RSS ಚಟುವಟಿಕೆಗಳಿಗೆ ನಿಷೇಧ ವಿಚಾರ;* *ಹೊಸ ವಿಧೇಯಕದ ನೀಲಿ ನಕ್ಷೆ ಸಿದ್ಧ!* *ಯಾವಾಗ ಜಾರಿ? ನಿಯಮ ಮೀರಿದರೆ ಏನೆಲ್ಲ ಶಿಕ್ಷೆ?*
*RSS ಚಟುವಟಿಕೆಗಳಿಗೆ ನಿಷೇಧ ವಿಚಾರ;*
*ಹೊಸ ವಿಧೇಯಕದ ನೀಲಿ ನಕ್ಷೆ ಸಿದ್ಧ!*
*ಯಾವಾಗ ಜಾರಿ? ನಿಯಮ ಮೀರಿದರೆ ಏನೆಲ್ಲ ಶಿಕ್ಷೆ?*
ತೀವ್ರ ಆಕ್ಷೇಪದ ನಡುವೆಯೂ ಸರ್ಕಾರಿ, ಸಾರ್ವಜನಿಕ ಸ್ಥಳಗಳಲ್ಲಿ RSS ಚಟುವಟಿಕೆಗಳಿಗೆ ನಿಷೇಧ ಹೇರುವ ವಿಚಾರ ಸಂಬಂಧ ಹೊಸ ವಿಧೇಯಕ ತರಲು ರಾಜ್ಯ ಸರ್ಕಾರ ಮುಂದಾಗಿದೆ.
ಕಾನೂನು ಇಲಾಖೆಯಿಂದ ಈಗಾಗಲೇ ರೆಗ್ಯುಲೇಷನ್ ಆಫ್ ಯೂಸ್ ಆಫ್ ಗವರ್ನಮೆಂಟ್ ಪ್ರಿಮಿಸಿಸ್ ಆ್ಯಂಡ್ ಪ್ರಾಪರ್ಟೀಸ್ ಬಿಲ್ – 2025ರ ಡ್ರಾಫ್ಟ್ ಸಿದ್ಧವಾಗಿದ್ದು, ನಿಯಮ ಮೀರಿ RSS ಚಟುವಟಿಕೆಗಳನ್ನು ನಡೆಸಿದರೆ ಶಿಕ್ಷೆ ವಿಧಿಸಲು ಚಿಂತನೆ ನಡೆದಿದೆ. ಇಂದಿನ ಸಚಿವ ಸಂಪುಟ ಸಭೆಯಲ್ಲೂ ಈ ವಿಚಾರ ಚರ್ಚೆಯಾಗಲಿದೆ.
ಹೊಸ ವಿಧೇಯಕದಲ್ಲಿ ಏನಿದೆ?
ಯಾವುದೇ ಧಾರ್ಮಿಕ, ರಾಜಕೀಯ ಕಾರ್ಯಕ್ರಮಕ್ಕೆ ಕಡ್ಡಾಯ ಅನುಮತಿ ಪಡೆಯಬೇಕು ಎಂಬ ನಿಯಮ
ಜಿಲ್ಲಾಧಿಕಾರಿ, ಜಿಲ್ಲಾ ವರಿಷ್ಠಾಧಿಕಾರಿಗೆ ಅನುಮತಿ ನೀಡುವ ಅಧಿಕಾರ
ನಿಯಮ ಮೀರಿ ಚಟುವಟಿಕೆ ನಡೆಸಿದರೆ ಎರಡು ವರ್ಷ ಜೈಲು ಶಿಕ್ಷೆ, 50 ಸಾವಿರ ರೂ. ದಂಡ
ಎರಡನೇ ಬಾರಿ ನಿಯಮ ಮೀರಿದ್ರೆ ಮೂರು ವರ್ಷ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ
ಇದಕ್ಕೂ ಮೀರಿ ಮುಂದುವರೆದರೆ ಪ್ರತೀ ದಿನ 5 ಸಾವಿರ ರೂ. ದಂಡ ವಿಧಿಸುವ ನಿಯಮ