*ಶಿವಮೊಗ್ಗ ಜಿಲ್ಲೆಗೆ ಬಂದ ಹೊಸ ಡಿಸಿ ಪ್ರಭುಲಿಂಗ ಕವಳಿಕಟ್ಟಿ, ಎಸ್ ಪಿ ನಿಖಿಲ್ ‌.ಬಿ. ರವರಿಗೆ ಸ್ವಾಗತ ಕೋರುತ್ತಾ…*

*ಶಿವಮೊಗ್ಗ ಜಿಲ್ಲೆಗೆ ಬಂದ ಹೊಸ ಡಿಸಿ ಪ್ರಭುಲಿಂಗ ಕವಳಿಕಟ್ಟಿ, ಎಸ್ ಪಿ ನಿಖಿಲ್ ‌.ಬಿ. ರವರಿಗೆ ಸ್ವಾಗತ ಕೋರುತ್ತಾ…*

ಶಿವಮೊಗ್ಗಕ್ಕೆ ಬಂದ ಹೊಸ ಡಿಸಿ ಪ್ರಭುಲಿಂಗ ಕವಳಿಕಟ್ಟಿ ಮತ್ತು ಎಸ್ ಪಿ ನಿಖಿಲ್ .ಬಿ. ಕ್ರಿಯಾಶೀಲವಾಗಿದ್ದಾರೆ. ಅವರ ಮಾತುಗಳಲ್ಲಿ ಶಿವಮೊಗ್ಗದ ಜನತೆಯ ಸೇವೆ ಮಾಡುವ ಕನಸುಗಳು ಕಾಣುತ್ತವೆ. ಕೆಲಸದ ಚುರುಕುತನವಿದೆ. ಸಾಹಿತ್ಯದ ವಿಶ್ವ ಮಾನವತೆಯ ತುಣುಕುಗಳು ಕಾಣಸಿಗುತ್ತವೆ.

ಕೋಮು ದ್ವೇಷಕ್ಕೆ ಮಶಾಲು ಹಿಡಿದು ಕಾಯುತ್ತಿರುವ ಕೆಲ ರಾಜಕಾರಣಿಗಳಿಂದಾಗಿ ಸೂಕ್ಷ್ಮ ಪ್ರದೇಶವೇ ಆಗಿ ಹೋಗಿರುವ ಶಿವಮೊಗ್ಗ ಜಿಲ್ಲೆ ಕೇವಲ ಸಾಂಸ್ಕೃತಿಕ, ಸಾಹಿತ್ಯಿಕ, ಹೋರಾಟದ ಜಿಲ್ಲೆಯಾಗಿ ಉಳಿದಿಲ್ಲ; ಇಲ್ಲೀಗ ಗಾಂಜಾ ಎಗರಾಡುತ್ತಿದೆ. ಅಕ್ರಮಗಳು ಸಂತೆ ಕಟ್ಟುತ್ತಿವೆ. ಕೊಲೆ,ಸುಲಿಗೆ, ಮೋಸದ ಚಾದರಿನಲ್ಲಿಯೇ ಶಿವಮೊಗ್ಗ ಜಿಲ್ಲೆ ಹೊಸ ಹೊಸ ಕನಸು ಕಾಣುತ್ತಿರುತ್ತದೆ. ಕೋಮು ಕೆಂಡ ಬೂದಿಯೊಳಗಿದ್ದರೂ ಸೌಹಾರ್ದದ ಹೂವುಗಳು ಅರಳಿ ಸುಗಂಧ ಬೀರುತ್ತಿರುತ್ತವೆ…

ಇಂಥ ಶಿವಮೊಗ್ಗ ಜಿಲ್ಲೆಗೆ ಜಿಲ್ಲಾಧಿಕಾರಿಗಳಾಗಿ ಬಂದ ಪ್ರಭುಲಿಂಗ ಕವಲಿಕಟ್ಟಿ, ಖಾಕಿ ಹಾಕಿಯೂ ಸಾಹಿತ್ಯದ ಅಗಾಧತೆ ಬಲ್ಲ, ಕುವೆಂಪು, ತೇಜಸ್ವಿ, ಅನಂತಮೂರ್ತಿ ಎಂದೆಲ್ಲ ಮಾತಾಡುವ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ .ಬಿ. ರವರಿಗೆ ಮಲೆನಾಡು ಎಕ್ಸ್ ಪ್ರೆಸ್ ವಾರಪತ್ರಿಕೆ,ಬೆಂಕಿ ಬಿರುಗಾಳಿ ದಿನಪತ್ರಿಕೆ ಮತ್ತು malenaduexpress.comನಿಂದ ಸುಸ್ವಾಗತ ಮತ್ತು ಶುಭಾಶಯಗಳು💐💐

*ಶಿ.ಜು.ಪಾಶ*
ಸಂಪಾದಕರು
ಮಲೆನಾಡು ಎಕ್ಸ್ ಪ್ರೆಸ್
ಬೆಂಕಿ ಬಿರುಗಾಳಿ ದಿನಪತ್ರಿಕೆ
malenaduexpress.com
ಮೊ; 8050112067