ಕವಿಸಾಲು

Gm ಶುಭೋದಯ💐💐

*ಕವಿಸಾಲು*

1
ಮನೆಯೊಳಗೆ
ಮನಸು ಹಗುರಾಗುವಷ್ಟು
ಅತ್ತು ಬಿಡು

ಬಾಗಿಲು
ಮುಗುಳ್ನಕ್ಕು ತೆರೆ
ಹೃದಯವೇ…

ಜನರಿದ್ದಾರಿಲ್ಲಿ!

2.
ಒಡೆದು ಚುಚ್ಚುತ್ತಿದೆ
ಕಣ್ಣುಗಳಲ್ಲಿ
ಕನಸು…

ಗಾಜಿನದಾಗಿತ್ತೇನೋ!

3.
ಖಾಲಿ ಜೇಬು;

ಜಗತ್ತಿನ
ಅತ್ಯಂತ ಭಾರದ ವಸ್ತು!

– *ಶಿ.ಜು.ಪಾಶ*
8050112067
(11/12/2025)