*ಪತ್ರಿಕಾಗೋಷ್ಠಿಯಲ್ಲಿ ಶರಣ ಹೆಚ್.ಎಂ.ಚಂದ್ರಶೇಖರಪ್ಪ- ಹೆಚ್.ಸಿ.ಯೋಗೇಶ್ ವಿವರಣೆ* *ಶಿವಮೊಗ್ಗ ಬಸವಕೇಂದ್ರದಿಂದ ಡಿ.20 ರಂದು ಶರಣ ಸಂಗಮ-310* *ಇಸ್ರೋ ಚಂದ್ರಯಾನ-3ರ ಹಿರಿಯ ವಿಜ್ಞಾನಿ ರೂಪರವರಿಗೆ ವಿಶೇಷ ಸನ್ಮಾನ*
*ಪತ್ರಿಕಾಗೋಷ್ಠಿಯಲ್ಲಿ ಶರಣ ಹೆಚ್.ಎಂ.ಚಂದ್ರಶೇಖರಪ್ಪ- ಹೆಚ್.ಸಿ.ಯೋಗೇಶ್ ವಿವರಣೆ*
*ಶಿವಮೊಗ್ಗ ಬಸವಕೇಂದ್ರದಿಂದ ಡಿ.20 ರಂದು ಶರಣ ಸಂಗಮ-310*
*ಇಸ್ರೋ ಚಂದ್ರಯಾನ-3ರ ಹಿರಿಯ ವಿಜ್ಞಾನಿ ರೂಪರವರಿಗೆ ವಿಶೇಷ ಸನ್ಮಾನ*
ಶಿವಮೊಗ್ಗದ ಬಸವಕೇಂದ್ರದಿಂದ ಡಿ.20 ರ ಶನಿವಾರ ಸಂಜೆ 6.30 ಕ್ಕೆ ಶರಣ ಸಂಗಮ-310 ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಹುಣಸಘಟ್ಟ ಶರಣ ಮಾಜಿ ಶಾಸಕ ಎಚ್.ಎಂ.ಮಲ್ಲಿಕಾರ್ಜುನಪ್ಪ, ಶರಣೆ ಲಿಂಗಮ್ಮ ಮಲ್ಲಿಕಾರ್ಜುನಪ್ಪ, ಶರಣೆ ಶಾರದಾ ಎಚ್.ಎಂ.ಚಂದ್ರಶೇಖರಪ್ಪ ದತ್ತಿ ಅಡಿಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಮಾಜಿ ಶಾಸಕ ಹೆಚ್.ಎಂ.ಚಂದ್ರಶೇಖರಪ್ಪ ಪತ್ರಿಕಾಗೋಷ್ಠಿಯಲ್ಲಿಂದು ಹೇಳಿದರು.
ಬಸವಕೇಂದ್ರದ ಡಾ.ಬಸವ ಮರುಳಸಿದ್ಧ ಸ್ವಾಮಿಗಳು, ನಿಡಸೋಸಿಯ ಶ್ರೀನಿಜಲಿಂಗೇಶ್ವರ ಮಹಾಸ್ವಾಮಿಗಳ ದಿವ್ಯ ಸಾನಿಧ್ಯದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಶರಣೆ ಎಂ.ವಿ.ರೂಪ ಇಸ್ರೋ ಚಂದ್ರಯಾನ-3 ರಲ್ಲಿ ಕಾರ್ಯನಿರ್ವಹಿಸಿ ಗಮನಸೆಳೆದವರು. ಇವರಿಗೆ ಸನ್ಮಾನಿಸಲಿದ್ದು, ತಮ್ಮ ಅನುಭವ ಹಂಚಿಕೊಳ್ಳಲಿದ್ದಾರೆ ಎಂದು ಹೆಚ್.ಸಿ.ಯೋಗೇಶ್ ವಿವರಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ವಿಜೇತರಾದ ಕೋಣಂದೂರು ಲಿಂಗಪ್ಪ, ಡಾ.ರಾಜೇಂದ್ರ ಚೆನ್ನಿ, ಬಿ.ಟಾಕಪ್ಪ ಕಣ್ಣೂರುರವರಿಗೆ ಅಭಿನಂದಿಸಲಾಗುವುದು.ಅಧ್ಯಕ್ಷತೆಯನ್ನು ಬಸವಕೇಂದ್ರದ ಅಧ್ಯಕ್ಷ ಜಿ.ಬೆನಕಪ್ಪ ವಹಿಸಲಿದ್ದಾರೆ. ಅಕ್ಕನ ಬಳಗದಿಂದ ವಚನ ಗಾಯನ ನಡೆಯಲಿದೆ ಎಂದರು.


