*ಶಿವಮೊಗ್ಗದ ಪಶ್ಚಿಮ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆ ಆತ್ಮಹತ್ಯೆ*
*ಶಿವಮೊಗ್ಗದ ಪಶ್ಚಿಮ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಪೇದೆ ಆತ್ಮಹತ್ಯೆ*
ಶಿವಮೊಗ್ಗದ ದೊಡ್ಡಪೇಟೆ ಬಳಿ ಇರುವ ಟ್ರಾಫಿಕ್ ಪೊಲೀಸ್ ಠಾಣೆಯಲ್ಲಿ ಸಂಚಾರಿ ಪೊಲೀಸ್ ಒಬ್ಬರು ರಾತ್ರಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಡಿವೈಎಸ್ ಪಿ ಆದಿಯಾಗಿ ಪೊಲೀಸರು ಜಮಾವಣೆಗೊಂಡಿದ್ದು, ಘಟನೆಯನ್ನು ಪರಿಶೀಲಿಸುತ್ತಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಟ್ರಾಫಿಕ್ ಪೊಲೀಸ್ ಝಕ್ರಿಯಾ ಎಂದು ಹೇಳಲಾಗುತ್ತಿದ್ದು, ರಜೆ ಮುಗಿಸಿಕೊಂಡು ನಿನ್ನೆಯಷ್ಟೇ ಕೆಲಸಕ್ಕೆ ಮತ್ತೆ ಹಾಜರಾಗಿದ್ದರೆನ್ನಲಾಗಿದೆ.
ಇನ್ನೂ ಗುಪ್ತತೆ ಕಾಪಾಡಿಕೊಂಡೇ ಪೊಲೀಸ್ ನಿಗಾವಣೆಯಲ್ಲಿ ಪರಿಶೀಲನೆ ನಡೆದಿದೆ.
ಹೊಸ ಎಸ್ ಪಿ ನಿಖಿಲ್ .ಬಿ. ಶಿವಮೊಗ್ಗಕ್ಕೆ ಕಾಲಿಡುತ್ತಿದ್ದಂತೆಯೇ ಇಂಥ ಅವಘಡಗಳನ್ನು ಎದುರಿಸುವಂತಾಗುತ್ತಿರುವುದು ದುರಂತ.


