Gm ಶುಭೋದಯ💐💐
*ಕವಿಸಾಲು*
1.
ನೆನಪುಗಳಿಗೆ
ವಿಶೇಷ ತಾಕತ್ತಿದೆ
ಹೃದಯವೇ…
ನಿನ್ನೆಯನ್ನು
ಜೀವಂತಗೊಳಿಸಿ
ಇವತ್ತಿನಲ್ಲಿಡುವುದು!
2.
ಅಂದುಕೊಂಡಿದ್ದೆ;
ದುಃಖದ ದೌಲತ್ತಿಂದ
ನಾನೊಬ್ಬನೇ ಶ್ರೀಮಂತ
ಎಂದು…
ಆದರಿಲ್ಲಿ ಕಂಡವರೆಲ್ಲ
ಅಗಾಧ ಶ್ರೀಮಂತರೇ!
3.
ಪ್ರೇಮಕ್ಕೆ ಕಣ್ಣಿಲ್ಲ
ಎಂದಿದ್ದರು ಯಾರೋ…
ಹೃದಯದ
ದಾರಿ ತೋರಿಸಿದ್ಯಾರೋ?
– *ಶಿ.ಜು.ಪಾಶ*
8050112067
(3/11/2025)