*ಸೀಬರ್ಡ್ ಬಸ್ ಭೀಕರ ದುರಂತ;* *ಶಿವಮೊಗ್ಗದ ಆ ಇಬ್ಬರು ಏನಾದರು?* *ಶಿವಮೊಗ್ಗದ ಪ್ರಯಾಣಿಕರಾದ ಮಸ್ರತುನ್ನಿಸಾ ಮತ್ತು ಸೈಯದ್ ಜಮೀರ್ ಗೌಸ್ ಮಾಹಿತಿ ಇನ್ನೂ ನಿಗೂಢ!* *سمندری بس کا سانحہ؛* *شیواموگا کے ان دو لوگوں کا کیا ہوا؟* *شیواموگا، مسرتھونیسا اور سید جمیر غوث کے مسافروں کے بارے میں معلومات اب بھی ایک معمہ ہے!*
*ಸೀಬರ್ಡ್ ಬಸ್ ಭೀಕರ ದುರಂತ;*
*ಶಿವಮೊಗ್ಗದ ಆ ಇಬ್ಬರು ಏನಾದರು?*
*ಶಿವಮೊಗ್ಗದ ಪ್ರಯಾಣಿಕರಾದ ಮಸ್ರತುನ್ನಿಸಾ ಮತ್ತು ಸೈಯದ್ ಜಮೀರ್ ಗೌಸ್ ಮಾಹಿತಿ ಇನ್ನೂ ನಿಗೂಢ!*
*سمندری بس کا سانحہ؛*
*شیواموگا کے ان دو لوگوں کا کیا ہوا؟*
*شیواموگا، مسرتھونیسا اور سید جمیر غوث کے مسافروں کے بارے میں معلومات اب بھی ایک معمہ ہے!*

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ಬಳಿಯ ಗೊರ್ಲತ್ತು ಕ್ರಾಸ್ ಬಳಿ ನಡೆದ ಲಾರಿ- ಬಸ್ ನಡುವಿನ ಭೀಕರ ಅಪಘಾತದಲ್ಲಿ ಶಿವಮೊಗ್ಗ ಮೂಲದ ಇಬ್ಬರು ಕಣ್ಮರೆಯಾಗಿದ್ದು,ಅವರ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯುತ್ತಿಲ್ಲ.
ಬೆಂಗಳೂರು- ಶಿವಮೊಗ್ಗ- ಸಾಗರ- ಹೊನ್ನಾವರದ ನಡುವೆ ಸಂಚರಿಸುವ ಸೀಬರ್ಡ್ ಟೂರಿಸ್ಟ್ ಬಸ್( ಕೆಎ 01, ಎಇ-5217) ಬುಧವಾರದಂದು ರಾತ್ರಿ ಸಂಚಾರ ಆರಂಭಿಸಿದ್ದು, ಮಧ್ಯರಾತ್ರಿ 2 ಗಂಟೆ ಹೊತ್ತಿಗೆ ಅಪಘಾತಕ್ಕೀಡಾದ ಲಾರಿಗೆ ಆಕಸ್ಮಿಕವಾಗಿ ಈ ಬಸ್ ಡಿಕ್ಕಿಯಾಗಿ ಹೊತ್ತಿ ಉರಿದಿದೆ.
32 ಸೀಟ್ ಕ್ಯಪಾಸಿಟಿಯ ಈ ಬಸ್ಸಿನಲ್ಲಿ 29 ಜನ ಪ್ರಯಾಣಿಕರಿದ್ದರು. ಇವರಲ್ಲಿ ಶಿವಮೊಗ್ಗದ ಮಸ್ರತುನ್ನಿಸಾ .ಎಸ್(ಮಹಿಳೆ), ಸೈಯದ್ ಜಮೀರ್ ಗೌಸ್(ಪುರುಷ) ಕೂಡ ಪ್ರಯಾಣಿಸುತ್ತಿದ್ದರು.
ಈ ಇಬ್ಬರ ಬಗ್ಗೆ ಈಗ ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ. ಬೆಂಗಳೂರಿನ ಯಶವಂತಪುರದಿಂದ ಈ ಬಸ್ ಹತ್ತಿದ್ದರು. ಇವರ ಮೊಬೈಲ್ ನಂಬರ್(9663277553) ಕೂಡ ಈವರೆಗೂ ಸ್ವಿಚ್ ಆಫ್ ಬರುತ್ತಿದೆ.
ಶಿವಮೊಗ್ಗದಲ್ಲಿ ಸ್ಥಳೀಯವಾಗಿಯೂ ಈ ಇಬ್ಬರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗುತ್ತಿಲ್ಲ. ಈ ಇಬ್ಬರು ಉಮ್ರಾ ಪ್ರವಾಸ ಮುಗಿಸಿ ಬಂದವರಾ? ಅಧಿಕೃತ ಮಾಹಿತಿ ದೊರೆಯುತ್ತಿಲ್ಲ.
*سمندری بس کا سانحہ؛*
*شیواموگا کے ان دو لوگوں کا کیا ہوا؟*
*شیواموگا، مسرتھونیسا اور سید جمیر غوث کے مسافروں کے بارے میں معلومات اب بھی ایک معمہ ہے!*
شیواموگا کے دو لوگ چتردرگا ضلع میں ہیریور کے قریب گورلاتھو کراس کے قریب لاری اور بس کے درمیان ہوئے خوفناک حادثے میں لاپتہ ہو گئے ہیں، اور ان کے بارے میں زیادہ معلومات دستیاب نہیں ہیں۔
سی برڈ ٹورسٹ بس (KA 01, AE-5217) جو بنگلور-شیموگا-ساگارا-ہوناوار کے درمیان چلتی ہے، نے بدھ کی رات اپنا سفر شروع کیا، اور صبح 2 بجے، بس حادثے کا شکار ہونے والی لاری سے ٹکرا گئی اور اس میں آگ لگ گئی۔
32 سیٹوں والی اس بس میں 29 مسافر سوار تھے۔ ان میں مسرتھونیسا (عورت) اور سید جمیر غوث (مرد) شیموگا سے تھے۔
ان دونوں کے بارے میں ابھی کوئی معلومات دستیاب نہیں ہیں۔ وہ بنگلورو کے یشونت پور سے اس بس میں سوار ہوئے تھے۔ ان کا موبائل نمبر (9663277553) بھی اب تک بند ہے۔
شیموگا میں ان دونوں کے بارے میں مقامی طور پر کوئی معلومات دستیاب نہیں ہے۔ کیا یہ دونوں عمرہ کر کے واپس آئے تھے؟ کوئی سرکاری معلومات دستیاب نہیں ہے۔


