*ಸೆ. 24 ರಂದು ಚಲನಚಿತ್ರ ದಸರಾ ಉದ್ಘಾಟನೆ* *ಸೆ.25 ರಂದು ರೈತ ದಸರಾ*
*ಸೆ. 24 ರಂದು ಚಲನಚಿತ್ರ ದಸರಾ ಉದ್ಘಾಟನೆ*
*ಸೆ.25 ರಂದು ರೈತ ದಸರಾ*
ಶಿವಮೊಗ್ಗ ದಸರಾ -2025ರ ಚಲನಚಿತ್ರ ದಸರಾವನ್ನು ಸೆ. 24 ರಂದು ಬೆಳಗ್ಗೆ 9.30ಕ್ಕೆ ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪರವರು ಉದ್ಘಾಟಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಟ ಶರಣ್ ಹಾಗೂ ನಟಿ ಕು. ಕಾರಣ್ಯರಾಮ್ ಪಾಲ್ಗೊಳ್ಳಲಿದ್ದಾರೆ. ಹಾಗೂ ಬೆ. 11.30ಕ್ಕೆ ಚಲನಚಿತ್ರ ಸಂಪನ್ಮೂಲ ವ್ಯಕ್ತಿಗಳಿಂದ ಚಲನಚಿತ್ರ ರಸಗ್ರಹಣ ಕಾರ್ಯಗಾರವನ್ನು ಏರ್ಪಡಿಸಲಾಗಿದ್ದು, ನಿರ್ದೇಶಕ, ನಿರ್ಮಾಪಕ ಹಾಗೂ ಚಿತ್ರಸಾಹಿತಿ ಸಾಯಿ ಪ್ರಕಾಶ್ ಉದ್ಘಾಟಿಸಲಿದ್ದಾರೆ.
——————–
*ಸೆ.25 ರಂದು ರೈತ ದಸರಾ*
ನಾಡಹಬ್ಬ ಶಿವಮೊಗ್ಗ ದಸರಾ 2025 ರ ಅಂಗವಾಗಿ ಮಹಾನಗರ ಪಾಲಿಕೆ ವತಿಯಿಂದ ಸೆ.25 ರಂದು ನಗರದ ಕುವೆಂಪು ರಂಗಮಂದಿರದಲ್ಲಿ ರೈತ ದಸರಾ ಕಾರ್ಯಕ್ರಮವನ್ನು ಆಯೇಜಿಸಲಾಗಿದೆ.
ಬೆಳಿಗ್ಗೆ 9 ಗಂಟೆಗೆ ಬಿ.ಹೆಚ್ ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಬಳಿ ಜಾಥ ಕಾರ್ಯಕ್ರಮವನ್ನು ಪ್ರಗತಿ ಪರ ರೈತರು ಹಾಗೂ ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶಸ್ತಿ ವಿಜೇತರಾದ ಶ್ರೀಮತಿ ಕಮಲಮ್ಮ ಹಾಗೂ ಕುವೆಂಪು ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮವನ್ನು ಪ್ರಗತಿ ಪರ ರೈತರು ಹಾಗೂ ಉದಯೋನ್ಮುಖ ಕೃಷಿ ಪಂಡಿತ ಪ್ರಶಸ್ತಿ ವಿಜೇತರಾದ ಈರಪ್ಪ ನಾಯ್ಕ ಉದ್ಘಾಟನೆ ನೆರವೇರಿಸುವರು.
ಕಾರ್ಯಕ್ರಮ ಅಧ್ಯಕ್ಷತೆಯನ್ನು ಶಾಸಕರಾದ ಎಸ್.ಎನ್.ಚನ್ನಬಸಪ್ಪ ವಹಿಸಲಿದ್ದು, ಶಿವಮೊಗ್ಗ ಮಹಾನಗರ ಪಾಲಿಕೆ ಆಡಳಿತಾಧಿಕಾರಿ ಹಾಗೂ ಬೆಂಗಳೂರು ಪ್ರಾದೇಶಿಕ ವಿಭಾಗದ ಆಯುಕ್ತರಾದ ಅಮ್ಲಾನ್ ಆದಿತ್ಯ ಬಿಸ್ವಾಸ್ ಗೌರವ ಉಪಸ್ಥಿತಿಗಾಗಿ ಆಗಮಿಸುವರು.
ಮುಖ್ಯ ಅತಿಥಿಗಳಾಗಿ ಮಹಾನಗರ ಪಾಲಿಕೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಪಾಲ್ಗೊಳ್ಳುವರು.
———–