*ಲೋಕಸಭಾ ವಿರೋಧಪಕ್ಷದ ನಾಯಕರಾದ ರಾಹುಲ್ ಗಾಂಧಿಯವರಿಗೆ ಏಕ ವಚನದಲ್ಲಿ ನಿಂಧಿಸಿದ ಶಾಸಕ ಚನ್ನಿ‌ಯವರಿಗೆ ತಿರುಗೇಟು ನೀಡಿದ ಶಿವಕುಮಾರ್* *ನಾಲಿಗೆ ಹರಿಬಿಟ್ಟರೆ ಹುಷಾರ್ ಎಂದು ಎಚ್ಚರಿಸಿದ ಉತ್ತರ ಬ್ಲಾಕ್ ಅಧ್ಯಕ್ಷ*

*ಲೋಕಸಭಾ ವಿರೋಧಪಕ್ಷದ ನಾಯಕರಾದ ರಾಹುಲ್ ಗಾಂಧಿಯವರಿಗೆ ಏಕ ವಚನದಲ್ಲಿ ನಿಂಧಿಸಿದ ಶಾಸಕ ಚನ್ನಿ‌ಯವರಿಗೆ ತಿರುಗೇಟು ನೀಡಿದ ಶಿವಕುಮಾರ್*

*ನಾಲಿಗೆ ಹರಿಬಿಟ್ಟರೆ ಹುಷಾರ್ ಎಂದು ಎಚ್ಚರಿಸಿದ ಉತ್ತರ ಬ್ಲಾಕ್ ಅಧ್ಯಕ್ಷ*

ಶಿವಮೊಗ್ಗ ನಗರದ ಶಾಸಕ ಎಸ್ ಎನ್ ಚನ್ನಬಸಪ್ಪ (ಚನ್ನಿ)ಯವರೇ, ಲೋಕಸಭಾ ವಿರೋಧಪಕ್ಷದ ನಾಯಕರಾದ ರಾಹುಲ್ ಗಾಂಧಿಯವರಿಗೆ ಮತ ಕಳ್ಳತನದ ವಿಚಾರವಾಗಿ ಚುಣಾವಣಾ ಆಯೋಗಕ್ಕೆ ದೂರು ನೀಡಲು ನೀವು ಹೇಳಿದ್ದೀರಿ‌. ಕರ್ನಾಟಕ ಮತ್ತು ದೇಶಾದ್ಯಂತ ಅಂದೋಲನ ನಡೆದಿದ್ದು, ಚುನಾವಣಾ ಆಯೋಗದ ವಿರುದ್ಧ ಸಹಿ ಸಂಗ್ರಹ ನಡೆದಿದ್ದು ಕರ್ನಾಟಕ ರಾಜ್ಯ ಒಂದರಲ್ಲೇ ಒಂದು ಕೋಟಿ ಹನ್ನೆರಡು ಲಕ್ಷದ ನಲವತ್ತು ಸಾವಿರ ಜನ (1.12.40000) ಸಹಿ ಹಾಕಿದ್ದಾರೆ.

ಮೇಲ್ನೋಟಕ್ಕೆ ನೋಡಿದರೆ ಚುನಾವಣಾ ಆಯೋಗವು ಬಿ.ಜೆ.ಪಿ. ಪಕ್ಷದ ಏಜೆಂಟ್ ರೀತಿಯಲ್ಲಿ ಕೆಲಸಮಾಡುತ್ತಿದೆ. ಇದನ್ನು ಬಿಟ್ಟು ರಸ್ತೆ ಬದಿಯಲ್ಲಿ ನಿಂತು ಬಾಯಿಗೆ ಬಂದಂತೆ ನಾಲಿಗೆ ಹರಿ ಬೀಡಬೇಡಿ. ನಿಮ್ಮ ಭಾಷೆ ನಿಮ್ಮ ಪಕ್ಷದ ಸಂಸ್ಕೃತಿಯನ್ನು ತೋರುತ್ತದೆ. ಶಿವಮೊಗ್ಗ ನಗರದ ಜನರು ಸುಸಂಸ್ಕೃತರು, ಶಿವಮೊಗ್ಗ ನಗರದ ಜನತೆ ಇಂತಹ ಅಸಂಸ್ಕೃತ ವ್ಯಕ್ತಿಯನ್ನ ಏಕೆ ಶಾಸಕರನ್ನಾಗಿ ಮಾಡಿದೆವು ಎಂದು ಯೋಚಿಸುತ್ತಿದ್ದಾರೆ.

ಲೋ ಚನ್ನಿ, ಲೋ ಚನ್ನಬಸಪ್ಪ, ಮಗನೆ ಚನ್ನಬಸಪ್ಪ, ಇನ್ನು ಹಲವಾರು ಕೆಟ್ಟ ಶಬ್ದದಲ್ಲಿ ನಮಗೂ ಮಾತನಾಡಲು ಬರುತ್ತದೆ. ನಮ್ಮ ಕಾಂಗ್ರೇಸ್ ಪಕ್ಷದ ಸಂಸ್ಕೃತಿ ಈ ರೀತಿಯಾಗಿ ಮಾತನಾಡಲು ಕಲಿಸಿಕೊಟ್ಟಿಲ್ಲ. ಹಿರಿಯರಿಗೆ ಗೌರವ ಕೊಟ್ಟು ಮಾತನಾಡಲು ನಮ್ಮ ಕಾಂಗ್ರೇಸ್ ಪಕ್ಷದ ಹಿರಿಯ ನಾಯಕರು ಹೇಳಿ, ಕಲಿಸಿಕೊಟ್ಟಿದ್ದಾರೆ. ಮುಂದೆ ಇದೇ ರೀತಿ ನಿಮ್ಮ ನಾಲಿಗೆ ಹರಿ ಬಿಟ್ಟರೆ ಮುಂದಿನ ದಿನಗಳಲ್ಲಿ ನಾವು ಸಹ ನಿಮ್ಮ ಭಾಷೆಯಲ್ಲಿ ತಕ್ಕ ಉತ್ತರವನ್ನು ನೀಡಬೇಕಾಗುತ್ತ ಎಂದು ಶಿವಮೊಗ್ಗ ಉತ್ತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಶಿವಕುಮಾರ್ ಎಚ್ಚರಿಸಿದ್ದಾರೆ.