*ಶಿವಮೊಗ್ಗದ ಸೀಗೆಹಟ್ಟಿಯಲ್ಲಿ ಗಮನ ಸೆಳೆದ ಹುಟ್ಟುಹಬ್ಬದ ಕಾರ್ಯಕ್ರಮ* *ಸಮಾಜ ಸೇವೆಯಲ್ಲಿ ತಲ್ಲೀನರಾಗಿಯೇ ತಮ್ಮ‌ ಜನ್ಮದಿನ ಆಚರಿಸಿಕೊಂಡ ಡಾ.ಶರತ್ ಮರಿಯಪ್ಪ*

*ಶಿವಮೊಗ್ಗದ ಸೀಗೆಹಟ್ಟಿಯಲ್ಲಿ ಗಮನ ಸೆಳೆದ ಹುಟ್ಟುಹಬ್ಬದ ಕಾರ್ಯಕ್ರಮ*

*ಸಮಾಜ ಸೇವೆಯಲ್ಲಿ ತಲ್ಲೀನರಾಗಿಯೇ ತಮ್ಮ‌ ಜನ್ಮದಿನ ಆಚರಿಸಿಕೊಂಡ ಡಾ.ಶರತ್ ಮರಿಯಪ್ಪ*

ಕಾಂಗ್ರೆಸ್ ಯುವ ಮುಖಂಡ, ಹಾಪ್‌ಕಾಮ್ಸ್ ನಿರ್ದೇಶಕ ಡಾ.ಶರತ್ ಮರಿಯಪ್ಪ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಹುಟ್ಟುಹಬ್ಬದ ಅಂಗವಾಗಿ ಸೀಗೆಹಟ್ಟಿಯ ಶ್ರೀ ಅಂತರಘಟ್ಟಮ್ಮ ಸಮುದಾಯ ಭವನದಲ್ಲಿ ವಿದ್ಯಾರ್ಥಿಗಳಿಗೆ ಉಚಿತ ನೋಟ್‌ಬುಕ್ ವಿತರಣೆ, ರಕ್ತದಾನ ಶಿಬಿರ, ಆರೋಗ್ಯ ತಪಾಸಣೆ, ದಂತ ಮತ್ತು ನೇತ್ರ ತಪಾಸಣೆ, ಸ್ತ್ರೀರೋಗ ತಜ್ಞರಿಂದ ಸಲಹೆ ಮತ್ತು ತಪಾಸಣೆ ನಡೆಸಲಾಯಿತು. ಹಾಗೂ ಅಂತರಘಟ್ಟಮ್ಮ ದೇವಾಲಯದಲ್ಲಿ ವಿಶೇಷ ಪೂಜೆ ಕೂಡ ಹಮ್ಮಿಕೊಳ್ಳಲಾಗಿತ್ತು.

ನಂತರ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್.ಪ್ರಸನ್ನಕುಮಾರ್, ಹುಟ್ಟುಹಬ್ಬವನ್ನು ಸಾಮಾಜಿಕ ಸೇವೆಯನ್ನು ಮಾಡುವುದರ ಮೂಲಕ ಆಚರಿಸಿಕೊಂಡರೆ ಅದಕ್ಕೆ ಹೆಚ್ಚು ಅರ್ಥಬರುತ್ತದೆ. ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಬಡವರಿಗೆ ಒಂದು ರೀತಿಯಲ್ಲಿ ವರದಾನವಾಗಿರುತ್ತವೆ. ಈ ಹಿನ್ನಲೆಯಲ್ಲಿ ಶರತ್ ಮರಿಯಪ್ಪ ಅವರು ತಮ್ಮ ಹುಟ್ಟುಹಬ್ಬವನ್ನು ಸಾಮಾಜಿಕ ಸೇವೆಯ ಮೂಲಕ ಸಾರ್ಥಕಗೊಳಿಸಿದ್ದಾರೆ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ, ಕಾಂಗ್ರೆಸ್ ಮುಖಂಡ ಎಂ.ಶ್ರೀಕಾಂತ್ ಮಾತನಾಡಿ, ಸೇವೆ ಯಾವಾಗಲೂ ನಮ್ಮನ್ನು ಕಾಪಾಡುತ್ತದೆ. ಸೇವೆ ಮಾಡುವ ಮನಸ್ಸು ಮುಖ್ಯ. ಈ ನಿಟ್ಟಿನಲ್ಲಿ ಶರತ್ ಅವರು ಒಳ್ಳೆಯ ಮನಸ್ಸಿನಿಂದ ಸಮಾಜ ಸೇವೆಯ ಮೂಲಕ ಗಮನ ಸೆಳೆಯುತ್ತಿದ್ದಾರೆ ಎಂದರು.

ಮೆಟ್ರೋ ಆಸ್ಪತ್ರೆಯ ವೈದ್ಯ ಡಾ||ಪೃಥ್ವಿ ಮಾತನಾಡಿ, ಆರೋಗ್ಯದ ಕಡೆ ಎಲ್ಲರೂ ಗಮನಹರಿಸಬೇಕಾಗಿದೆ. ತಪಾಸಣೆ ಬಹಳ ಮುಖ್ಯ. ಇದರಿಂದ ಮುಂದಾಗುವ ತೊಂದರೆಗಳನ್ನು ತಡೆಗಟ್ಟಬಹುದು. ಹುಟ್ಟುಹಬ್ಬದ ಪ್ರಯುಕ್ತ ಈ ರೀತಿಯ ಉಚಿತ ತಪಾಸಣಾ ಶಿಬಿರಗಳನ್ನು ಏರ್ಪಡಿಸುವುದು ಸಾರ್ಥಕ ಸೇವೆಯ ಹೆಜ್ಜೆಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಎಸ್.ಕೆ. ಮರಿಯಪ್ಪ, ಪ್ರಮುಖರಾದ ಕಲಗೋಡು ರತ್ನಾಕರ್, ಕೆ.ರಂಗನಾಥ್, ಹೆಚ್.ಪಿ. ಗಿರೀಶ್, ಪಾಲಾಕ್ಷಿ, ಸಂತೋಷ್, ತಾರಾನಾಥ್, ಬಸವರಾಜ್, ವೀರೇಶ್, ವಿನಯ್ ತಾಂದ್ಲೆ, ಜ್ಯೋತಿ ಹರಳಪ್ಪ, ಚಂದ್ರು ಸೇರಿದಂತೆ ಹಲವರಿದ್ದರು.