*ಆಯನೂರು ಕೋಟೆ ಬಳಿ ಭೀಕರ ಅಪಘಾತ; ಇಬ್ಬರು ಬಲಿ*
*ಆಯನೂರು ಕೋಟೆ ಬಳಿ ಭೀಕರ ಅಪಘಾತ; ಇಬ್ಬರು ಬಲಿ*

ಆಯನೂರು ಕೋಟೆ ಬಳಿಯಲ್ಲಿ ಎರಡು ಬೈಕ್ ಗಳ ಮಧ್ಯೆ ಭೀಕರ ಅಪಘಾತ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ.
ಆಯನೂರು ಕೋಟೆ ಬಳಿ ಈ ಭೀಕರ ಅಪಘಾತ ನಡೆದಿದ್ದು, ಶಿವಮೊಗ್ಗ ತಾಲ್ಲೂಕು ಹಾರನಹಳ್ಳಿ ಸಮೀಪದ ಮಲ್ಲಾಪುರ ಗ್ರಾಮದ ನಿವಾಸಿಗಳಾದ ಆಕಿಫ್(21), ದಾದಾಪೀರ್(18) ಸಾವು ಕಂಡಿದ್ದಾರೆ.
ಹಾರನಹಳ್ಳಿಯಿಂದ ಆಯನೂರಿನತ್ತ ಈ ಇಬ್ಬರು ಹೊರಟಿದ್ದರು. ಈ ಅಪಘಾತದಲ್ಲಿ ಕ್ಯಾತಿನಕೆರೆ ಗ್ರಾಮದ ಗುರುಕಿರಣ್ ಗೂ ಗಂಭೀರ ಗಾಯಗಳಾಗಿವೆ. ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


