*ಎಸ್ ಪಿ ಗೆ ಮನವಿ ಸಲ್ಲಿಸಿದ ಕೆ ಎಸ್ ಈಶ್ವರಪ್ಪ ಮತ್ತು ತಂಡ* *ವಿದೇಶಿ ಬೆದರಿಕೆ ಕರೆ ಪತ್ತೆ ಹಚ್ಚಲು ಮನವಿ ಸಲ್ಲಿಸಿದ ರಾಷ್ಟ್ರಭಕ್ತರು*
*ಎಸ್ ಪಿ ಗೆ ಮನವಿ ಸಲ್ಲಿಸಿದ ಕೆ ಎಸ್ ಈಶ್ವರಪ್ಪ ಮತ್ತು ತಂಡ* *ವಿದೇಶಿ ಬೆದರಿಕೆ ಕರೆ ಪತ್ತೆ ಹಚ್ಚಲು ಮನವಿ ಸಲ್ಲಿಸಿದ ರಾಷ್ಟ್ರಭಕ್ತರು* ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪನವರ ದೂರವಾಣಿಗೆ ಮೊನ್ನೆ ವಿದೇಶಿ ಮೂಲದಿಂದ ಅಂತರಾಷ್ಟ್ರೀಯ ಕರೆಯ ಮೂಲಕ ಬೆದರಿಕೆ ಹಾಕುವ ಪ್ರಯತ್ನ ನಡೆದಿದ್ದು, ಇದರ ಅಂಗವಾಗಿ ಸೂಕ್ತ ತನಿಖೆ ಕೈಗೊಂಡು ಕ್ರಮ ಜರುಗಿಸಬೇಕೆಂದು ಜಿಲ್ಲಾ ರಕ್ಷಣಾಧಿಕಾರಿಗಳಿಗೆ ರಾಷ್ಷ್ರಭಕ್ತರ ಪ್ರಮುಖರಿಂದ ಮನವಿ ಸಲ್ಲಿಸಲಾಗಿದೆ. ಸ್ವತಃ ಕೆ.ಎಸ್.ಈಶ್ವರಪ್ಪ, ಕೆ.ಇ.ಕಾಂತೇಶ್ ನೇತೃತ್ವದಲ್ಲಿ ಎಸ್ ಪಿ ನಿಖಿಲ್ ರವರಿಗೆ ಮನವಿ ಸಲ್ಲಿಸಲಾಯಿತು.


