*ಶಾಂತವೇರಿ ಗೋಪಾಲಗೌಡ ಟ್ರಸ್ಟ್ ನ ಕಲ್ಲೂರು ಮೇಘರಾಜ್ ಪತ್ರಿಕಾಗೋಷ್ಠಿ* *ಶೇ.42 ಪುನರ್ಧನ ಸಾಲ ನಬಾರ್ಡ್ ನಿಂದ ಬಿಡುಗಡೆ ಮಾಡಲು ಅಮಿತ್ ಷಾ ರಿಗೆ ಪತ್ರ*
*ಶಾಂತವೇರಿ ಗೋಪಾಲಗೌಡ ಟ್ರಸ್ಟ್ ನ ಕಲ್ಲೂರು ಮೇಘರಾಜ್ ಪತ್ರಿಕಾಗೋಷ್ಠಿ*
*ಶೇ.42 ಪುನರ್ಧನ ಸಾಲ ನಬಾರ್ಡ್ ನಿಂದ ಬಿಡುಗಡೆ ಮಾಡಲು ಅಮಿತ್ ಷಾ ರಿಗೆ ಪತ್ರ*
ಕರ್ನಾಟಕ ರಾಜ್ಯದಲ್ಲಿ 6025 ಸಹಕಾರ ಸಂಘಗಳಿದ್ದು, 53.50 ಲಕ್ಷ ಸದಸ್ಯರಾಗಿದ್ದು, ಕೇವಲ 14.94 ಲಕ್ಷ ರೈತರಿಗೆ 13.79 ಕೋಟಿ ರೂಗಳನ್ನ ಶೂನ್ಯ ಬಡ್ಡಿ ದರದಲ್ಲಿ ಸಾಲ ವಿತರಿಸಿದ್ದು, ಇದಕ್ಕೆ ನಬಾರ್ಡ್ ಸಂಸ್ಥೆಯು ಪುನರ್‌ಧನ ಸಾಲದ ಧನವನ್ನ ಶೇ.58% ರಷ್ಟು ಕಡಿಮೆ ಮಾಡಿರುವುದು ಕಾರಣವಾಗಿದೆ. ಈ ಬಗ್ಗೆ ಇನ್ನುಳಿದ ಶೇ.42% ಪುನರ್‌ಧನ ಸಾಲದ ಮೊತ್ತವನ್ನ ಕೂಡಲೆ ನಬಾರ್ಡ್ ನಿಂದ ಬಿಡುಗಡೆ ಮಾಡಿಸಲು ಕೇಂದ್ರದ ಗೃಹ ಹಾಗೂ ಸಹಕಾರ ಸಚಿವರಾದ ಶ ‘ಅಮಿತ್ ಷಾ ಜಿ ರವರಿಗೆ ನಮ್ಮ ಸಂಘಟನೆಯು ಪತ್ರ ಬರೆದು ಅಗ್ರಹಿಸಿದೆ ಎಂದು ಶಾಂತವೇರಿ ಗೋಪಾಲಗೌಡ ಸಮಾಜವಾದಿ ಅಧ್ಯಯನ ಕೇಂದ್ರ ಟ್ರಸ್ಟ್ ನ ಕಲ್ಲೂರು ಮೇಘರಾಜ್ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,
ಕರ್ನಾಟಕದಲ್ಲಿ ರೈತರಿಗೆ ಸಹಕಾರ ಸಂಘಗಳು, ಡಿ.ಸಿ.ಸಿ ಬ್ಯಾಂಕ್ ಮತ್ತು ಅಪೆಕ್ಸ್ ಬ್ಯಾಂಕುಗಳಿಂದ ರೈತರಿಗೆ ಕೃಷಿ ಚಟುವಟಿಕೆಗೆ ಸಕಾಲದಲ್ಲಿ ಶೂನ್ಯ ಬಡ್ಡಿದರದ ಸಾಲಸೌಲಭ್ಯ ಸಿಗದೇ ಇರುವುದರಿಂದ ಕೃಷಿ ಚಟುವಟಿಕೆಗಳು ಅರ್ಧಕ್ಕೆ ನಿಂತು ಹೋಗಿವೆ. ಗಾಯದ ಮೇಲೆ ಬರೆಎಳೆದಂತೆ ಕಬ್ಬು ಬೆಳೆಗಾರರಿಗೆ ಪೂರ್ಣ ಪ್ರಮಾಣದಲ್ಲಿ ಬೆಂಬಲ ಬೆಲೆ ಸಕಾಲದಲ್ಲಿ ಬೆಲೆ ದೊರೆತ್ತಿರುವುದಿಲ್ಲ. ಮೆಕ್ಕೆಬೆಳೆ ಬೆಳೆದ ರೈತರಿಗೆ ಕ್ವಿಂಟಾಲಿಗೆ 2400/-ರೂಪಾಯಿ ಕನಿಷ್ಠ ಬೆಲೆ ನಿಗಧಿಯಾದರು ಖರೀದಿ ಕೇಂದ್ರಗಳನ್ನ ರಾಜ್ಯ ಸರ್ಕಾರ ಸಕಾಲದಲ್ಲಿ ತೆರೆಯದೆ ರೈತರನ್ನ ಸಂಕಷ್ಟಕ್ಕೆ ಈಡು ಮಾಡಿದೆ ಎಂದರು.
ಕಳೆದ ಬಜೆಟ್‌ನಲ್ಲಿ ಸಿದ್ದರಾಮಯ್ಯನವರು ಕೆ.ಸಿ.ಸಿ.ಎನ್ ಯೋಜನೆಯಡಿಯಲ್ಲಿ (ಅಲ್ಪಾವಧಿ ರೈತರ ಸಾಲ) ಶೂನ್ಯ ಬಡ್ಡಿ ದರದಲ್ಲಿ 5.00ಲಕ್ಷದ ವರೆಗೆ ಸಾಲ ಸೌಲಭ್ಯವನ್ನ ರೈತರಿಗೆ ಒದಿಗಿಸುವುದಾಗಿ ಘೋಷಣೆಮಾಡಿ ಈ ತನಕ ಶೂನ್ಯ ಬಡ್ಡಿ ದರದಲ್ಲಿ ಯಾವುದೇ ರೈತರಿಗೆ ಅಲ್ಪಾವಧಿ ಸಾಲವನ್ನ ನೀಡದೆ ರೈತರಿಗೆ ಮಕ್ಮಲ್ ಟೋಪಿ ಹಾಕಿದ್ದಾರೆ. ಸಾಲ ವಿತರಣೆ ಮತ್ತು ಬೆಳೆ ಖರೀದಿ ಪ್ರಕ್ರಿಯೆಗಳಲ್ಲಿನ ಲೋಪ ದೋಷಗಳಿಂದ ಕರ್ನಾಟಕದಲ್ಲಿ ನ್ಯಾಷನಲ್ ಕ್ರೈಂ ರೆಕಾರ್ಡ್ಸ್‌ನ ಇತ್ತೀಚಿನ ವರದಿಯ ಪ್ರಕಾರ ರೈತರ ಆತ್ಮಹತ್ಯೆಯ ವಿಷಯದಲ್ಲಿ ಕರ್ನಾಟಕವು ದೇಶದಲ್ಲಿಯೇ 2ನೇ ಸ್ಥಾನದಲ್ಲಿದೆ ಎಂದು ವರದಿಯಾಗಿದೆ. ಇದು ಸಿದ್ದರಾಮಯ್ಯನವರ ಸರ್ಕಾರಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಟೀಕಿಸಿದರು
*ಆರ್.ಬಿ.ಐ ಸುತ್ತೋಲೆ ಸ್ವಾಗತಾರ್ಹ:*
ಸಹಕಾರಿ ಬ್ಯಾಂಕಿಗ್ ವಲಯಕ್ಕೆ ಸಂಬಂಧಿಸಿದಂತೆ, ಭಾರತೀಯ ರಿಸರ್ವ ಬ್ಯಾಂಕ್, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ (ತಿದ್ದುಪಡಿ) 2025, ಸೆಕ್ಷನ್ 10ಎ(2) (ಜ) ಅನ್ವಯ ರಾಜ್ಯದ ಅಪೆಕ್ಸ್ ಬ್ಯಾಂಕ್, ಜಿಲ್ಲಾ ಸಹಕಾರಿ ಕೇಂದ್ರ ಬ್ಯಾಂಕ್ (ಡಿ.ಸಿ.ಸಿ) ಹಾಗೂ ಪಟ್ಟಣ ಸಹಕಾರ ಬ್ಯಾಂಕ್‌ಗಳ ನಿರ್ದೇಶಕರ ಆಡಳಿತ ಮಂಡಳಿಗೆ ಕೇವಲ 10 ವರ್ಷಗಳಿಗೆ ಮಾತ್ರ ನಿರ್ದೆಶಕರಾಗಲು ಅರ್ಹರಾಗುತ್ತಾರೆ ಎಂಬ ಸುತ್ತೋಲೆ ನಿಜಕ್ಕೂ ಸಹಕಾರ ಕ್ಷೇತ್ರದಲ್ಲಿ ಹೊಸ ಶಕೆಯೊಂದನ್ನು ಕಾಣುವುದಲ್ಲದೆ ಹೊಸ ಯೋಜನೆ-ಯೋಚನೆ ಹರಿದುಬರಲು ಸಹಾಯಕವಾಗಿದೆ. ಸಹಕಾರ ಕ್ಷೇತ್ರದಲ್ಲಿ ನಿರಂತರವಾಗಿ ಏಕಸ್ವಾಮ್ಯತೆಯನ್ನು ಸಾಧಿಸುತ್ತಿದ್ದ ಪಟ್ಟಭದ್ರರನ್ನು ಕುರ್ಚಿಯಿಂದ ಕಿತ್ತೊಗೆದು ಬಿ.ಸಿ ರಕ್ತದ ಯುವ ಶಕ್ತಿ ಪ್ರವೇಶಮಾಡಲು ಸಹಕಾರಿಯಾಗಲಿದೆ. ಇದೇ ರೀತಿ ಸಹಕಾರ ಕ್ಷೇತ್ರದಲ್ಲಿ ಗ್ರಾಮೀಣ, ಪಟ್ಟಣ ಸಹಕಾರ ಸಂಘಗಳಲ್ಲಿ, ತಾಲ್ಲೂಕು ಮಟ್ಟದ ಪಿ.ಎಲ್.ಡಿ ಬ್ಯಾಂಕ್‌ಗಳಲ್ಲಿ, ಡಿ.ಸಿ.ಸಿ ಬ್ಯಾಂಕ್‌ಗಳಲ್ಲಿ ಅಪೆಕ್ಸ್ ಬ್ಯಾಂಕ್‌ಗಳಲ್ಲಿ ಹಾಗೂ ಎಲ್ಲಾ ಸಹಕಾರ ವಲಯದ ಸಂಘ-ಸಂಸ್ಥೆಗಳಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರುಗಳ ಸ್ಥಾನಕ್ಕೆ ಎಲ್ಲಾ ಹಂತಗಳಲ್ಲಿಯೂ ಮೀಸಲಾತಿಯನು ಕಡ್ಡಾಯವಾಗಿ ಜಾರಿಗೊಳಿಸಲು ನಾವು ಕ್ರಮ ಕೈಗೊಳ್ಳುವಂತೆ ಕೇಂದ್ರ ಸಚಿವರಾದ ಅಮೀತ್ ಷಾರವರಿಗೆ ಪ್ರತ್ಯೇಕವಾಗಿ ಪತ್ರ ಬರೆದು ಆಗ್ರಹಿಸಿದೆ ಎಂದರು.


