ಕವಿಸಾಲು

Gm ಶುಭೋದಯ💐💐

*ಕವಿಸಾಲು*

1.
ಬೆನ್ನಿಗೆ ಹಾಕಿದ್ದ
ಚೂರಿಗಳನ್ನು
ಎಣಿಸಿದೆ…

ಅಪ್ಪಿಕೊಂಡಿದ್ದೆನಲ್ಲ
ಅಷ್ಟೇ
ಸಂಖ್ಯೆಯಲ್ಲಿತ್ತು!

2.
ಎಲ್ಲರಿಗೂ
ಒಳ್ಳೆಯದೇ
ಆಗಲಿ…

ಅದು ನನ್ನಿಂದ
ಆರಂಭವಾಗಲಿ!

– *ಶಿ.ಜು.ಪಾಶ*
8050112067
(9/9/2025)