ಅಪ್ರಾಪ್ತ ಗರ್ಭಧಾರಣೆಯ ಪ್ರಕರಣಗಳ ಆತಂಕಕಾರಿ ಏರಿಕೆ – ತಕ್ಷಣದ ಕ್ರಮಕ್ಕೆ ಆಗ್ರಹ; ಶಾಸಕ ಡಿ.ಎಸ್. ಅರುಣ್*
ಅಪ್ರಾಪ್ತ ಗರ್ಭಧಾರಣೆಯ ಪ್ರಕರಣಗಳ ಆತಂಕಕಾರಿ ಏರಿಕೆ – ತಕ್ಷಣದ ಕ್ರಮಕ್ಕೆ ಆಗ್ರಹ; ಶಾಸಕ ಡಿ.ಎಸ್. ಅರುಣ್*

ಶಿವಮೊಗ್ಗ ಜಿಲ್ಲೆಯಲ್ಲಿ ಅಪ್ರಾಪ್ತ ವಯಸ್ಕ ಬಾಲಕಿಯರ ಗರ್ಭಧಾರಣೆ ಪ್ರಕರಣಗಳು ಆತಂಕಕಾರಿ ರೀತಿಯಲ್ಲಿ ಹೆಚ್ಚುತ್ತಿರುವುದು ಗಂಭೀರ ಚಿಂತೆಗೆ ಕಾರಣವಾಗಿದೆ,ರಾಜ್ಯದ ಇತರ ಜಿಲ್ಲೆಗಳಲ್ಲಿಯೂ ಇದೇ ಸಮಸ್ಯೆ ವೇಗವಾಗಿ ವ್ಯಾಪಿಸುತ್ತಿದೆ. ಇದು ಸಮಾಜದ ಆರೋಗ್ಯ, ಭದ್ರತೆ ಮತ್ತು ನೈತಿಕತೆಗೆ ಗಂಭೀರ ಸವಾಲು ಎಬ್ಬಿಸಿದೆ ಎಂದು ಮಾನ್ಯ ವಿಧಾನ ಪರಿಷತ್ ಸದಸ್ಯರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿ ಡಿ.ಎಸ್. ಅರುಣ್ ಅವರು ತಿಳಿಸಿದ್ದಾರೆ.
ಅವರು ರಾಜ್ಯ ಸರ್ಕಾರದ ಗಮನಕ್ಕೆ ತಂದಿರುವ ಬೇಡಿಕೆಗಳು:
1.ಸರ್ಕಾರ ಕೈಗೊಂಡಿರುವ ಸುರಕ್ಷಿತ ಅಸುರಕ್ಷಿತ ಸ್ಪರ್ಶ ಜಾಗೃತಿ ಕಾರ್ಯಕ್ರಮದಲ್ಲಿ, ಹುಡುಗರಿಗೂ ಹುಡುಗಿಯರಿಗೂ ಪ್ರತ್ಯೇಕ ಬೋಧನೆ ನೀಡಲು ಮನೋವೈದ್ಯರು, ಮಕ್ಕಳವೈದ್ಯರು ಹಾಗೂ ಸ್ತ್ರೀರೋಗ ತಜ್ಞರ ಸಹಭಾಗಿತ್ವ ಇರಬೇಕು.
2.ಪ್ರತಿಯೊಂದು ಜಿಲ್ಲೆಯಲ್ಲಿ ತುರ್ತು ಆಧಾರದ ಮೇಲೆ ಪ್ರತ್ಯೇಕ ಪರಿಶೀಲನಾ ಸಮಿತಿ ರಚನೆ
3. ನೆಲಮಟ್ಟದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಶಾ ಕಾರ್ಯಕರ್ತಿಯರಿಗೆ ಹೆಚ್ಚಿನ ಪ್ರೋತ್ಸಾಹ
4.ಶಾಲೆ-ಕಾಲೇಜುಗಳಲ್ಲಿ ಲೈಂಗಿಕ ಶಿಕ್ಷಣ ಹಾಗೂ ಜಾಗೃತಿ ಕಾರ್ಯಕ್ರಮಗಳು ಕಡ್ಡಾಯ
5. ಅನೈತಿಕ ಚಟುವಟಿಕೆಗಳಲ್ಲಿ ತೊಡಗಿರುವ ತಪ್ಪಿಸ್ತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹ
6.ಪೀಡಿತ ಬಾಲಕಿಯರಿಗೆ ಆರೋಗ್ಯ ಮತ್ತು ಮನೋವೈದ್ಯಕೀಯ ನೆರವು
ರಾಜ್ಯದ ಭವಿಷ್ಯವಾಗಿರುವ ಅಪ್ರಾಪ್ತ ಬಾಲಕಿಯರ ಬದುಕು ಹಾಳಾಗದಂತೆ ತಕ್ಷಣ ಸರ್ಕಾರ ನಿರ್ಧಾರಾತ್ಮಕ ಹೆಜ್ಜೆ ಇಡುವುದು ಅತ್ಯಗತ್ಯ. ಸಮಾಜದ ಹಿತಕ್ಕಾಗಿ ನಾನು ಹೋರಾಟವನ್ನು ಮುಂದುವರಿಸುತ್ತೇನೆ. ಈ ಗಂಭೀರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವವರೆಗೆ ಮೌನವಾಗುವುದಿಲ್ಲ ಎಂದು ಡಿ.ಎಸ್. ಅರುಣ್ ಸ್ಪಷ್ಟ ಸಂದೇಶ ನೀಡಿದರು.