*ಪತ್ರಿಕಾಗೋಷ್ಠಿಯಲ್ಲಿ ಗಂಗೋತ್ರಿ ಕಾಲೇಜಿನ ಚೇರ್ಮನ್, ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್* *ಡಿ.13 ರಂದು ಗಂಗೋತ್ರಿಯಿಂದ ಪರೀಕ್ಷೆ ಒಂದು ಹಬ್ಬ- ಸಂಭ್ರಮಿಸಿ ವಿಶೇಷ ಕಾರ್ಯಕ್ರಮ* *1500ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಭಾಗಿ*

*ಪತ್ರಿಕಾಗೋಷ್ಠಿಯಲ್ಲಿ ಗಂಗೋತ್ರಿ ಕಾಲೇಜಿನ ಚೇರ್ಮನ್, ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್*

*ಡಿ.13 ರಂದು ಗಂಗೋತ್ರಿಯಿಂದ ಪರೀಕ್ಷೆ ಒಂದು ಹಬ್ಬ- ಸಂಭ್ರಮಿಸಿ ವಿಶೇಷ ಕಾರ್ಯಕ್ರಮ*

*1500ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ಭಾಗಿ*

ಡಿಸೆಂಬರ್ 13ರ ಬೆಳಗ್ಗೆ 9.30ಕ್ಕೆ ”ಪರೀಕ್ಷೆ ಒಂದು ಹಬ್ಬ ಸಂಭ್ರಮಿಸಿ” ಎಂಬ ಕಾರ್ಯಕ್ರಮವನ್ನು ಎಸ್‌ಎಸ್‌ಎಲ್‌ಸಿ ಮಕ್ಕಳಿಗಾಗಿ ಶಿವಮೊಗ್ಗದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದೆ ಎಂದು ಗಂಗೋತ್ರಿ ಪಿ ಯು ಕಾಲೇಜಿನ ಚೇರ್ಮನ್, ಸೂಡಾ ಅಧ್ಯಕ್ಷ ಹೆಚ್.ಎಸ್.ಸುಂದರೇಶ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮವನ್ನು ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಅವರು ಉದ್ಘಾಟನೆ ಮಾಡುತ್ತಿದ್ದು, ಅಧ್ಯಕ್ಷತೆಯನ್ನು ನಾನು ವಹಿಸುತ್ತಿದ್ದೇನೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಜಿ.ಪಂ. ಕಾರ್ಯನಿರ್ವಹಣಾಧಿಕಾರಿ ಹೇಮಂತ, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಸ್.ಆರ್.ಮಂಜುನಾಥ್, ಮ್ಯಾಮ್ ಕೋಸ್ ವ್ಯವಸ್ಥಪಕ ನಿರ್ದೇಶಕರಾದ ಶ್ರೀಕಾಂತ ಬರುವೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರಮೇಶ್, ಅನನ್ಯ ವಿದ್ಯಾಪೀಠದ ಕಾರ್ಯದರ್ಶಿ ಹಾಗೂ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಗಿರೀಶ್ ಮತ್ತು ಖ್ಯಾತ ವ್ಯಕ್ತಿತ್ವ ವಿಕಸನ ಗುರು ಚೇತನ್ ರಾಮ್ ಅವರು ಉಪಸ್ಥಿತರಿರುತ್ತಾರೆ ಎಂದರು.

1500 ಮಕ್ಕಳಿಗೆ ಈ ಕಾರ್ಯಕ್ರಮ ನಡೆಯಲಿದ್ದು, ಅದೇ ದಿನ ಬೆಳಗ್ಗೆ 11 ರಿಂದ 1 ಗಂಟೆಯವರೆಗೆ ಚೇತನ್ ರಾಮ್ ಪರೀಕ್ಷೆಯ ಸವಾಲುಗಳು ಕುರಿತು ಉಪನ್ಯಾಸ ನೀಡಲಿದ್ದಾರೆ.

ಮಧ್ಯಾಹ್ನ 1.30 ರಿಂದ ಧಾರವಾಡದ ಖ್ಯಾತ ಶಿಕ್ಷಣ ತಜ್ಞ ಸುರೇಶ ಕುಲಕರ್ಣಿ, ಪರೀಕ್ಷೆಯಲ್ಲಿ ವಿಷಯಗಳನ್ನು ನೆನಪಿಟ್ಟುಕೊಳ್ಳುವುದು ಹೇಗೆ ಎಂಬುದರ ಕುರಿತು ಮಾತನಾಡಲಿದ್ದಾರೆ. ಅನಂತರದಲ್ಲಿ ಚೇತನ್ ರಾಮ್ ಅವರು ಪರೀಕ್ಷೆ ಒಂದು ಹಬ್ಬ ಸಂಭ್ರಮಿಸಿ ಎಂಬುದರ ಕುರಿತು ಉಪನ್ಯಾಸ ನೀಡಲಿದ್ದಾರೆ.

ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಶಾಲಾ ಶಿಕ್ಷಣ ಇಲಾಖೆಯ ಬೆಂಗಳೂರು ಕಚೇರಿಯ ಶೈಕ್ಷಣಿಕ ವಿಭಾಗದ ಉಪನಿರ್ದೇಶಕರಾದ ಜಿ.ವಿ.ಹರಿಪ್ರಸಾದ್ ಪರೀಕ್ಷೆಯ ರೂಪರೇಷೆಗಳ ಕುರಿತು ಮಾತನಾಡುತ್ತಾರೆ.

ಕಾರ್ಯಕ್ರಮದಲ್ಲಿ ನಮ್ಮೆಲ್ಲ ಟ್ರಸ್ಟಿಗಳು ಉಪಸ್ಥಿತಿರುತ್ತಾರೆ.ಹಾಗೆಯೇ ಶಿವಮೊಗ್ಗ ನಗರದ ಎಲ್ಲ ಶಾಲೆಗಳಿಂದ ಸುಮಾರು 1500 ಕ್ಕೂ ಹೆಚ್ಚು ಮಕ್ಕಳು ಕಾರ್ಯಕ್ರಮಕ್ಕೆ ಹಾಜರಾಗುವ ಹಿನ್ನೆಲೆಯಲ್ಲಿ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಅವರಿಗೆ ಮಧ್ಯಾಹ್ನದ ಭೋಜನ ವ್ಯವಸ್ಥೆ ಹಾಗೂ ಸರ್ಟಿಫೀಕೆಟ್ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ ಎಂದು ವಿವರಿಸಿದರು.

200 ಕ್ಕೂ ಹೆಚ್ಚು ಶಾಲಾ ಶಿಕ್ಷಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಮಾನಸಿಕವಾಗಿ ಮಕ್ಕಳನ್ನು ಸದೃಢಗೊಳಿಸಲು ಇದರಿಂದ ಸಹಕಾರಿಯಾಗಲಿದೆ ಎಂದರು.

ಪಿಯುಸಿಯಲ್ಲಿ, ನೀಟ್, ಸಿಇಟಿ ಸೇರಿದಂತೆ ಸ್ಪರ್ಧಾತ್ಮಕವಾಗಿಯೂ ಕಾಲೇಜಿನಲ್ಲಿ ಅಳವಡಿಸಿಕೊಳ್ಳಲಾಗಿದೆ. ಮಲೆನಾಡಿನ ಮಕ್ಕಳು ಗುಣಮಟ್ಟದ ಶಿಕ್ಷಣ ಪಡೆಯಲು ಬೇಕಾದುದನ್ನು ಕಲ್ಪಿಸಿಕೊಡಲಾಗುತ್ತಿದೆ ಎಂದರು.

ಗಂಗೋತ್ರಿ ಕಾಲೇಜಿನಲ್ಲಿ ಡಿಜಿಟಲ್ ಕ್ಲಾಸ್, ಅತ್ಯುತ್ತಮ ಲೈಬ್ರರಿ ಸೌಲಭ್ಯ ನೀಡಲಾಗುತ್ತಿದೆ. ಭವಿಷ್ಯದ ಅಡಿಪಾಯ ಉತ್ತಮವಾಗಿಸುವ ವಿಶೇಷ ವ್ಯವಸ್ಥೆ ಗಂಗೋತ್ರಿಯಿಂದ ನಡೆಯುತ್ತಿದೆ. ಮಧ್ಯಮ ವರ್ಗದವರಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದ್ದು, ಸೇವಾ ಮನೋಭಾವನೆ ಮಾತ್ರ ಹೊಂದಿದ್ದೇವೆ ಎಂದು ವಿವರಿಸಿದರು.