*ಹಾಪ್ ಕಾಮ್ಸ್ ಅಧ್ಯಕ್ಷರಾಗಿ ಆರ್.ವಿಜಯ ಕುಮಾರ್(ದನಿ)* *ಉಪಾಧ್ಯಕ್ಷರಾಗಿ ಉಂಬಳೇಬೈಲ್ ಚಂದ್ರೇಗೌಡ(ಪುಟ್ಟಣ್ಣ) ಅವಿರೋಧವಾಗಿ ಆಯ್ಕೆ*
*ಹಾಪ್ ಕಾಮ್ಸ್ ಅಧ್ಯಕ್ಷರಾಗಿ ಆರ್.ವಿಜಯ ಕುಮಾರ್(ದನಿ)*
*ಉಪಾಧ್ಯಕ್ಷರಾಗಿ ಉಂಬಳೇಬೈಲ್ ಚಂದ್ರೇಗೌಡ(ಪುಟ್ಟಣ್ಣ) ಅವಿರೋಧವಾಗಿ ಆಯ್ಕೆ*
ಹಾಪ್ ಕಾಮ್ಸ್ ಅಧ್ಯಕ್ಷರಾಗಿ ಆರ್.ವಿಜಯ ಕುಮಾರ್(ದನಿ)
ಉಪಾಧ್ಯಕ್ಷರಾಗಿ ಉಂಬಳೇಬೈಲ್ ಚಂದ್ರೇಗೌಡ(ಪುಟ್ಟಣ್ಣ) ಅವಿರೋಧವಾಗಿ ಆಯ್ಕೆಯಾದರು.
ಸಹಕಾರ ಭೀಷ್ಮ ಆರ್.ಎಂ.ಮಂಜುನಾಥ ಗೌಡರ ಮಾರ್ಗದರ್ಶನದಲ್ಲಿ ಈ ಚುನಾವಣೆ ನಡೆದಿದ್ದು, ಅಧ್ಯಕ್ಷ ಸ್ಥಾನಕ್ಕೆ ವಿಜಯ್ ಕುಮಾರ್, ಉಪಾಧ್ಯಕ್ಷ ಸ್ಥಾನಕ್ಕೆ ಉಂಬಳೇಬೈಲು ಚಂದ್ರೇಗೌಡ ಅರ್ಜಿ ಸಲ್ಲಿಸಿದ್ದರು.
ಸ್ಪರ್ಧೆಗೆ ಬೇರೆ ಅರ್ಜಿಗಳು ಬರದೇ ಈ ಇಬ್ಬರು ಅವಿರೋಧವಾಗಿ ಆಯ್ಕೆಯಾದರು.
ಹಾಪ್ ಕಾಮ್ಸ್ ನಲ್ಲಿ ಒಟ್ಟು 17 ಮತಗಳಿದ್ದು, ಇದರಲ್ಲಿ 15 ಮತಗಳು ಚುನಾಯಿತ ಪ್ರತಿನಿಧಿಗಳದ್ದು, 1 ಮತ ಸರ್ಕಾರಿ ನಾಮನಿರ್ದೇಶಿತ ಸದಸ್ಯರದು ಹಾಗೂ ಇನ್ನೊಂದು ಮತ ತೋಟಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರದ್ದಾಗಿರುತ್ತದೆ.


