*ಆನಂದಪುರ; ಖಾರದಪುಡಿ ಎರಚಿ ಮಹಿಳೆ ಮೇಲೆ ಹಲ್ಲೆ ಮಾಡಿದ್ದ ತತ್ತೂರು ವಡ್ಡಿಗೆರೆಯ ಗೋವಿಂದ ಅರೆಸ್ಟ್* *ಸುಪಾರಿಕೊಟ್ಟಿದ್ದ ಕಿರಣನನ್ನೂ ಬಂಧಿಸಿದ ಪೊಲೀಸರು*

*ಆನಂದಪುರ; ಖಾರದಪುಡಿ ಎರಚಿ ಮಹಿಳೆ ಮೇಲೆ ಹಲ್ಲೆ ಮಾಡಿದ್ದ ತತ್ತೂರು ವಡ್ಡಿಗೆರೆಯ ಗೋವಿಂದ ಅರೆಸ್ಟ್*

*ಸುಪಾರಿಕೊಟ್ಟಿದ್ದ ಕಿರಣನನ್ನೂ ಬಂಧಿಸಿದ ಪೊಲೀಸರು*

ಬೈಕನ್ನು ಅಡ್ಡಗಟ್ಟಿ, ಕಣ್ಣಿಗೆ ಖಾರದ ಪುಡಿ ಎರಚಿ, ಸ್ಟೀಲ್ ರಾಡಿನಿಂದ ಮಾರಣಾಂತಿಕ ಹಲ್ಲೆ ಮಾಡಿ ಪರಾರಿಯಾಗಿದ್ದ ಆರೋಪಿ ಹಾಗೂ ಅದಕ್ಕೆ ಸುಪಾರಿ ನೀಡಿದ್ದ ವ್ಯಕ್ತಿಯನ್ನು ಆನಂದಪುರ ಪೊಲೀಸರು ಬಂಧಿಸಿದ್ದಾರೆ.

ಸೊರಬ ತಾಲ್ಲೂಕಿನ ತತ್ತೂರು ವಡ್ಡಿಗೆರೆಯ ವೈ.ಗೋವಿಂದ(24) ಮತ್ತು ಕುಮ್ಮಕ್ಕು ನೀಡಿದ ಅದೇ ಊರಿನ ಕಿರಣ್ ಕುಮಾರ್(32) ಬಂಧಿತರು.

ಜ.5 ರಂದು ಸಂಜೆ ಶೃತಿ ಎಂಬುವವರು ತಮ್ಮ ಮಾವನ ಜೊತೆ ದ್ವಿಚಕ್ರವಾಹನದಲ್ಲಿ ಮನೆಗೆ ಹೋಗುತ್ತಿದ್ದಾಗ ಕಚ್ಚಾ ಮಣ್ಣಿನ ರಸ್ತೆಯಲ್ಲಿ ಅಡ್ಡಗಟ್ಟಿದ ಗೋವಿಂದ ಖಾರದ ಪುಡಿ ಎರಚಿ, ಶೃತಿಯವರ ತಲೆಗೆ ಕಬ್ಬಿಣದ ರಾಡ್ ನಿಂದ ಮಾರಣಾಂತಿಕ ಹಲ್ಲೆ ಮಾಡಿದ್ದ.

ಈ ಸಂಬಂಧ ಆನಂದಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸಾಗರ ಗ್ರಾಮಾಂತರ ಸರ್ಕಲ್ ಇನ್ಸ್ ಪೆಕ್ಟರ್ ಸಂತೋಷ್ ಶೆಟ್ಟಿ ಮಾರ್ಗದರ್ಶನದಲ್ಲಿ ಠಾಣಾಧಿಕಾರಿ ಎಸ್ ಪಿ ಪ್ರವೀಣ್, ಸಿಬ್ಬಂದಿ ಇಂದ್ರೇಶ್, ಹೆಚ್ ಸಿ ಗಳಾದ ಪ್ರಶಾಂತ್, ಪರಶುರಾಮ್,ತಾಹಿರ್, ಪಿಸಿ ಉಮೇಶ್ ಲಮಾಣಿ,ಹರ್ಷರವರನ್ನೊಳಗೊಂಡ ತಂಡ ತನಿಖೆ ನಡೆಸಿ ಇಬ್ಬರನ್ನು ಬಂಧಿಸಿದೆ.