ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ;ರಾಜಕೀಯ ಗುರು ಎಸ್ .ಎಂ.ಕೃಷ್ಣ ನಿಧನ ಬೇಸರದ ಸಂಗತಿನೂರು ಕೇಸ್ ಹಾಕಿದ್ರೂ ಹೆದರಲ್ಲ ನಾನು ಹೀಗೇ ಮಾತಾಡೋದು- ಧರ್ಮದ್ರೋಹಿಗಳ ವಿರುದ್ಧ! ಆಶ್ರಯ ಮನೆಗಳಲ್ಲಿ ಭ್ರಷ್ಟಾಚಾರ ಆಗಿದ್ರೆ ತನಿಖೆ ಮಾಡಿ 

ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಪತ್ರಿಕಾಗೋಷ್ಠಿ;

ರಾಜಕೀಯ ಗುರು ಎಸ್ .ಎಂ.ಕೃಷ್ಣ ನಿಧನ ಬೇಸರದ ಸಂಗತಿ

ನೂರು ಕೇಸ್ ಹಾಕಿದ್ರೂ ಹೆದರಲ್ಲ
ನಾನು ಹೀಗೇ ಮಾತಾಡೋದು- ಧರ್ಮದ್ರೋಹಿಗಳ ವಿರುದ್ಧ!


ರಾಜಕೀಯ ಗುರು ಎಸ್ ಎಂ ಕೃಷ್ಣ
1989 ರಲ್ಲಿ ಅವರು ಸಭಾಧ್ಯಕ್ಷರಾದಾಗ ನಾನು ಹೊಸ ಶಾಸಕನಾಗಿ ಹೋಗಿದ್ದೆ. ಆಗ ಅವರ ಕೊಠಡಿಗೆ ಹೋಗಿ ಹೊಸ ಸಭಾಧ್ಯಕ್ಷರಾದಾಗ ಅಭಿನಂದಿಸಿದ್ದೆ.

ಹಿಂದುಳಿದ ವರ್ಗದವರು ಶಿವಮೊಗ್ಗದಲ್ಲಿ ಗೆದ್ದ ಉದಾಹರಣೆಯೇ ಇಲ್ಲ ಎಂದಿದ್ದರು. ವಿಧಾನಸಭೆಯಲ್ಲಿ ಹೇಗೆ ಮಾತಾಡಬೇಕು? ಹೇಗೆ ಸಮಸ್ಯೆಗಳಿಗೆ ಸ್ಪಂದಿಸಬೇಕು…ಮಾರ್ಗದರ್ಶನ ಮಾಡಿದ್ದರು.

ವಾರದಲ್ಲಿ ಎರಡು ಸುಮೋಟೋ ಕೇಸಿನ ಎರಡು ನಾನ್ ಬೇಲಬಲ್ ವಾರಂಟ್ ಬಂದಿದೆ. ಕಾಂಗ್ರೆಸ್ ಗೆ ಇಂಥ ಕೆಟ್ಟ ಬುದ್ದಿ ಬಂತೋ? ಎಸ್ ಪಿ ಕಾಳಜಿಯಿಂದ ಇದಾಗಿದೆಯೋ ಗೊತ್ತಿಲ್ಲ.
ಮೊದಲನೇದು, ವಕ್ಫ್ ಆಸ್ತಿ ಸಮಸ್ಯೆ. ಈ ವಿಚಾರ ಅದೆಲ್ಲಿ ಹೋಗಿ ನಿಲ್ಲುತ್ತೋ ಗೊತ್ತಿಲ್ಲ. ಇವತ್ತಿಗೂ ಪಹಣಿ ಬರೆಯುವ ಕೆಲಸ ನಡೆಯುತ್ತಲೇ ಇದೆ. ಪಹಣಿಯಿಂದ ವಕ್ಫ್ ವಾಪಸ್ ನೀಡಿಲ್ಲ. ಗುಲ್ಬರ್ಗ ಜಿಲ್ಲೆಯ ದೇವಸ್ಥಾನವೊಂದರ ಪಹಣಿಯಷ್ಟೇ ಬದಲಾಗಿದ್ದು ಬಿಟ್ಟರೆ ಇನ್ನುಳಿದಂತೆ ಯಾವುದೂ ಬದಲಾಗಿಲ್ಲ.

ಎಸ್ ಪಿ ಹೇಳಬೇಕು- ನಾನೇನು ತಪ್ಪು ಹೇಳಿದ್ದೇನೆ ಅಂತ. ಮಲ್ಲಿಕಾರ್ಜುನ ಖರ್ಗೆ ಕೊಲ್ಲಿ ಎಂಬ ಮಾತಾಡಿದರೂ ಕೇಸು ದಾಖಲಾಗಿಲ್ಲ…ಯಾಕೆ?

ಬಾಂಗ್ಲಾದಲ್ಲಿ ಇಸ್ಕಾನ್ ಸಂಸ್ಥೆ ಮುಸ್ಲೀಮರಿಗೆ ಅನಾದಿ ಕಾಲದಿಂದಲೂ ಅನ್ನ ಹಾಕುತ್ತಾ ಬಂದಿದ್ದಾರೆ. ಅನ್ನ ಹಾಕಿದ ಮನೆಗೆ ಕನ್ನ ಹಾಕುವ ಮಾತಾಡಿದ್ದೆ. ಈಗಲೂ ಇಸ್ಕಾನ್ ದೇವಸ್ಥಾನಗಳ ನಾಶವಾಗುತ್ತಿದೆ. ಈ ಬಗ್ಗೆ ಎಸ್ ಡಿಪಿಐ, ಕಾಂಗ್ರೆಸ್ ಪ್ರತಿಭಟನೆ ಮಾಡಿ ಖಂಡಿಸಬೇಕಿತ್ತು. ಆದರೆ, ನನ್ನ ಮೇಲೆ ಸುಮೋಟೋ ಕೇಸ್ ಹಾಕಿದ್ದಾರೆ. ನನ್ನ ಮೇಲೆ ನೂರು ಕೇಸ್ ಹಾಕಿದ್ರೂ ಜಗ್ಗಲ್ಲ. ಕೇಸ್ ಹಾಕಿ ಹೆದರಿಸಿದ್ರೆ ಸುಮ್ಮನೆ ಕೂರುವುದಕ್ಕಾಗುತ್ತಾ? ದೇವಸ್ಥಾನಗಳ ಧ್ವಂಸ, ಸಾಧು ಸಂತರ ಕೊಲೆ ನೋಡ್ತಾ ಕೂರೋಕಾಗಲ್ಲ. ಒಳ್ಳೆಯ ಮುಸಲ್ಮಾನರ ಬಗ್ಗೆ ನಾನು ಮಾತಾಡಿಲ್ಲ.

ಹಿಂದುತ್ವ ಎಂಬುದು ರೋಗ ಅಂತ ಹೇಳಿದ ಇಂತೆಝಾ ಹೇಳಿದರೂ ಕಾಂಗ್ರೆಸ್, ಮುಸ್ಮೀಮರು ಖಂಡಿಸಲೇ ಇಲ್ಲ. ಮುಸ್ಲಿಂ ರೋಗ ಅಂತ ಹೇಳಿದ್ರೆ ಏನೆಲ್ಲ ಆಗಿರೋದು ಈ ವರೆಗೆ.

ಆಶ್ರಯ ಮನೆಗಳ ವಿಚಾರ ಮತ್ತೆ ಚರ್ಚೆಗೆ ಬಂದಿದೆ. ಸಭೆ ಮುಂದೂಡಲಾಗಿದೆ. ನಾನು ಮಂತ್ರಿ ಆದಾಗ ನೀರು, ಕಾಂಕ್ರಿಟ್ ಕೆಲಸ ಮಾಡಿದ್ದೇನೆ. ಮನೆ ನಿರ್ಮಾಣದ ಗುರಿ ಕೆಲಸ ಮುಗಿದಿದೆ. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಮಾತುಗಳನ್ನೂ ನೋಡಿದ್ದೇನೆ. ಶಾಸಕರ ನಡೆ ಸರಿ ಇದೆ. ಮಧು ಬಂಗಾರಪ್ಪ ಮತ್ತು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಮಾತುಗಳ ಬಗ್ಗೆ ಮಾತಾಡೋಕೆ ಹೋಗಲ್ಲ. ಒಂದು ದಿನಾಂಕ ನಿಗದಿ ಹಾಕಿ ಸಮಸ್ಯೆ ಬಗೆಹರಿಸಿದರೆ ಒಳ್ಳೆಯದು.

ಭ್ರಷ್ಟಾಚಾರ ಆಗಿದ್ರೆ ಕೂಡಲೇ ತನಿಖೆ ಮಾಡಿ. ಯಾರೇ ಭ್ರಷ್ಟಾಚಾರಿಗಳಿದ್ರೂ ತನಿಖೆ ಮಾಡಿ. ಸುಮ್ಮನೆ ಮಾತಾಡೋದಲ್ಲ. ಬಡವರಿಗೆ ಅನ್ಯಾಯ ಮಾಡಬೇಡಿ.

ಉಪಸ್ಥಿತಿ; ಈ.ವಿಶ್ವಾಸ್, ಬಾಲು, ಜಾಧವ್, ಶಿವಕುಮಾರ್, ರುದ್ರಯ್ಯ, ಸತ್ಯನಾರಾಯಣ, ಮಹಾಲಿಂಗಶಾಸ್ತ್ರಿ…