ಸೆ.19ರಿಂದ 21ರ ವರೆಗೆ ACEA-CON-2025, ಕಟ್ಟಡ ಸಾಮಗ್ರಿಗಳ, ಒಳ ಹೊರ ವಿನ್ಯಾಸ ಮತ್ತು ಪೀಠೋಪಕರಣಗಳು, ಗೃಹ ಸಾಲ, ಅತಿದೊಡ್ಡ ವಸ್ತು ಪ್ರದರ್ಶನ-2025*
*ಸೆ.19ರಿಂದ 21ರ ವರೆಗೆ ACEA-CON-2025, ಕಟ್ಟಡ ಸಾಮಗ್ರಿಗಳ, ಒಳ ಹೊರ ವಿನ್ಯಾಸ ಮತ್ತು ಪೀಠೋಪಕರಣಗಳು, ಗೃಹ ಸಾಲ, ಅತಿದೊಡ್ಡ ವಸ್ತು ಪ್ರದರ್ಶನ-2025*
ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್, ಶಿವಮೊಗ್ಗ ಮತ್ತು ಯು.ಎಸ್ ಕಮ್ಯೂನಿಕೇಶನ್ ಸಹಯೋಗದೊಂದಿಗೆ ಶಿವಮೊಗ್ಗ ನಗರದ ಶುಭಮಂಗಳ ಸಮುದಾಯ ಭವನದಲ್ಲಿ ಇದೇ ತಿಂಗಳು 19, 20, & 21 ಮೂರು ದಿನಗಳ ಕಾಲ ವಸ್ತು ಪ್ರದರ್ಶನ ಏರ್ಪಡಿಸಿದ್ದೇವೆ ಎಂದು ಜಿ.ರುದ್ರೇಶಪ್ಪ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್, ಶಿವಮೊಗ್ಗ ಇದು ಸನ್ 2002 ರಲ್ಲಿ ಸ್ಥಾಪಿತವಾಗಿದ್ದು, ಸುಮಾರು 120 ವೃತ್ತಿಪರ ಇಂಜಿನಿಯರ್ಸ್ ಸದಸ್ಯರನ್ನು ಒಳಗೊಂಡಿದೆ. ಕಟ್ಟಡ ನಿಲ್ದಾಣ ಕ್ಷೇತ್ರ-ಬದಲಾಗುತ್ತಿರುವ ಈ ದಿನಗಳಲ್ಲಿ ಆಧುನಿಕ ನಿರ್ಮಾಣಗಳ ಭರಾಟೆಯಲ್ಲಿ ನೂತನ ಸಾಮಗ್ರಿಗಳು ಮತ್ತು ತಾಂತ್ರಿಕ ಕೌಶಲ್ಯಗಳಿಂದ ಕೂಡಿದ ಹಲವು ಬಹುಪಯೋಗಿ ನಿರ್ಮಾಣ ಸಾಮಗ್ರಿಗಳ ಅರಿವನ್ನು ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ACEA-CON-2025 ಸಹಾಯವಾಗುತ್ತದೆ ಎಂದರು.
ಕಟ್ಟಡ ಕಟ್ಟುವ ಉದ್ದೇಶ ಕಟ್ಟಡಗಳ ಗುಣಮಟ್ಟ ಶ್ರೇಷ್ಠವಾಗಿರಬೇಕು ಮತ್ತು ನಗರದ ಅಂದಕ್ಕೆ ಅನುಗುಣವಾಗಿರಬೇಕು ಮತ್ತು ಭದ್ರತೆಯಿಂದ ಕೂಡಿರಬೇಕು ಎಂಬುದಾಗಿದೆ ಎಂದರು.
ಕಟ್ಟಡ ಕಟ್ಟುವ ಉದ್ದೇಶ ಹೊಂದಿರುವ ಸಾರ್ವಜನಿಕರಿಗೆ ಮತ್ತು ಈಗಾಗಲೇ ಮನೆ ಕಟ್ಟುತ್ತಿರುವವರಿಗೆ ಕಟ್ಟಡ ಸಾಮಗ್ರಿಗಳ ಬಗ್ಗೆ ಮಾಹಿತಿ ಒದಗಿಸುವ ಉದ್ದೇಶದಿಂದ ಒಂದೇ ಸೂರಿನಡಿಯಲ್ಲಿ ಸಮಗ್ರ ಕಟ್ಟಡ ಕಟ್ಟುವ ಸಾಮಗ್ರಿಗಳ ಪ್ರದರ್ಶನ ಮತ್ತು ಮಾಹಿತಿ ಒದಗಿಸಲಾಗುತ್ತಿದೆ.
ಸಾಮಾನ್ಯ ಕಟ್ಟಡ ಸಾಮಗ್ರಿಗಳಾದ ಸಿಮೆಂಟ್, ಬ್ರಿಕ್ಸ್, ಆಗ್ರಿಗೇಟ್ ಎಂ ಸ್ಯಾಂಡ್. ಸ್ಟೀಲ್, ಪ್ಲಂಬಿಂಗ್, ಟೈಲ್ಸ್, ಪೈವುಡ್, ಇಂಟೀರಿಯರ್‌ಗೆ ಸಂಬಂಧಪಟ್ಟ ಪರಿಕರಗಳು. ಎಕ್ಸಿಟರಿಯರ್ ಉತ್ಪನ್ನಗಳು, ಸೋಲಾರ್ ಮತ್ತು ಎಲೆಕ್ಸಿಕಲ್ ಉತ್ಪನ್ನಗಳು ಅತ್ಯಾಧುನಿಕ ಗುಣಮಟ್ಟದ ಸೆಕ್ಯೂರಿಟಿ ಉತ್ಪನ್ನಗಳು ಯುಪಿವಿಸಿ ಡೋರ್ಸ್ ಮತ್ತು ವಿಂಡೋಸ್, ಪೈಂಟ್ ಮತ್ತು ಅಡೆಸ್ಟೀವ್, ವಾಟರ್ ಪ್ರೊಫಿಂಗ್ ಹೀಗೆ ಹತ್ತು ಹಲವಾರು ಉತ್ಪನ್ನಗಳು ವಿವಿಧ ನವ ನವೀನ ಕಲಾವಿನ್ಯಾಸಗಳು ನೋಡಲು ಸಿಗುತ್ತವೆ ಎಂದರು.
ಸಾರ್ವಜನಿಕರು ಮುಕ್ತವಾಗಿ ಬಂದು ಕಟ್ಟಡ ಸಾಮಗ್ರಿಗಳನ್ನು ವೀಕ್ಷಿಸಿ ತಮ್ಮ ತಮ್ಮ ಸಮಸ್ಯೆಗಳನ್ನು ಕಂಪನಿ ಪದಾಧಿಕಾರಿಗಳಿಗೆ ಮತ್ತು ಸ್ಥಳೀಯ ಡೀಲರ್ಸ್‌ಗಳ ಜೊತೆ ಮುಕ್ತವಾಗಿ ಸಮಾಲೋಚಿಸಬಹುದು. ಶುಕ್ರವಾರ, ಶನಿವಾರ ಮತ್ತು ಭಾನುವಾರ ಬೆಳಗ್ಗೆ 1030 ಇಂದ ರಾತ್ರಿ 8.30ರ ವರೆಗೆ ಕಾರ್ಯಕ್ರಮ ನಿರಂತರವಾಗಿ ನಡೆಯಲಿದೆ.
ಕಟ್ಟಡ ಕಟ್ಟುವವರಿಗೆ ಮತ್ತು ಇತರೆ ಎಲ್ಲ ಸಾರ್ವಜನಿಕರುಗಳಿಗೆ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದಲ್ಲಿ ಮುಕ್ತ ಪ್ರವೇಶವನ್ನು ನೀಡಲಾಗಿದೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ವಿನಂತಿಸಿದರು.
ಯು. ಎಸ್ ಕಮ್ಯೂನಿಕೇಶನ್ ಸಂಸ್ಥೆ ಸುಮಾರು 25 ವರ್ಷಗಳಿಂದ ಕರ್ನಾಟಕದಾದ್ಯಂತ ಕಟ್ಟಡ ಕಟ್ಟುವ ಉತ್ಪನ್ನಗಳ ಹೊಸ ಹೊಸ ರೂಪಗಳನ್ನು ಪರಿಚಯಿಸುತ್ತಾ ಬಂದಿದೆ. ಕಟ್ಟಡ ಸಾಮಗ್ರಿ ಮತ್ತು ಅದಕ್ಕೆ ಸಹಾಯಕ ಉತ್ಪಾದನಾ ಕ್ಷೇತ್ರದಲ್ಲಿರುವ ಎಲ್ಲಾ ಕಂಪನಿಗಳು ಯು.ಎಸ್ ಕಮ್ಯೂನಿಕೇಶನ್ ಸಂಸ್ಥೆ ಮತ್ತು ACEA ಸಹಾಯದಿಂದ ಕಟ್ಟಡ ಕಟ್ಟುವ ಮಾಲೀಕರಿಗೆ ತಲುಪುತ್ತಿದೆ.
ಶಿವಮೊಗ್ಗ ಕನ್ಸ್‌ಟ್ರಕ್ಷನ್ ಇಂಡಸ್ಟ್ರಿ ಕೂಡ ಬಹಳಷ್ಟು ಉತ್ತಮವಾಗಿದೆ ಇಲ್ಲಿನ ಕಟ್ಟಡಗಳು ತುಂಬಾ ಗುಣಮಟ್ಟ ಮತ್ತು ಭದ್ರತೆಯಿಂದ ಕೂಡಿವೆ. ಇಲ್ಲಿನ ಕಟ್ಟಡಗಳು ಹೊರ ಮತ್ತು ಒಳ ವಿನ್ಯಾಸಗಳು ಕೂಡ ದೊಡ್ಡ ದೊಡ್ಡ ನಗರಗಳಿಗೆ ಸರಿಸಮಾನವಾಗಿವೆ. ಇಷ್ಟೊಂದು ಜಾಗೃತಿ ಇದ್ದಾಗ ಕೂಡ ಕೆಲವು ಕಟ್ಟಡಗಳಲ್ಲಿ ಭದ್ರತೆ ಮತ್ತು ಗುಣಮಟ್ಟದ ಕೊರತೆ ಇನ್ನೂ ಕಾಣಸಿಗುತ್ತದೆ. ಮನೆ ಕಟ್ಟುವ ಗ್ರಾಹಕರು ಎಲ್ಲಿ ಮೋಸ ಹೋಗುತ್ತಿದ್ದಾರೆ ಮತ್ತು ಎಲ್ಲಿ ತಪ್ಪು ಮಾಡುತ್ತಿದ್ದಾರೆ ಎಂಬ ಇನ್ನೂ ಹತ್ತು ಹಲವಾರು ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಉದ್ದೇಶದಿಂದ ACEA-CON-2025 ಕಟ್ಟಡ ಸಾಮಗ್ರಿಗಳ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದರು.
ಹಿಂದೆ ನಡೆದ ACEA-CON-2023 ರಲ್ಲಿ ಅಂದಾಜು 50,000ಕ್ಕೂ ಹೆಚ್ಚು ಜನ ವೀಕ್ಷಿಸಿ ಆಡಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಿ ತಮ್ಮ ತಮ್ಮ ನೂತನ ಕಟ್ಟಡಗಳಿಗೆ ಉಪಯೋಗ ಸಹ ಪಡೆದಿರುತ್ತಾರೆ.