*ನಾಳೆ ಬ್ಯಾಂಕ್ ಮುಷ್ಕರ; ಯಾವ ಬ್ಯಾಂಕ್ ಗಳು ಮುಚ್ಚಿರುತ್ತವೆ?* *HDFC ಬ್ಯಾಂಕ್, ICICI ಬ್ಯಾಂಕ್ ಮತ್ತು Axis ಬ್ಯಾಂಕ್‌ಗಳು ಓಪನ್*
*ನಾಳೆ ಬ್ಯಾಂಕ್ ಮುಷ್ಕರ; ಯಾವ ಬ್ಯಾಂಕ್ ಗಳು ಮುಚ್ಚಿರುತ್ತವೆ?*
*HDFC ಬ್ಯಾಂಕ್, ICICI ಬ್ಯಾಂಕ್ ಮತ್ತು Axis ಬ್ಯಾಂಕ್‌ಗಳು ಓಪನ್*
ವಾರದಲ್ಲಿ 5 ದಿನಗಳ ಕಾಲ ಮಾತ್ರ ಕೆಲಸ ಮಾಡಲು ಅವಕಾಶ ನೀಡಬೇಕು, ಶನಿವಾರ ಹಾಗೂ ಭಾನುವಾರ ರಜೆ ನೀಡಬೇಕು ಎಂದು ಒತ್ತಾಯಿಸಿ ಯುನೈಟೆಡ್ ಫೋರಮ್ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ದೇಶಾದ್ಯಂತ ಜ.27 ರ ಮಂಗಳವಾರ ಮುಷ್ಕರ ನಡೆಸುತ್ತಿದೆ.
ಜನವರಿ 23ರಂದು ಮುಖ್ಯ ಕಾರ್ಮಿಕ ಆಯುಕ್ತರೊಂದಿಗಿನ ಸಂಧಾನ ಸಭೆಯು ಬ್ಯಾಂಕ್ ಉದ್ಯೋಗಿಗಳ ಸಮಸ್ಯೆಯನ್ನು ಪರಿಹರಿಸಲು ವಿಫಲವಾದ ನಂತರ ಈ ಮುಷ್ಕರದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಗಣರಾಜ್ಯೋತ್ಸವದ ಕಾರಣದಿಂದಾಗಿ ಭಾನುವಾರ (ಜನವರಿ 25) ಮತ್ತು ಸೋಮವಾರ (ಜನವರಿ 26) ಬ್ಯಾಂಕುಗಳು ಈಗಾಗಲೇ ಮುಚ್ಚಲ್ಪಟ್ಟಿರುವುದರಿಂದ ನಾಳೆಯ ಮುಷ್ಕರ ಗ್ರಾಹಕರಿಗೆ ಅನಾನುಕೂಲತೆಯನ್ನು ಉಂಟುಮಾಡಬಹುದು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB), ಮತ್ತು ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ನಗದು ಠೇವಣಿ ಮತ್ತು ಹಿಂಪಡೆಯುವಿಕೆ, ಚೆಕ್ ಕ್ಲಿಯರೆನ್ಸ್ ಮತ್ತು ಇತರ ಸೇವೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ.
ಆದರೆ, ಖಾಸಗಿ ವಲಯದ ಬ್ಯಾಂಕುಗಳಾದ HDFC ಬ್ಯಾಂಕ್, ICICI ಬ್ಯಾಂಕ್ ಮತ್ತು Axis ಬ್ಯಾಂಕ್‌ಗಳು ಮುಷ್ಕರದಲ್ಲಿ ಭಾಗವಹಿಸುವ ಒಕ್ಕೂಟಗಳ ಭಾಗವಾಗಿಲ್ಲದ ಕಾರಣ ಅವು ಸಾಮಾನ್ಯವಾಗಿ ಕಾರ್ಯನಿರ್ವಹಿಸುವ ನಿರೀಕ್ಷೆಯಿದೆ.
ಹಾಗೇ, ಯುಪಿಐ (UPI) ಪೇಮೆಂಟ್ ಮತ್ತು ಇಂಟರ್ನೆಟ್ ಬ್ಯಾಂಕಿಂಗ್‌ನಂತಹ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.


