*ಶಿವಮೊಗ್ಗದ ಆರ್ ಎಂ ಎಲ್ ನಗರದ ಹರೀಶ್ ಮೇಲೆ ಹಲ್ಲೆ ಪ್ರಕರಣ;* *ಹಲ್ಲೆ ಮಾಡಿದ ಮೂವರಲ್ಲಿ ಇಬ್ಬರು ಹಿಂದೂ ಹುಡುಗರು!!* *ಶಿವಮೊಗ್ಗದ ಶಾಂತಿಯುತ ವಾತಾವರಣಕ್ಕೆ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆಯೇ?* *ನಿಜವಾಗಲೂ ಏನಿದು ಘಟನೆ? ಇಲ್ಲಿದೆ ಸಂಪೂರ್ಣ ಪೊಲೀಸ್ ರಿಪೋರ್ಟಿನ ಗುಪ್ತ ಸತ್ಯಗಳು!!*
*ಶಿವಮೊಗ್ಗದ ಆರ್ ಎಂ ಎಲ್ ನಗರದ ಹರೀಶ್ ಮೇಲೆ ಹಲ್ಲೆ ಪ್ರಕರಣ;*
*ಹಲ್ಲೆ ಮಾಡಿದ ಮೂವರಲ್ಲಿ ಇಬ್ಬರು ಹಿಂದೂ ಹುಡುಗರು!!*
*ಶಿವಮೊಗ್ಗದ ಶಾಂತಿಯುತ ವಾತಾವರಣಕ್ಕೆ ಬೆಂಕಿ ಹಚ್ಚುವ ಕೆಲಸ ನಡೆಯುತ್ತಿದೆಯೇ?*
*ನಿಜವಾಗಲೂ ಏನಿದು ಘಟನೆ? ಇಲ್ಲಿದೆ ಸಂಪೂರ್ಣ ಪೊಲೀಸ್ ರಿಪೋರ್ಟಿನ ಗುಪ್ತ ಸತ್ಯಗಳು!!*
ಶಿವಮೊಗ್ಗದ ಆರ್ ಎಂ ಎಲ್ ಪ್ರಕರಣದಲ್ಲಿ ನಿಜಕ್ಕೂ ಏನಾಗಿದೆ? ಇಲ್ಲಿ ಹಿಂದೂ ಅಂತ ಕೇಳಿ ಹಿಂದೂಗಳೇ ಹಲ್ಲೆ ಮಾಡಿದರಾ? ಹಲ್ಲೆಗೊಳಗಾದ ಹುಡುಗ ನಿಜಕ್ಕೂ ಸತ್ಯ ಹೇಳುತ್ತಿದ್ದಾನಾ?
ಇಂಥ ಒಂದಿಷ್ಟು ಪ್ರಶ್ನೆಗಳು ಮೂಡಲು ಬಹಳಷ್ಟು ಕಾರಣಗಳಿವೆ. ಶಿವಮೊಗ್ಗದ ಆರ್ ಎಂ ಎಲ್ ನಗರಕ್ಕೆ ಅಂಟಿಕೊಂಡೇ ಇರುವ ಮಾರ್ನಮಿ ಬೈಲು ಬಡಾವಣೆಯಲ್ಲಿ ಹರೀಶ್ ಎಂಬ ಯುವಕ ವಾಸವಿದ್ದಾನೆ. ಮುಸ್ಲಿಂ ಹುಡುಗರು ಧರ್ಮ, ಜಾತಿ ಕೇಳಿ ಹಲ್ಲೆ ಮಾಡಿದರೆಂದು ದೂರಿನ ವ್ಯಾಪ್ತಿಯಲ್ಲಿ ವಿವರಿಸಿಕೊಂಡಿದ್ದಾನೆ. ಆದರೆ, ಪೊಲೀಸ್ ತನಿಖೆಯ ಸತ್ಯಗಳೇ ಬೇರೆದನ್ನು ಹೇಳುತ್ತಿವೆ!
ಹಿಂದೂನಾ ಅಂತ ಕೇಳಿ ಹಲ್ಲೆ ಮಾಡಿದರೆಂದು ಹೇಳುತ್ತಿರುವ ಹರೀಶ್ ನಿಜವಾಗಲೂ ಸತ್ಯ ಹೇಳುತ್ತಿಲ್ಲ ಅಂತ ಪೊಲೀಸ್ ಮೂಲಗಳು ಹೇಳುತ್ತಿವೆ. ಇದೊಂದು ಕೊಳಕು ರಾಜಕೀಯದ ಆಟ ಅಂತ ಮೇಲ್ನೋಟಕ್ಕೇ ಕಂಡು ಬರುವಂತಿದೆ.
ಈ ಘಟನೆಯಲ್ಲಿ ವೈರಲ್ ಆಗಿರೋ ವೀಡಿಯೋ ತನಿಖೆ ಮಾಡಿರುವ ಪೊಲೀಸರು ಸ್ತಂಭೀಭೂತರಾಗಿದ್ದಾರೆ. ಈ ಸಿಸಿ ಟಿ ವಿಯಲ್ಲಿರೋ ಮೂವರು ಹುಡುಗರನ್ನು ಪೊಲೀಸರು ಬಂಧಿಸಿ ವಿಚಾರಣೆ ಮಾಡಿದ್ದಾರೆ.
ಈ ಮೂವರು ಹಲ್ಲೆಕೋರರಲ್ಲಿ ಇಬ್ಬರು ಹಿಂದೂ ಧರ್ಮದ ಹುಡುಗರೇ ಆಗಿರುವುದು ಗಮನಿಸಬೇಕಾದ ವಿಚಾರ. ಮೊದಲು ಹರೀಶ್ ಮೇಲೆ ಹಲ್ಲೆ ಮಾಡಿದವನೇ ಹಿಂದೂ ಹುಡುಗ ಚರಣ್!!
ನಂತರ ಹಲ್ಲೆ ಮಾಡಿದ್ದು ಅರ್ಮಾನ್. ಈ ಹಲ್ಲೆಯ ಹಿಂದಿನ ಘಟನೆಯ ಬೆಟ್ಟ ತೋಡಿ ನೋಡಿದ ಪೊಲೀಸರಿಗೆ ಸಿಕ್ಕಿದ್ದು ಮಾತ್ರ ಇಲಿಯೂ ಅಲ್ಲ ಎಂಬುದಿಲ್ಲಿ ವಿಶೇಷ!!
ಮಾರ್ನಮಿ ಬೈಲಿನ ಶಿವು ಎಂಬಾತನ ದಿನಸಿ ಅಂಗಡಿ ಎದುರು ಚಿಲ್ ಮಾಡುತ್ತಾ ಚರಣ್, ಅರ್ಮಾನ್, ನಿರಂಜನ್ ಕುಳಿತಿರುತ್ತಾರೆ. ಈ ಸಂದರ್ಭದಲ್ಲಿ ಎಣ್ಣೆ ಹೊಡೆದು ಹೋಗುತ್ತಿದ್ದ ಹರೀಶ್ ಗುರಾಯಿಸಿದ್ದಾನೆ. ಆಗ ಸಿಟ್ಟಿಗೆದ್ದ ಚರಣ್, ಏನೋ, ನಿಮ್ಮಮ್ಮನ್…ನಮ್ಮನ್ನೇ ಗುರಾಯಿಸ್ತೀಯಾ ಅಂತ ಅವಾಚ್ಯವಾಗಿ ಬೈದಿದ್ದಾನೆ. ಆಗ ಮಾರಾಮಾರಿ ಶುರುವಾಗಿದೆ. ಅಲ್ಲಿಂದ ಕಾಲ್ ಕಿತ್ತಿದ್ದ ಚರಣ್ ಮತ್ತು ಅರ್ಮಾನ್ ಬೆನ್ನಟ್ಟಿ ಹೋಗಿ ಹಲ್ಲೆ ಮಾಡಿದ್ದಾರೆ.
ಇದ್ಯಾವುದರ ಮಾಹಿತಿಯೂ ಇಲ್ಲದ ಶಾಸಕರು ಈ ಪ್ರಕರಣದಲ್ಲಿ ಎಡವಿದ್ದು ಸ್ಪಷ್ಟವಾಗಿ ದಾಖಲೆಗಳು ಹೇಳುತ್ತಿವೆ. ಈ ಪ್ರಕರಣದಿಂದ ಮೈಲೇಜ್ ಪಡೆಯಲು ಪ್ರಯತ್ನಿಸುತ್ತಿರುವ ಶಿವಮೊಗ್ಗದ ಶಾಸಕರಾದ ಚೆನ್ನಿ @ ಚನ್ನಬಸಪ್ಪ ಈಗ ಏನೆಂದು ಶಿವಮೊಗ್ಗದ ಸಾರ್ವಜನಿಕರಿಗೆ ಉತ್ತರಿಸುವರು?!


