ಜಮೀನುಗಳಿಗೆ ಹೋಗಲು ದಾರಿ ವಿಷಯವಾಗಿ ಗಮನ ಸೆಳೆದ ಶಾಸಕಿ ಶ್ರೀಮತಿ ಬಲ್ಕೀಶ್ ಬಾನು* *ಜನ್ಮ ಜನ್ಮಾಂತರದ ಸಮಸ್ಯೆಗೆ ಪರಿಹಾರ ಏನು?*
*ಜಮೀನುಗಳಿಗೆ ಹೋಗಲು ದಾರಿ ವಿಷಯವಾಗಿ ಗಮನ ಸೆಳೆದ ಶಾಸಕಿ ಶ್ರೀಮತಿ ಬಲ್ಕೀಶ್ ಬಾನು*
*ಜನ್ಮ ಜನ್ಮಾಂತರದ ಸಮಸ್ಯೆಗೆ ಪರಿಹಾರ ಏನು?*
ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲ್ಲೂಕಿನ ಸುಕ್ಷೇತ್ರ ಗೊಡಚಿ ಗ್ರಾಮದಲ್ಲಿ ಪರಿಶಿಷ್ಟ ಪಂಗಡಕ್ಕೆ ಸೇರಿದ ಇಬ್ಬರು ಯುವಕರನ್ನು ಮರಕ್ಕೆ ಕಟ್ಟಿ ಹಾಕಿ ಹಲ್ಲೆ ಮಾಡಿದ ಘಟನೆ ವರದಿಯಾಗಿದೆ. ಈ ಬಗ್ಗೆ ಸಾಮಾಜಿ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ.
ಹಲ್ಲೆ ಮಾಡಿದ ಮೇಲ್ವರ್ಗದ ಸಮುದಾಯದವರು ಎಂದು ದಾಖಲಾಗಿರುತ್ತದೆ. ಎಸ್‌ಟಿ ಸಮುದಾಯದ ಯುವಕರ ಮೇಲೆ ಹಲ್ಲೆ ಮಾಡಿರುವ ಬಗ್ಗೆ ಕಟಕೋಳ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿ ದೂರು ದಾಖಲಾಗಿದೆ.
ಹಲ್ಲೆ ಮಾಡಿರುವ ಆರೋಪದಡಿ ಮೇಲ್ವರ್ಗದ ಸಮುದಾಯದ ಈರಣ್ಣ ಸಂಗಪ್ಪ ಪಾಕನಟ್ಟಿ, ಬಸನಗೌಡ ನಿಂಗನಗೌಡ ಪಾಟೀಲ್, ಪ್ರದೀಪ ಈರಣ್ಣ ಪಾಕನಟ್ಟಿ, ನಿಂಗರಾಜ ಈರಪ್ಪ ಪಾಕನಟ್ಟಿ, ಸಚಿನ್ ದಾನಪ್ಪ ಪಾಕನಟ್ಟಿ, ಎಂಬುವವರ ವಿರುದ್ಧ ಕೊಲೆಯತ್ನ, ಮಾರಣಾಂತಿಕ ಹಲ್ಲೆ ಹಾಗೂ ಜಾತಿ ನಿಂದನೆ ದೂರು ದಾಖಲಾಗಿದೆ.
ಹಲ್ಲೆಗೊಳದಾದವರನ್ನು ಈರಣ್ಣ ವಿಠ್ಠಲ ನಾಯ್ಕರ ಹಾಗೂ ಲಕ್ಷ್ಮಣ ಮಲ್ಲಪ್ಪ ಚಿಪ್ಪಲಕಟ್ಟಿ ಎಂದು ಗುರುತಿಸಲಾಗಿದೆ. ಆಗಸ್ಟ್ 5 ರಂದೇ ಹಲ್ಲೆಗೊಳಗಾಗಿದ್ದು, ಇದು ತಡವಾಗಿ ಬೆಳಕಿಗೆ ಬಂದಿರುತ್ತದೆ. ಇದೊಂದು ಉದಾಹರಣೆ ಅಷ್ಟೆ.
ಮುಖ್ಯ ರಸ್ತೆ ಬದಿಯಲ್ಲಿರುವ ಜಮೀನುಗಳ ಮಾಲೀಕರು, ಹಿಂಬದಿ ಹೊಲಕ್ಕೆ ಹೋಗಿ ಉಳುಮೆ ಮಾಡಲು ದಾರಿ ಬಿಡದೆ ಇರುವುದು ರಾಜ್ಯದಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗಿ ಕಂಡು ಬಂದಿರುತ್ತಿವೆ ಎಂದು ವಿಧಾನ ಪರಿಷತ್ತಿನ ಗಮನ ಸೆಳೆದವರು ಪರಿಷತ್ ಸದಸ್ಯೆ ಶ್ರೀಮತಿ ಬಲ್ಕೀಶ್ ಬಾನು.
ಜಮೀನುಗಳಿಗೆ ಹೋಗಲು ದಾರಿ ಸಮಸ್ಯೆಗಳನ್ನು ಸ್ಥಳೀಯ ತಹಸೀಲ್ದಾರ್ ನೇತೃತ್ವದಲ್ಲಿ ಬಗೆಹರಿಸಬೇಕು. ಇಲ್ಲವೇ ಸರ್ಕಾರವೇ ಇದಕ್ಕೆ ಹೊಲದ ದಾರಿ ನಕ್ಷೆಯ ಮೂಲಕ ಹಿಂಬದಿ ಹೊಲಗಳ ದಾರಿಯನ್ನು ತೋರಿಸಲು ಆದೇಶಿಸಬೇಕೆಂದು ಶೂನ್ಯವೇಳೆಯಲ್ಲಿ ಸರ್ಕಾರವನ್ನು ಅವರು ಒತ್ತಾಯಿಸಿದರು.