ಶಿವಮೊಗ್ಗ ನಗರ ಜೆಡಿಎಸ್ ನಿಂದ ವಾರ್ಡ್ ವಾರು ಸಭೆ
ಶಿವಮೊಗ್ಗ ನಗರ ಜೆಡಿಎಸ್ ವತಿಯಿಂದ ನಿನ್ನೆ ದಿವಸ ವಾರ್ಡ್ ನo 17, 24 ಹಾಗೂ 25 ರಲ್ಲಿ ಜೆಡಿಎಸ್ ಪ್ರಮುಖರು ಮತ್ತು ಕಾರ್ಯಕರ್ತರ ಸಭೆಯನ್ನು ರಂಗನಾಥ ಬಡಾವಣೆಯ ಶನೇಶ್ವರ ಸ್ವಾಮಿ ದೇವಸ್ಥಾನದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಪಕ್ಷದ ಸಂಘಟನಾ ಸಭೆಯಲ್ಲಿ ಪಾಲ್ಗೊಂಡಿದ್ದ ನಗರ ಜೆಡಿಎಸ್ ನಾಯಕರು ವಾರ್ಡ್ ನo 17, 24 ಮತ್ತು 25 ರ ಕುಂದು ಕೊರತೆಗಳ ಬಗ್ಗೆ ಗಮನಹರಿಸಿದರು.
ನೂರಾರು ಸಂಖ್ಯೆಯಲ್ಲಿ ಉಪಸ್ಥಿಜಿತರಿದ್ದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಮಾಜಿ ಶಾಸಕ, ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಕೆ ಬಿ ಪ್ರಸನ್ನ ಕುಮಾರ್ ರವರು ದಿನನಿತ್ಯ ಸಾಮಾನ್ಯ ಜನ ಅನುಭವಿಸುತ್ತಿರುವ ಕಷ್ಟ ನೋವುಗಳಿಗೆ ನಗರ ಜೆಡಿಎಸ್ ಧ್ವನಿಯಾಗಿ ಕೆಲಸ ಮಾಡಲಿದೆ, ಸಮಾಜದ ಎಲ್ಲಾ ವರ್ಗದ ಜನರ ಪರವಾಗಿ ನಿಲ್ಲುವ ಪಣವನ್ನು ಜೆಡಿಎಸ್ ತೊಟ್ಟಿದೆ ಎಂದರು. ಇದೆ ಸಂದರ್ಭ ಮಾತನಾಡಿದ ನಗರಾಧ್ಯಕ್ಷ ದೀಪಕ್ ಸಿಂಗ್ ಮಾತನಾಡಿ ನಗರ ಪಾಲಿಕೆ ವ್ಯಾಪ್ತಿಯ ಎಲ್ಲಾ 35 ವಾರ್ಡ್ ಗಳಲ್ಲಿ ಸಾಮಾನ್ಯ ಜನ ನಿತ್ಯ ಅನುಭವಿಸುತ್ತಿರುವ ಕಷ್ಟ ಕಾರ್ಪಣ್ಯಗಳ ಮಾಹಿತಿ ಇದೆ. ಅವುಗಳಳನ್ನ ನಿವಾರಣೆ ಮಾಡುವ ನಿಟ್ಟಿನಲ್ಲಿ ನಗರ ಜೆಡಿಎಸ್ ಈಗಾಗಲೇ ಕಾರ್ಯಪ್ರವರ್ಥವಾಗಿದೆ, ಜನರ ಸಮಸ್ಯೆಗಳಿಗೆ ಧ್ವನಿಯಾಗುವ ನಿಟ್ಟಿನಲ್ಲಿ ನಗರ ಜೆಡಿಎಸ್ ಎಂದಿಗೂ ಹಿಂದೇಟು ಹಾಕುವುದಿಲ್ಲ. ಮುಂಬರುವ ದಿನಗಳಲ್ಲಿ ವಾರ್ಡ್ ನo 17, 24 ಮತ್ತು 25 ರಲ್ಲ ಜೆಡಿಎಸ್ ಬಾವುಟ ಹಾರಾಡಲಿದೆ. ಶಿವಮೊಗ್ಗ ನಗರಪಾಲಿಕೆಯಲ್ಲಿ ಜೆಡಿಎಸ್ ಧ್ವಜ ಹಾರಾಡಲು ಪಕ್ಷದ ನಗರ ಕಾರ್ಯಕರ್ತರು ಮುಖಂಡರು ಇದಕ್ಕಾಗಿ ವಿಶೇಷವಾಗಿ ಶ್ರಮಿಸಬೇಕು ಎಂದರು. ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದ ಜಿಲ್ಲಾಧ್ಯಕ್ಷ ಡಾ ಕಡಿದಾಳು ಗೋಪಾಲ್ ರವರು ಪ್ರತಿ ಬಡಾವಣೆಯ ಬೂತ್ ಸಮಿತಿಗಳೇ ಸುಪ್ರೀಂ ಆಗಬೇಕು, ಪ್ರತಿ ಬೂತ್ ಮಟ್ಟದ ಸಮಸ್ಯೆಗಳನ್ನು ಸ್ಥಳೀಯ ಮುಖಂಡರ ಮೂಲಕ ಅಥವಾ ನಗರ ಸಮಿತಿ ಅಧ್ಯಕ್ಷರ ಗಮನಕ್ಕೆ ತಂದರೆ ಸಮಸ್ಯ ನಿವಾರಣೆ ಮಾಡಲಾಗುವುದು ಹಾಗೂ ನಗರ ಜೆಡಿಎಸ್ ಜನರ ಸಮಸ್ಯೆಗಳಿಗೆ ಧ್ವನಿಯಾಗಿ ಕೆಲಸ ನಿರ್ವಹಿಸುತ್ತಿದೆ ಎಂದರು.
ಸಭೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷರಾದ ಶ್ರೀ ಕಡಿದಾಳು ಗೋಪಾಲ್ ರವರು, ರಾಜ್ಯ ಜೆಡಿಎಸ್ ಉಪಾಧ್ಯಕ್ಷರು ನಗರದ ಮಾಜಿ ಶಾಸಕರಾದ ಶ್ರೀ ಕೆ ಬಿ ಪ್ರಸನ್ನ ಕುಮಾರ್ ರವರು, ಜಿಲ್ಲಾ ಮಹಾ ಪ್ರಧಾನಕಾರ್ಯದರ್ಶಿಗಳಾದ ತ್ಯಾಗರಾಜ್ ರವರು,ನಗರ ಪಾಲಿಕೆ ಮಾಜಿ ಸದಸ್ಯರಾದ ಮಹೇಶ್ ರವರು, ಮುಖಂಡರಾದ ರಮೇಶ್ ನಾಯಕ್ ರವರು, ಜಯಣ್ಣ ರವರು, ನಗರ ಜೆಡಿಎಸ್ ಪ್ರಮುಖರಾದ ಸುನಿಲ್ ಗೌಡ ರವರು, ಲೋಹಿತ್ ರವರು, ವಿನಯ್ ರವರು, ಮನೋಹರ್ ರವರು, ದಯಾನಂದ್ ರವರು, ಶಂಕರ್ ರವರು ರವಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.