳಿದ್ದರು. ಇದು ಸಾಕಷ್ಟು ಕುತೂಹಲ ಕೆರಳಿಸಿದ್ದ ಪ್ರಕರಣ.
ಈ ಪ್ರಕರಣ ಬೇಧಿಸಿದ ಸಾಧನೆಗಾಗಿ ಇನ್ಸ್ ಪೆಕ್ಟರ್ ರವಿಯವರಿಗೆ tv9 ಸೆಲ್ಯೂಟ್ ಪ್ರಶಸ್ತಿ ನೀಡಿ ಗೌರವಿಸಿದೆ.