*ರಾಷ್ಟ್ರೀಯ ಅನ್ನದಾನ ಸಮಿತಿ ರಾಷ್ಟ್ರೀಯ ಉಪಾಧ್ಯಕ್ಷ ಕೆ.ಇ.ಕಾಂತೇಶ್ ಪತ್ರಿಕಾಗೋಷ್ಠಿ* *ಡಿ.8ರಂದು ಮುಷ್ಠಿ ಅಕ್ಕಿ ಅಭಿಯಾನ ಉದ್ಘಾಟನೆ*

*ರಾಷ್ಟ್ರೀಯ ಅನ್ನದಾನ ಸಮಿತಿ ರಾಷ್ಟ್ರೀಯ ಉಪಾಧ್ಯಕ್ಷ ಕೆ.ಇ.ಕಾಂತೇಶ್ ಪತ್ರಿಕಾಗೋಷ್ಠಿ*

*ಡಿ.8ರಂದು ಮುಷ್ಠಿ ಅಕ್ಕಿ ಅಭಿಯಾನ ಉದ್ಘಾಟನೆ*

ಶಬರಿಮಲೈ ಅಯ್ಯಪ್ಪ ಸೇವಾ ಸಮಾಜಂ, ರಾಷ್ಟ್ರೀಯ ಅನ್ನದಾನ ಸಮಿತಿ ವತಿಯಿಂದ ಪ್ರತಿ ವರ್ಷದಂತೆ ಶಬರಿಮಲೈ ಆಯಪ್ಪ ಸ್ವಾಮಿ ಸನ್ನಿಧಾನಕ್ಕೆ ಬರುವ ಮಾಲಾಧಾರಿ ಸ್ವಾಮಿಮಾರ್ ಗಳಿಗೆ ಅನ್ನಸಂತರ್ಪಣೆ ಉದ್ದೇಶದಿಂದ ಡಿ.8ರ ಸೋಮವಾರ ಬೆಳಿಗ್ಗೆ 9ಕ್ಕೆ ಸೀಗೆಹಟ್ಟಿ ಅಂತರಘಟ್ಟಮ್ಮ ದೇವಾಲಯದ ಆವರಣದಲ್ಲಿ ಮುಷ್ಠಿ ಅಕ್ಕಿ ಅಭಿಯಾನ’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ರಾಷ್ಟ್ರೀಯ ಅನ್ನದಾನ ಸಮಿತಿ ರಾಷ್ಟ್ರೀಯ ಉಪಾಧ್ಯಕ್ಷ ಕೆ.ಇ.ಕಾಂತೇಶ್ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಈ ಸಮಾರಂಭದ ಸಾನಿಧ್ಯವನ್ನು ಶಿವಮೊಗ್ಗ ರಾಮಾಕೃಷ್ಣ ವಿವೇಕಾನಂದ ಆಶ್ರಮದ ಶ್ರೀ ವಿನಯಾನಂದ ಸರಸ್ವತಿ ಸ್ವಾಮಿಗಳು ಹಾಗೂ ಅದಿಚುಂಚನಗಿರಿ ಶಿವಮೊಗ್ಗ ಶಾಖಾ ಮಠದ ಶ್ರೀ ನಾದಮಯಾನಂದನಾಥ ಸ್ವಾಮೀಜಿಯವರು ವಹಿಸಲಿದ್ದು ಮುಷ್ಟಿ ಅಕ್ಕಿ ಅಭಿಯಾನವನ್ನು ಮಾಜಿ ಉಪ ಮುಖ್ಯಮಂತ್ರಿಗಳಾದ ಕೆ.ಎಸ್. ಈಶ್ವರಪ್ಪ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ‘ರಾಷ್ಟ್ರೀಯ ಅನ್ನದಾನ ಸಮಿತಿ ಯ ರಾಷ್ಟ್ರೀಯ ಉಪಾಧ್ಯಕ್ಷರಾದ ಕೆ.ಈ. ಕಾಂತೇಶ್ ಅವರು ವಹಿಸಲಿದ್ದಾರೆ.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಕೆ.ಬಿ.ಪ್ರಸನ್ನಕುಮಾರ್, ಪಾಲಾಕ್ಷಿ ಹೆಚ್., ಡಾ| ಅರವಿಂದ್, ಜಿ.ರಾಜು, ಎನ್.ಡಿ.ಸತೀಶ್, ಎನ್.ಕೆ.ಜಗದೀಶ್, ಎಸ್.ಪಿ.ಶೇಷಾದ್ರಿ. ಶಂಕರ್(ರ), ಶರತ್ ಎಸ್.ಎಮ್. ಮಲ್ಲಿಕಾರ್ಜುನ ಆರ್. ಹಾಗೂ ಶಬರಿಮಲೈ ಅಯ್ಯಪ್ಪಸ್ವಾಮಿ ಸೇವಾ ಸಮಾಜಂ ಜಿಲ್ಲಾ ಅಧ್ಯಕ್ಷರಾದ ಕೆ.ಎಸ್.ಸಂತೋಷ್ ಅವರು ಭಾಗವಹಿಸಲಿದ್ದಾರೆ.

‘ಮುಷ್ಠಿ ಅಕ್ಕಿ ಅಭಿಯಾನ ದಡಿ ಶಿವಮೊಗ್ಗ ನಗರದ ಪ್ರತಿಯೊಂದು ಮನೆಯಿಂದ ಅಕ್ಕಿ, ಬೇಳೆ ಹಾಗೂ ಇತರ ದವಸ ದಾನ್ಯಗಳನ್ನು ಪಡೆದು ಅವುಗಳನ್ನು ಶಬರಿಮಲೈ ಸನ್ನಿದಾನಕ್ಕೆ ಕಳುಹಿಸುವ ವ್ಯವಸ್ಥೆಯನ್ನು ಮಾಡಲಾಗುವುದು. ಈ ಮುಷ್ಟಿ ಅಕ್ಕಿ ಅಬಿಯಾನ’ವನ್ನು ಶಬರಿಮಲೈ ಅಯ್ಯಪ್ಪ ಸೇವಾಸಮಾಜಂ (SASS) ರಾಷ್ಟ್ರೀಯ ಅನ್ನದಾನ ಸಮಿತಿಯ ರಾಷ್ಟ್ರೀಯ ಉಪಾಧ್ಯಕ್ಷರಾದ ಶ್ರೀಯುತ ಕೆ.ಈ.ಕಾಂತೇಶ್ ಅವರ ನೇತೃತ್ವದಲ್ಲಿ ಕಳೆದ 5 ವರ್ಷಗಳಿಂದ ಸತತವಾಗಿ ನಡೆಸಿಕೊಂಡು ಬರಲಾಗುತ್ತಿದೆ.

‘ಮುಷ್ಠಿ ಅಕ್ಕಿ ಅಭಿಯಾನ’ದ ಸಂಗ್ರಹಣಾ ವಾಹನವು ನಗರದ ಪ್ರತಿಯೊಂದು ಬಡಾವಣೆಯಲ್ಲೂ ಸಂಚರಿಸಲಿದ್ದು ಶಿವಮೊಗ್ಗದ ಜನತೆ ಈ ಪುಣ್ಯ ಕಾರ್ಯದಲ್ಲಿ ಪಾಲ್ಗೊಂಡು ತಮ್ಮಿಂದಾದ ದವಸ ಧಾನ್ಯಗಳನ್ನು ನೀಡಬೇಕಾಗಿ ಈ ಮೂಲಕ ಕೋರಿದರು.

ಸಂಗ್ರಹವಾದ ಧಾನ್ಯಗಳನ್ನು ಡಿಸೆಂಬರ್ 10ರ ಮಂಗಳವಾರ ಸಂಜೆ 6 ಗಂಟೆಗೆ ಶುಭಮಂಗಳ ಕಲ್ಯಾಣ ಮಂಟಪದ ಆವರಣದಲ್ಲಿ ಸಾರ್ವಜನಿಕ ಪಡಿಪೂಜೆ ಹಾಗೂ ಶಕ್ತಿಪೂಜೆಯನ್ನು ನೆರವೇರಿಸಿದ ನಂತರ ಶಬಲಮಟ್ಟಿ ಅಯ್ಯಪ್ಪಸ್ವಾಮಿ ಸನ್ನಿದಾನಕ್ಕೆ ಕಳುಹಿಸಿಕೊಡಲಾಗುವುದು ಎಂದು ವಿವರಿಸಿದರು.