ರಾಜ್ಯದಲ್ಲಿ 2 ಲಕ್ಷ ಹುದ್ದೆಗಳು ಖಾಲಿ, ಕೊಟ್ಟ ಮಾತಿನಂತೆ ಉದ್ಯೋಗ ಭರ್ತಿ ಮಾಡಿ, ಮುಖ್ಯಮಂತ್ರಿಗಳಿಗೆ ಶಾಸಕ ಡಾ.ಧನಂಜಯ ಸರ್ಜಿ ಆಗ್ರಹ

ರಾಜ್ಯದಲ್ಲಿ 2 ಲಕ್ಷ ಹುದ್ದೆಗಳು ಖಾಲಿ, ಕೊಟ್ಟ ಮಾತಿನಂತೆ ಉದ್ಯೋಗ ಭರ್ತಿ ಮಾಡಿ, ಮುಖ್ಯಮಂತ್ರಿಗಳಿಗೆ ಶಾಸಕ ಡಾ.ಧನಂಜಯ ಸರ್ಜಿ ಆಗ್ರಹ

ಬೆಳಗಾವಿ : ರಾಜ್ಯದಲ್ಲಿ ಸುಮಾರು 2 ಲಕ್ಷ ಹುದ್ದೆಗಳು ಖಾಲಿ ಇರುವುದು ಅಂತ್ಯಂತ ನೋವಿನ ಸಂಗತಿ, ಖಾಲಿ ಇರುವ ಉದ್ಯೋಗ ಭರ್ತಿ ಮಾಡಿ ಎಂದು ಕೇಳಿದರೆ ಆರ್ಥಿಕ ಇಲಾಖೆ ಅನುಮತಿ ಬೇಕು ಎಂದು ಆರ್ಥಿಕ ಇಲಾಖೆ ಮೇಲೆ ಹಾಕಿ ರಾಜ್ಯದ ಯುವಕರ ಜೀವನದ ಜೊತೆ ರಾಜ್ಯ ಸರ್ಕಾರ ಕಣ್ಣಾಮುಚ್ಚಾಲೆ ಆಟ ಆಡ್ತಾ ಕಾರ್ಯಂಗವನ್ನು ಕೊಲೆ ಮಾಡುತ್ತಾ ಇದೆ. ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ಉದ್ಯೋಗ ಭರ್ತಿ ಮಾಡಲಿ ಎಂದು ಗುರುವಾರ ಬೆಳಗಾವಿಯಲ್ಲಿ ನಡೆದ ಚಳಿಗಾಲದ ವಿಧಾನ ಪರಿಷತ್ ಅಧಿವೇಶನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಆಗ್ರಹ ಮಾಡಿದರು.

ಕರ್ನಾಟಕದಲ್ಲಿ 3 ಕೋಟಿ 50 ಲಕ್ಷ ಜನಸಂಖ್ಯೆ 150 ತಾಲೂಕುಗಳು ಇದ್ದಾಗ 7 ಲಕ್ಷದ 20 ಸಾವಿರ ಸರ್ಕಾರಿ ನೌಕರರಿದ್ದರು, ಈಗ ಕರ್ನಾಟಕದ ಜನಸಂಖ್ಯೆ 7 ಕೋಟಿ ಆಗಿದೆ ಎರಡು ಪಟ್ಟು ಹೆಚ್ಚಾಗಿದೆ, 224 ತಾಲೂಕುಗಳಾಗಿದೆ ಆದರೆ ಸರ್ಕಾರಿ ನೌಕರರು ಕೇವಲ 5 ಲಕ್ಷದ 12 ಸಾವಿರ ಇದ್ದಾರೆ. ಸರ್ಕಾರಿ ನೌಕರರ ಸಂಖ್ಯೆ ಹೆಚ್ಚಾಗಬೇಕಿತ್ತು ಯಾಕೆ ಕಡಿಮೆಯಾಗಿದೆ ಎಂದು ಸದನದಲ್ಲಿ ಮುಖ್ಯಮಂತ್ರಿಗಳಿಗೆ ಪ್ರಶ್ನಿಸಿದರು.

ಅನ್ನ, ಅಕ್ಷರ, ಆರೋಗ್ಯ ಇವೆಲ್ಲ ಕನಿಷ್ಠ ಮೂಲಭೂತ ಸೌಕರ್ಯಗಳು, ಊಟ ಹಾಳಾದರೆ ಒಂದು ದಿನದ ನಷ್ಟ, ಬೆಳೆ ಹಾಳಾದರೆ ಒಂದು ವರ್ಷದ ನಷ್ಟ, ವಿದ್ಯೆ ಹಾಳಾದರೆ ಇಡೀ ಜೀವನವೇ ನಷ್ಟ ಎಂಬಂತೆ ಇಷ್ಟೊಂದು ದೊಡ್ಡಮಟ್ಟದಲ್ಲಿ ಉದ್ಯೋಗ ಭರ್ತಿ ಮಾಡದೇ ಉಳಿಸಿಕೊಂಡರೆ ಯುವಕರಿಗೆ ಹೇಗೆ ಒಳ್ಳೆ ವಿದ್ಯೆ, ಒಳ್ಳೆ ಆರೋಗ್ಯ, ಒಳ್ಳೆ ಜೀವನ ರೂಪಿಸಿ ಕೊಡಬೇಕಾಗುತ್ತದೆ. ಮುಖ್ಯಮಂತ್ರಿಗಳಿಗೆ ನಾನು ಕೇಳಿದ ಪ್ರಶ್ನೆಗೆ “ಅಗತ್ಯಕ್ಕೆ ಅನುಗುಣವಾಗಿ ಉದ್ಯೋಗಗಳನ್ನು ಭರ್ತಿ ಮಾಡಿಕೊಳ್ಳಲಾಗುವುದು” ಎಂದು ಉತ್ತರ ಕೊಟ್ಟಿದ್ದಾರೆ. ಇಲ್ಲಿಯವರೆಗೂ ಅಗತ್ಯ ಇರಲಿಲ್ಲವ ? 2 ಲಕ್ಷ ಹುದ್ದೆಗಳೂ ಖಾಲಿ ಇದೆ ಎಂದು ರಾಜ್ಯದ ಯುವಕರಿಗೆ ಯಾಕೆ ಆಶ್ವಾಸನೆ ನೀಡಬೇಕಿತ್ತು ? ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿಗಳಿಗೆ ಹೋದರೆ ಒಂದು ದಿನದಲ್ಲಿ ಆಗುವ ಕೆಲಸ ಒಂದು ವಾರ ಆಗುತ್ತೆ, ಪಾಲಿಕೆಗಳಿಗೆ ಹೋದರೆ ಒಂದು ವಾರದಲ್ಲಿ ಆಗುವ ಕೆಲಸ ಒಂದು ತಿಂಗಳು ಆಗುತ್ತದೆ ಎಂದು ಪ್ರಶ್ನಿಸಿದರು.

ಮುಂದುವರೆದು ಮಾತನಾಡಿದ ಇವರು ಕಲ್ಯಾಣ ಕರ್ನಾಟಕ ಭಾಗದ ಹುದ್ದೆಗಳಲ್ಲಿ ಶೇ 80% ನೇರ ನೇಮಕಾತಿ ಮಾಡುವುದಕ್ಕೆ ಕಾರ್ಯದರ್ಶಿಗಳಿಗೆ ಅಧಿಕಾರ ಕೊಟ್ಟಿದ್ದೇವೆ ಎಂದು ಮುಖ್ಯಮಂತ್ರಿಗಳು ಉತ್ತರದಲ್ಲಿ ಉಲ್ಲೇಖಿಸಿದ್ದಾರೆ. ಅತಿ ಹೆಚ್ಚು ಉದ್ಯೋಗ ಖಾಲಿ ಇರುವುದು ಕಲ್ಯಾಣ ಕರ್ನಾಟಕದ ಭಾಗದಲ್ಲಿ ಇದಕ್ಕೆ ಯಾರು ಜವಾಬ್ದಾರಿ, ಗುತ್ತಿಗೆ ಆಧಾರದ ಮೇಲೆ ಸರ್ಕಾರ ಉದ್ಯೋಗ ಭರ್ತಿ ಮಾಡಿಕೊಳ್ಳುತ್ತಿದೆ, ರಾಜ್ಯದಲ್ಲಿ 3 ಲಕ್ಷ ಗುತ್ತಿಗೆ ಸರ್ಕಾರಿ ನೌಕರರು ಇದ್ದಾರೆ ಅವರಿಗೆ ವೇತನ ಆಯೋಗದ ಆಧಾರದ ಮೇಲೆ ಸಂಬಳ ಸಿಗುತ್ತಿಲ್ಲ, ಅತಿಥಿ ಉಪನ್ಯಾಸಕರಿಗೆ 12,000 ಸಂಬಳ ಕೊಟ್ಟು ಪಾಠ ಮಾಡಿ ಎಂದು ಸರ್ಕಾರ ಆದೇಶ ಮಾಡುತ್ತದೆ ಇದು ಬಹಳ ಅನ್ಯಾಯ, ಸಂಬಳವನ್ನು ಹೆಚ್ಚಳ ಮಾಡಿ ಮತ್ತು ಪ್ರಸ್ತುತ ವರ್ಷ ಎಷ್ಟು ಹುದ್ದೆಗಳನ್ನು ಸರ್ಕಾರ ಭರ್ತಿ ಮಾಡುತ್ತದೆ ಎಂದು ಉತ್ತರ ನೀಡಿ ಎಂದು ಕೇಳಿದರು.

ಈ ಬಗ್ಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆರ್ಥಿಕ ಇಲಾಖೆ ನೌಕರರಿಗೆ ಸಂಬಳ ಕೊಡುವುದರಿಂದ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆಯ ಅನುಮತಿ ಬೇಕು. ಹೈದ್ರಾಬಾದ್ ಕರ್ನಾಟಕದಲ್ಲಿ 32,000 ಹುದ್ದೆಗಳು ಖಾಲಿ ಇದೆ ಇದರಲ್ಲಿ ಶೇ 80% ನೇರ ನೇಮಕಾತಿ, ಬಡ್ತಿ, ಅನುಕಂಪದ ಆಧಾರದ ಮೇಲೆ, ಆರ್ಥಿಕ ಇಲಾಖೆಯಿಂದ ಅನೊಮೋದಿಸಿದ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಅಧಿಕಾರ ಕೊಡಲಾಗಿದೆ. ಒಳ ಮೀಸಲಾತಿಯನ್ನು ಜಾರಿಗೆ ತರುವ ಸಂದರ್ಭ ಇದುದ್ದರಿಂದ ಇಲ್ಲಿಯವೆರೆಗೆ ಹುದ್ದೆಗಳನ್ನು ಭರ್ತಿ ಮಾಡಿರಿಲಿಲ್ಲ. ಈಗ ಒಳ ಮೀಸಲಾತಿ ಇತ್ಯರ್ಥ ಆಗಿದೆ ತಕ್ಷಣ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ ಎಂದು ಸದನದಲ್ಲಿ ಉತ್ತರಿಸಿದರು.