Editor MalenaduExpress

ನಾನು ನಿಮ್ಮ ಶಿ.ಜು.ಪಾಶ. ವಿಶೇಷವೂ ವಿಭಿನ್ನವೂ ಆದ ಸುದ್ದಿಗಳನ್ನು, ವಿಷಯಗಳನ್ನು ಹಂಚಿಕೊಳ್ಳಲೆಂದೇ ಆರಂಭಿಸಿದ ಸಾಮಾಜಿಕ ಜಾಲತಾಣವಿದು...

ನಟ, ಶೆಫ್ ಚಿದಂಬರ ಅನಿರುದ್ಧರ ಧ್ವನಿಗೆ ನ್ಯಾಯ ಸಿಗಲಿ**ತುಂಗೆಯ ಒಡಲು ಸ್ವಚ್ಛವಾಗಲಿ…*

*ನಟ, ಶೆಫ್ ಚಿದಂಬರ ಅನಿರುದ್ಧರ ಧ್ವನಿಗೆ ನ್ಯಾಯ ಸಿಗಲಿ* *ತುಂಗೆಯ ಒಡಲು ಸ್ವಚ್ಛವಾಗಲಿ…* ಶಿವಮೊಗ್ಗದ ತುಂಗಾ ನದಿಗೆ ಚೈನಾ ವಾಲ್ ಕಟ್ಟಲಾಗಿದೆ. ಅದಕ್ಕೆ ಖರ್ಚಾಗಿದ್ದು ಬರೋಬ್ಬರಿ ಶತಕೋಟಿ. ಅದನ್ನು ಯಾರ್ಯಾರು ಎಷ್ಟೆಷ್ಟು ಶಟಕೊಂಡರೋ ಬಲ್ಲವರೇ ಬಲ್ಲರು. ಚೈನಾ ಮಹಾಗೋಡೆ ತಂದು ನಿಲ್ಲಿಸಿದರೂ ನೂರಾರು ಜಾಗಗಳಿಂದ ನುಗ್ಗಿಬರುವ ಊರಿನ ಚರಂಡಿ ಗಲೀಜು ತಡೆಯದೇ ಹೋದರು. ತುಂಗೆ ಕಣ್ಣ ಮುಂದೆಯೇ ಕಲುಷಿತಗೊಳ್ಳುತ್ತಿರುವ ಬಗ್ಗೆ ನದಿಗೆ ಭೇಟಿ ಮಾಡಿ ಮರುಗಿದ ನಟ ಅನಿರುದ್ಧ ಧ್ವನಿ ಎತ್ತಿದ್ದಾರೆ. ಅವರ ಹೋರಾಟದ ಆರಂಭದ ಹೆಜ್ಜೆಯಲ್ಲಿ…

Read More

ಸೊರಬದ ರೂಪಾ ನಿರ್ಮಾಣ, ಅನಿರುದ್ಧ ನಟನೆಯ ಚೆಫ್ ಚಿದಂಬರ ಯಶಸ್ಸಿನತ್ತ; ಚಿತ್ರ ತಂಡ ಏನಂತು?

ಸೊರಬದ ರೂಪಾ ನಿರ್ಮಾಣ, ಅನಿರುದ್ಧ ನಟನೆಯ ಚೆಫ್ ಚಿದಂಬರ ಯಶಸ್ಸಿನತ್ತ; ಚಿತ್ರ ತಂಡ ಏನಂತು? ಶಿವಮೊಗ್ಗದವರೇ ಆದ ರೂಪ ಡಿ.ಎನ್. ನಿರ್ಮಾಣ ಮಾಡಿರುವ ಎಂ.ಆನಂದರಾಜ್ ನಿರ್ದೇಶನದ ಬಹುನಿರೀಕ್ಷಿತ ಸಿನಿಮಾ  ಚೆಫ್ ಚಿದಂಬರ ಜೂ.೧೪ರಂದು ರಾಜ್ಯಾದ್ಯಂತ ಬಿಡುಗಡೆಯಾಗಿದ್ದು, ಅತ್ಯಂತ ಯಶಸ್ಸಿನತ್ತ ಸಾಗುತ್ತಿದೆ ಎಂದು ಚಿತ್ರದ ನಾಯಕ ನಟ ಅನಿರುದ್ಧ ಜತಕರ್ ಹೇಳಿದರು. ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಈ ಚಿತ್ರವು ಒಂದು ಕೌತುಕವಾಗಿದೆ. ವಿನೂತನ ಪ್ರಯತ್ನ ಇದಾಗಿದೆ. ಕೊಲೆಗಳ ಸುತ್ತ ನಡೆಯುವ ಆಕ್ಷನ್ ಥ್ರಿಲರ್ ಕಥಾ ಹಂದರವೊಂದಿರುವ ಹಾಸ್ಯಮಯ…

Read More

ಶಿವಮೊಗ್ಗ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ವಿ.ರಾಜು- ಆರ್.ಕೆ.ಸಿದ್ದರಾಮಣ್ಣ ಜಂಟಿ ಪತ್ರಿಕಾಗೋಷ್ಠಿ…* *’ಜನಗಣತಿ ಮಾಡಿಲ್ಲ- ಅರಸು ಭವನ ಪೂರ್ಣಗೊಳಿಸಿಲ್ಲ-ಖಾಲಿ ಹುದ್ದೆಗಳು ಭರ್ತಿಯಾಗಿಲ್ಲ’*

*ಶಿವಮೊಗ್ಗ ಜಿಲ್ಲಾ ಹಿಂದುಳಿದ ಜಾತಿಗಳ ಒಕ್ಕೂಟದ ವಿ.ರಾಜು- ಆರ್.ಕೆ.ಸಿದ್ದರಾಮಣ್ಣ ಜಂಟಿ ಪತ್ರಿಕಾಗೋಷ್ಠಿ…* *’ಜನಗಣತಿ ಮಾಡಿಲ್ಲ- ಅರಸು ಭವನ ಪೂರ್ಣಗೊಳಿಸಿಲ್ಲ-ಖಾಲಿ ಹುದ್ದೆಗಳು ಭರ್ತಿಯಾಗಿಲ್ಲ’* • ಶಿವಮೊಗ್ಗ ಬಾಲರಾಜ್ ಅರಸ್ ರಸ್ತೆಯಲ್ಲಿ ದಿ. ದೇವರಾಜ್ ಅರಸು ಭವನ ನಿರ್ಮಾಣಗೊಳ್ಳುತ್ತಲೇ ಇದ್ದು, ಈ ಕಾಮಗಾರಿ ಪೂರ್ಣಗೊಳಿಸಲು ರೂ. 3 ಕೋಟಿಗಳ ಅನುದಾನ ಬಿಡುಗಡೆಗೊಳಿಸಲು ದೇಶದ 3ನೇ ಬಾರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಒತ್ತಾಯಿಸುತ್ತೇವೆ. ಜೊತೆಗೆ ಕೇಂದ್ರ ಸಚಿವ ಸಂಪುಟದಲ್ಲಿ ಕರ್ನಾಟಕದಿಂದ ಆಯ್ಕೆಯಾದ ಸಚಿವರುಗಳನ್ನು ಮನವಿ, ಲೋಕಸಭಾ ಸದಸ್ಯರನ್ನು, ಕರ್ನಾಟಕ ವಿಧಾನಸಭಾ…

Read More

ಜೂ. 23 ರಂದು ಜಿಲ್ಲಾ ಸರ್ಕಾರಿ ನೌಕರರ ಸಂಘದಿಂದ ಮೂರು ಮುಖ್ಯ ಕಾರ್ಯಕ್ರಮಗಳು; ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ

ಜೂ. 23 ರಂದು ಜಿಲ್ಲಾ ಸರ್ಕಾರಿ ನೌಕರರ ಸಂಘದಿಂದ ಮೂರು ಮುಖ್ಯ ಕಾರ್ಯಕ್ರಮಗಳು; ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದಿಂದ ಜೂ.23ರಂದು ಕುವೆಂಪು ರಂಗ ಮಂದಿರದಲ್ಲಿ ನೂತನವಾಗಿ ಆಯ್ಕೆಯಾಗಿರುವ ಜಿಲ್ಲೆಯ ಜನಪ್ರತಿನಿಧಿಗಳಿಗೆ ಅಭಿನಂದನಾ ಕಾರ್ಯಕ್ರಮ, ಸರ್ಕಾರಿ ನೌಕರರ ನವೀಕೃತ ಭವನದ ಉದ್ಘಾಟನೆ, ಜಿಲ್ಲೆಯ ರಾಜ್ಯ ಸರ್ಕಾರಿ ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ ತಿಂಗಳಲ್ಲಿ ರಾಜ್ಯ ಕ್ರೀಡಾಕೂಟ ಶಿವಮೊಗ್ಗದಲ್ಲೇ ನಡೆಯಲುದ್ದೇಶಿಸಿದ್ದು, ಮುಖ್ಯಮಂತ್ರಿ…

Read More

ಕವಿಸಾಲು

Gm ಶುಭೋದಯ💐 *ಕವಿಸಾಲು** ಈ ಪಾರಿವಾಳವನ್ನು ನಂಬುವಂತಿಲ್ಲ… ಆಝಾನ್ ಕೂಗಿದ ಕೂಡಲೇ ಮಂದಿರಕ್ಕೆ, ಗಂಟೆ ಬಾರಿಸಿದ ಕೂಡಲೇ ಮಸ್ ಜೀದಿಗೆ ಹಾರುತ್ತಿರುತ್ತದೆ… ಸದ್ದಾಗುವುದಿಲ್ಲವೋ, ಧರ್ಮವೇ ಅರ್ಥವಾಗುವುದಿಲ್ಲವೋ… ಕೇಳೊಮ್ಮೆ ನೋಡಬೇಕು! – *ಶಿ.ಜು.ಪಾಶ* 8050112067 (19/6/24)

Read More

ಶಿವಮೊಗ್ಗದ ಗಾಂಧಿ ಬಜಾರಿನಲ್ಲಿ* *ಫೆವಿಕ್ವಿಕ್ ಕೂಡ ನಕಲಿ ಸಿಗುತ್ತೆ!**ದೊಡ್ಡಪೇಟೆ ಠಾಣೆಯಲ್ಲಿ ಎರಡು ಅಂಗಡಿಗಳ ಮೇಲೆ FIR…*

*ಶಿವಮೊಗ್ಗದ ಗಾಂಧಿ ಬಜಾರಿನಲ್ಲಿ* *ಫೆವಿಕ್ವಿಕ್ ಕೂಡ ನಕಲಿ ಸಿಗುತ್ತೆ!* *ದೊಡ್ಡಪೇಟೆ ಠಾಣೆಯಲ್ಲಿ ಎರಡು ಅಂಗಡಿಗಳ ಮೇಲೆ FIR…* ಶಿವಮೊಗ್ಗದ ಗಾಂಧಿ ಬಜಾರ್ ಮತ್ತು ಕಸ್ತೂರ ಬಾ ರಸ್ತೆಯ ಎರಡು ಅಂಗಡಿಗಳ ಮಾಲೀಕರು ನಕಲಿ ಫೆವಿಕ್ವಿಕ್ ಮಾರಾಟ ಮಾಡುತ್ತಿದ್ದಾರೆಂದು ಮೂಲ ಕಂಪನಿಯ ವ್ಯಕ್ತಿ ಜಿ.ರವಿ ಎನ್ನುವವರು ದೊಡ್ಡಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಹೈದ್ರಾಬಾದ್ ನ ಜಿ.ರವಿ ಈ ದೂರು ನೀಡಿದ್ದಾರೆ. ಕಸ್ತೂರ ಬಾ ರಸ್ತೆಯಲ್ಲಿರುವ ರಾಕೇಶ್ ಟ್ರೇಡಿಂಗ್ ಕಂಪನಿಯ ಮಾಲೀಕ ಮತ್ತು ಗಾಂಧಿ ಬಜಾರಿನ ಎಂ.ಕೆ.ಪಾವಿಜನ್ ಸ್ಟೋರ್…

Read More

ಆನಂದ ಬಾರ್ ಪಕ್ಕದ ಕನ್ಸರ್ ವೆನ್ಸಿ ಈಗ ಸಾರ್ವಜನಿಕ ವಾಹನ ನಿಲ್ದಾಣ**ಸಂಚಾರಿ ಎಸ್ ಐ ತಿರುಮಲೇಶ್ ತಂಡ ಹೊಗಳುತ್ತಿರುವ ಸಾರ್ವಜನಿಕರು**ಕುಡುಕರ ಶೌಚಾಲಯವೂ ಆಗಿಬಿಡುವ ಅಪಾಯವಿದೆ ಇಲ್ಲಿ!*

*ಆನಂದ ಬಾರ್ ಪಕ್ಕದ ಕನ್ಸರ್ ವೆನ್ಸಿ ಈಗ ಸಾರ್ವಜನಿಕ ವಾಹನ ನಿಲ್ದಾಣ* *ಸಂಚಾರಿ ಎಸ್ ಐ ತಿರುಮಲೇಶ್ ತಂಡ ಹೊಗಳುತ್ತಿರುವ ಸಾರ್ವಜನಿಕರು* *ಕುಡುಕರ ಶೌಚಾಲಯವೂ ಆಗಿಬಿಡುವ ಅಪಾಯವಿದೆ ಇಲ್ಲಿ!* ಶಿವಮೊಗ್ಗ ನಗರದ *ಸವಾರ್ ಲೈನ್ ರಸ್ತೆಯ ಮಲ್ನಾಡ್ ಕೆಫೆಯ ಹತ್ತಿರ, ಆನಂದ ಬಾರ್ ಪಕ್ಕ ಇರುವ ಕನ್ಸರ್ ವೆನ್ಸಿ* ಈಗ ವಾಹನ ನಿಲ್ದಾಣದ ತಾಣವಾಗಿದ್ದು, ಇದರ ಹಿಂದೆ ಟ್ರಾಫಿಕ್ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ತಿರುಮಲೇಶ್ ಮತ್ತು ತಂಡವನ್ನು ಸಾರ್ವಜನಿಕರು ಹೊಗಳುವಂತಾಗಿದೆ. ಈ ಕನ್ಸರ್ ವೆನ್ಸಿಯಲ್ಲಿ…

Read More

ಶಾಲಾ ವಾಹನಗಳ ಮೇಲೆ ಸಂಚಾರಿ ಸಿಪಿಐ ಬಿ.ಕೆ.ಲತಾ ಹದ್ದಿನ ಕಣ್ಣು; ಚಾಲಕರೇ, ಮೈ ಮರೆತರೆ ಬೀಳುತ್ತೆ ಕೇಸು!

ಶಾಲಾ ವಾಹನಗಳ ಮೇಲೆ ಸಂಚಾರಿ ಸಿಪಿಐ ಬಿ.ಕೆ.ಲತಾ ಹದ್ದಿನ ಕಣ್ಣು; ಚಾಲಕರೇ, ಮೈ ಮರೆತರೆ ಬೀಳುತ್ತೆ ಕೇಸು! ಇಂದು  ಬೆಳಗ್ಗೆ   ಶಿವಮೊಗ್ಗ ಸಂಚಾರಿ ವೃತ್ತದ ಸರ್ಕಲ್ ಇನ್ಸ್ ಪೆಕ್ಟರ್ ಶ್ರೀಮತಿ ಲತಾ ಬಿ. ಕೆ.  ಶಿವಮೊಗ್ಗ ನಗರದ ಸಾಗರ ರಸ್ತೆಯಲ್ಲಿ ಶಾಲಾ ವಾಹನಗಳ ತಪಾಸಣೆ ನಡೆಸಿ, ವಾಹನಗಳಲ್ಲಿ ಕಡ್ಡಾಯವಾಗಿ ಇಟ್ಟುಕೊಳ್ಳಬೇಕಿರುವ *ದಾಖಲಾತಿಗಳಾದ* ಆರ್.ಸಿ (ನೋಂದಣಿ ಪ್ರಮಾಣ ಪತ್ರ), ಇತ್ತೀಚಿನ ಎಮಿಷನ್ ಟೆಸ್ಟ್ ಪ್ರಮಾಣ ಪತ್ರ, ಚಾಲ್ತಿಯಲ್ಲಿರುವ ವಿಮಾ ಪತ್ರ, ಡಿ.ಎಲ್ (ಚಾಲನಾ ಪರವಾನಿಗೆ), ಬ್ಯಾಡ್ಜ್ ಹಾಗೂ ಇತರ…

Read More

ಜೂ.22 ರಂದು ಜಿಲ್ಲೆಯ ಸಾಧಕ ಪೊಲೀಸರಿಗೆ ಸನ್ಮಾನ

ಜೂ.22 ರಂದು ಜಿಲ್ಲೆಯ ಸಾಧಕ ಪೊಲೀಸರಿಗೆ ಸನ್ಮಾನ ಶಿವಮೊಗ್ಗ : ಶಿವಮೊಗ್ಗ ರೌಂಡ್ ಟೇಬಲ್ 166 ಮತ್ತು 266 ಹಾಗೂ ಮಲ್ನಾಡ್ ಮಾಸ್ಟರ್ 212 ಸಂಯುಕ್ತಾಶ್ರಯದೊಂದಿಗೆ ನಗರದ ಸುವರ್ಣ ಸಂಸ್ಕೃತಿ ಭವನದಲ್ಲಿ ಜೂನ್ 22 ಶನಿವಾರ ಸಂಜೆ 5 ಗಂಟೆಗೆ “ನೈಟ್ಸ್ ಇನ್ ಕಾಕಿಸ್” ಶಿರೋನಾಮೆಯಡಿ ಜಿಲ್ಲೆಯ ಸಾಧಕ ಪೊಲೀಸರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಆಗಮಿಸಲಿದ್ದು, ರೌಂಡ್ ಟೇಬಲ್ ವಲಯ 13 ರ ಛೇರ್ಮನ್ ದೇವಾನಂದ್, ಕಾರ್ಯದರ್ಶಿ…

Read More

ಕವಿಸಾಲು

Gm ಶುಭೋದಯ💐 *ಕವಿಸಾಲು** ಹೃದಯದಲ್ಲಿರುವ ನಿನ್ನೊಂದಿಗೆ ಕನಸಿಗೆ ಬರುವವರು ಸ್ಪರ್ಧಿಸಲು ಸಾಧ್ಯವೇ?… ಬಾ ಈಗಲಾದರೂ ನೆಮ್ಮದಿಯಿಂದ ಕಾಫಿ ಕುಡಿಯೋಣ… – *ಶಿ.ಜು.ಪಾಶ* 8050112067 (18/6/24)

Read More