*ಹಣಗೆರೆಕಟ್ಟೆಯಲ್ಲಿ 62,42,145 ರೂ. ಹುಂಡಿ ಹಣ ಸಂಗ್ರಹ:* *26 ಲಕ್ಷ ರೂ. ವೆಚ್ಚದ ಸರದಿ ಸಾಲಿನ ಮೇಲ್ಛಾವಣಿ ನಿರ್ಮಾಣ: ಬಿ. ವರಲಕ್ಷ್ಮಿ*

*ಹಣಗೆರೆಕಟ್ಟೆಯಲ್ಲಿ 62,42,145 ರೂ. ಹುಂಡಿ ಹಣ ಸಂಗ್ರಹ:*
*26 ಲಕ್ಷ ರೂ. ವೆಚ್ಚದ ಸರದಿ ಸಾಲಿನ ಮೇಲ್ಛಾವಣಿ ನಿರ್ಮಾಣ: ಬಿ. ವರಲಕ್ಷ್ಮಿ*

ಶಿವಮೊಗ್ಗ: ಹಣಗೆರೆಕಟ್ಟೆಯ ಭೂತರಾಯ ಚೌಡೇಶ್ವರಿ ದೇವಾಲಯ, ಹಜರತ್ ಸೈಯದ್ ಸಾದತ್ ದರ್ಗಾಕ್ಕೆ ಆಗಮಿಸುವ ಸಾವಿರಾರು ಭಕ್ತರು ಸರತಿ ಸಾಲಿನಲ್ಲಿ ನಿಂತಾಗ ಮಳೆಗಾಲದಲ್ಲಿ ಮಳೆ ಮತ್ತು ಬೇಸಿಗೆಯ ಬಿಸಿಲಿನಿಂದ ತೀವ್ರ ತೊಂದರೆಗೊಳಗಾಗುತ್ತಿದ್ದರು. ಇದನ್ನು ತಪ್ಪಿಸಲು 26 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ಸರತಿ ಸಾಲಿನ ಮೇಲ್ಛಾವಣೆ ಬಹುತೇಕ ಪೂರ್ಣಗೊಂಡಿದ್ದು, ಇದರಿಂದ ಭಕ್ತರಿಗೆ ಅನುಕೂಲವಾಗಲಿದೆ ಎಂದು ಧಾರ್ಮಿಕ ದತ್ತಿ ಇಲಾಖೆಯ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ಬಿ. ವರಲಕ್ಷ್ಮಿ ಪ್ರಕಾಶ್ ಹೇಳಿದರು.
ತೀರ್ಥಹಳ್ಳಿಯ ತಹಸೀಲ್ದಾರ್ ರಂಜಿತ್ ಅವರ ಉಸ್ತುವಾರಿಯಲ್ಲಿ ನಿನ್ನೆ ಬುಧವಾರ ಬೆಳಿಗ್ಗೆ ಇಂದ ಸಂಜೆಯವರೆಗೆ ನಡೆದ ಹಣಗೆರೆಕಟ್ಟೆಯ ಭೂತರಾಯ ಚೌಡೇಶ್ವರಿ ದೇವಾಲಯದ ಹುಂಡಿ ಹಣ ಎಣಿಕೆ ಸಂದರ್ಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಹಣಗೆರೆಕಟ್ಟೆ ದಕ್ಷಿಣ ಭಾರತದಲ್ಲಿಯೇ ಹಿಂದು ಮತ್ತು ಮುಸ್ಲಿಂರ ಸೌಹಾರ್ದತೆ ಹಾಗೂ ಭಾವೈಕ್ಯತೆಯ ಧಾರ್ಮಿಕ ಕೇಂದ್ರವಾಗಿ ಪ್ರಸಿದ್ಧಿ ಪಡೆದಿದೆ. ಇಲ್ಲಿಗೆ ಆಗಮಿಸುವ ಭಕ್ತಾಧಿಗಳಿಗೆ ಮೂಲ ಸೌಕರ್ಯ ಕಲ್ಪಿಸಲು ರಾಜ್ಯ ಸರ್ಕಾರ ಮತ್ತು ಧಾರ್ಮಿಕ ದತ್ತಿ ಇಲಾಖೆ ಬದ್ಧವಾಗಿದೆ. ಈ ಹಿಂದೆಯೇ ಸಾರ್ವಜನಿಕ ಶೌಚಾಲಯ, ಸ್ನಾನಗೃಹ, ಅಡುಗೆ ಕೋಣೆ ಕಟ್ಟಡ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಇತ್ತೀಚೆಗೆ ನಾಲ್ಕು ಹೈಮಾಸ್ಟ್ ದೀಪಕಂಬಗಳನ್ನು ಸ್ಥಾಪಿಸಲಾಗಿದೆ. ಸರದಿ ಸಾಲಿನ ಮೇಲ್ಛಾವಣಿ ಸಹ ಸಧ್ಯದಲ್ಲೇ ಉದ್ಘಾಟನೆಗೊಳ್ಳಲಿದೆ ಎಂದು ತಿಳಿಸಿದರು.

ವಾಹನಗಳನ್ನು ನಿಲ್ಲಿಸಲು ಇತ್ತೀಚೆಗೆ ಸುಸಜ್ಜಿತವಾದ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಭಕ್ತರು ಸ್ವಚ್ಛತೆಗೆ ಆದ್ಯತೆ ನೀಡಿ ಇಲ್ಲಿನ ಸೌಕರ್ಯಗಳನ್ನು ಸದ್ಭಳಕೆ ಮಾಡಿಕೊಳ್ಳಬೇಕೆಂದು ಮನವಿ ಮಾಡಿದರು.
*62,42,145 ರೂ. ಲಕ್ಷ ಹಣ ಸಂಗ್ರಹ:* ಬುಧವಾರ ನಡೆದ ಎಣಿಕೆಯ ಸಂದರ್ಭದಲ್ಲಿ 2,45,695 ರೂ. ಚಿಲ್ಲರೆ ಸೇರಿದಂತೆ ಒಟ್ಟು 62,42,145 ರೂ. ಕಾಣಿಕೆ ರೂಪದಲ್ಲಿ ಹುಂಡಿ ಹಣ ಸಂಗ್ರಹವಾಗಿರುವುದು ಕಂಡು ಬಂದಿದೆ. ಕಳೆದ ಆಗಸ್ಟ್ನಲ್ಲಿ ನಡೆದ ಎಣಿಕೆಯಲ್ಲಿ 71ಲಕ್ಷದ 95 ಸಾವಿರ ಹಣ ಸಂಗ್ರಹಗೊಂಡಿತ್ತು.
ಹುಂಡಿ ಹಣ ಎಣಿಕೆ ಸಂದರ್ಭದಲ್ಲಿ ತೀರ್ಥಹಳ್ಳಿ ತಹಸೀಲ್ದಾರ್ ಎಸ್. ರಂಜಿತ್, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯೆ ಬಿ. ವರಲಕ್ಷ್ಮಿ ಪ್ರಕಾಶ್, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ರೇಣುಕಾ ಹೊಸಮನಿ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಾಮಪ್ಪ, ಸದಸ್ಯರುಗಳಾದ ಡಿ.ಎಸ್. ಸುನಿಲ್ ಕುಮಾರ್, ಸುಮಾ, ಬಿ. ಝಲೇಕ. ಎಸ್.ಸಿ. ಸತ್ಯನಾರಾಯಣ, ಡಿ.ಕೆ. ಮಂಜುನಾಥ್, ಉಲಿಶ್, ಮುಜಿವರ್ ಅಫ್ಸರ್ ಪಾಶಾ, ಧಾರ್ಮಿಕ ದತ್ತಿ ಇಲಾಖೆಯ ದೀಪಕ್, ಕಂದಾಯ ನಿರೀಕ್ಷಕರುಗಳಾದ ವಿನಯ್, ಡಿ.ಟಿ. ಶಿವಕುಮಾರ್, ಸುಧೀರ್ ಕುಮಾರ್, ಮಾಳೂರು ಪೊಲೀಸ್ ಠಾಣೆಯ ಮೇಘರಾಜ್ ಮತ್ತು ಸಿಬ್ಬಂದಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.