ದಿನೇಶ್- ನಾಗೇಶ್ ನಾಯ್ಕ- ದನಿ ವಿಜಯ್ ಕುಮಾರ್- ಡಾ.ಶರತ್ ಮರಿಯಪ್ಪ ಸೇರಿದಂತೆ 15 ಜನ ಹಾಪ್ ಕಾಮ್ಸ್ ನಿರ್ದೇಶಕರಾಗಿ ಅವಿರೋಧ ಆಯ್ಕೆ
ದಿನೇಶ್- ನಾಗೇಶ್ ನಾಯ್ಕ- ದನಿ ವಿಜಯ್ ಕುಮಾರ್- ಡಾ.ಶರತ್ ಮರಿಯಪ್ಪ ಸೇರಿದಂತೆ 15 ಜನ ಹಾಪ್ ಕಾಮ್ಸ್ ನಿರ್ದೇಶಕರಾಗಿ ಅವಿರೋಧ ಆಯ್ಕೆ

ಶಿವಮೊಗ್ಗ ತೋಟಗಾರಿಕೆ ಬೆಳೆಗಾರರ ಉತ್ಪನ್ನ ಮಾರಾಟ ಮತ್ತು ಸಂಸ್ಕರಣ ಸಹಕಾರ ಸಂಘಕ್ಕೆ (ಹಾಪ್‌ಕಾಮ್ಸ್) ನಿರ್ದೇಶಕರಾಗಿ ವೆಂಟಕಪುರದ ಎಂ.ಪಿ.ದಿನೇಶ್ ಪಟೇಲ್ ಹಾಗೂ ಜಿ.ನಾಗೇಶ್‌ನಾಯ್ಕ್ ಸೇರಿದಂತೆ ಜಿಲ್ಲೆಯಲ್ಲಿ 15 ಜನರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 15 ನಿರ್ದೇಶಕರ ಸ್ಥಾನಗಳಿದ್ದು, ಅದರಲ್ಲಿ ಶಿವಮೊಗ್ಗ ತಾಲೂಕಿನಿಂದ 6 ಜನರು ಆಯ್ಕೆಯಾಗಿದ್ದು, ಪರಿಶಿಷ್ಟ ವರ್ಗದಿಂದ ಜಿ.ನಾಗೇಶ್‌ನಾಯ್ಕ, ಸಾಮಾನ್ಯ ವರ್ಗದಿಂದ ಎಂ.ಪಿ.ದಿನೇಶ್‌ಪಟೇಲ್, ಎಸ್ಟಿ ಕ್ಷೇತ್ರದಿಂದ ಪರಶುರಾಮ್, ಸಾಮಾನ್ಯ ಕ್ಷೇತ್ರದಿಂದ ವಿಜಯಕುಮಾರ್ (ದನಿ), ಬಿಸಿಎಂ ಎ ನಿಂದ ಡಾ.ಶರತ್ ಮರಿಯಪ್ಪ, ಬಿಸಿಎಂ ಬಿ ನಿಂದ ಚಂದ್ರೇಗೌಡ ಸೇರಿದಂತೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಒಟ್ಟು 15 ಜನರು ಮುಂದಿನ 5 ವರ್ಷದ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
15 ಕ್ಷೇತ್ರಕ್ಕೆ 20 ಜನರು ನಾಮಪತ್ರ ಸಲ್ಲಿಸಿದ್ದು, ಸೋಮವಾರ ಐವರು ನಾಮಪತ್ರ ವಾಪಸ್ ತೆಗೆದುಕೊಂಡಿದ್ದರಿಂದ ಉಳಿದವರು ಅವಿರೋಧವಾಗಿ ಆಯ್ಕೆಗೊಂಡಿದ್ದಾರೆ.