ದುರ್ಗಿಗುಡಿ, ಶರಾವತಿ ನಗರ ಹಾಗೂ ಹೊಸಮನೆಯಲ್ಲಿ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆ

ದುರ್ಗಿಗುಡಿ, ಶರಾವತಿ ನಗರ ಹಾಗೂ ಹೊಸಮನೆಯಲ್ಲಿ ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರ ಸಭೆ

 

ಶಿವಮೊಗ್ಗ ನಗರದ ಹೊಸಮನೆ ಬಡಾವಣೆಯಲ್ಲಿ ನಗರ ಜೆಡಿಎಸ್ ವತಿಯಿಂದ ದುರ್ಗಿಗುಡಿ, ಶರಾವತಿ ನಗರ ಹಾಗೂ ಹೊಸಮನೆ ಬಡಾವಣೆಯ ಮುಖಂಡರು ಮತ್ತು ಕಾರ್ಯಕರ್ತರ ಸಭೆಯನ್ನು ನಿನ್ನೆ ದಿವಸ ಹಮ್ಮಿಕೊಳ್ಳಲಾಗಿತ್ತು.

ಪಕ್ಷದ ಸಂಘಟನೆ ಉದ್ದೇಶ ನಗರಾದ್ಯಂತ ಜೆಡಿಎಸ್ ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಭಾಗವಾಗಿ ಹೊಸಮನೆ ಬಡಾವಣೆಯ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಜಿಲ್ಲಾ ಹಾಗೂ ನಗರ ಜೆಡಿಎಸ್ ಪ್ರಮುಖರು ಉಪಸ್ಥಿತರಿದ್ದರು.

ಈ ಸಂದರ್ಭ ಮಾತನಾಡಿದ ನಾಗರಾಧ್ಯಕ್ಷ ದೀಪಕ್ ಸಿಂಗ್ ಬೂತ್ ಮಟ್ಟದ ಕಾರ್ಯಕರ್ತರೇ ಪಕ್ಷದ ಶಕ್ತಿ. ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ಪ್ರತಿ ಬೂತ್ ಮಟ್ಟದಲ್ಲೂ ಪಕ್ಷವನ್ನು ಸದೃಢವಾಗಿ ಕಟ್ಟಲು ನಗರ ಜೆಡಿಎಸ್ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಲಿದೆ. ಜನಸಾಮಾನ್ಯರ ಕಷ್ಟ ನೋವುಗಳಿಗೆ ನಗರ ಜೆಡಿಎಸ್ ಧ್ವನಿಯಾಗಿದೆ. ಪಕ್ಷದ ಸಂಘಟನೆಗಾಗಿ ಈಗಾಗಲೇ ನಗರದ ಬಹುತೇಕ ವಾರ್ಡುಗಳಲ್ಲಿ ಸಭೆಗಳನ್ನು ನಡೆಸಲಾಗಿದೆ. ಸಭೆಯಲ್ಲಿ ಕೇಳಿಬರುವ ಸಮಸ್ಯೆಗಳಿಗೆ ಪರಿಹಾರವನ್ನು ನಗರ ಜೆಡಿಎಸ್ ಕಲ್ಪಿಸುತ್ತಿದೆ. ತಮ್ಮ ಅಧಿಕಾರವಾಧಿಯಲ್ಲಿ ನಗರದ ಸರ್ವಾoಗಿಣ ಅಭಿವೃದ್ಧಿಗೆ ಶ್ರಮಿಸಿದ ಮಾಜಿ ಶಾಸಕ ಕೆ ಬಿ ಪ್ರಸನ್ನ ಕುಮಾರ್ ರವರ ನೇತೃತ್ವ ನಮಗೆಲ್ಲ ಶ್ರೀರಕ್ಷೆಯಾಗಿದೆ. ತಮ್ಮ ಶಾಸಕತ್ವದ ಅವಧಿಯಲ್ಲಿ ಈ ಭಾಗಕ್ಕೆ ಪ್ರಸನ್ನ ಕುಮಾರ್ ರವರು ಕೊಟ್ಟಿರುವ ಕೊಡುಗೆಗಳು ಅನನ್ಯ. ನಾವಿಲ್ಲಿ ಕೂತು ಸಭೆ ನಡೆಸುತ್ತಿರುವ ಸಮುದಾಯ ಭವನವು ಅವರು ನೀಡಿರುವ ಕೊಡುಗೆಗಳಲ್ಲಿ ಒಂದು. ಇಂದು ಹೊಸಮನೆ ಶರಾವತಿನಗರ ದುರ್ಗಿಗುಡಿ ಪ್ರದೇಶಗಳು ಒಂದಷ್ಟು ಅಭಿವೃದ್ಧಿ ಕಂಡಿದ್ದರೆ ಅದಕ್ಕೆ ಕೆ ಬಿ ಪ್ರಸನ್ನ ಕುಮಾರ್ ಕಾರಣರು. ಗಂಧದಮನೆ ನರಸಿಂಹ ರವರ ಪತ್ನಿ ಶ್ರೀಮತಿ ಭವಾನಿ ರವರು ಕಳೆದ ಪಾಲಿಕೆ ಚುನಾವಣೆಯಲ್ಲಿ ಕೇವಲ 8 ಮತಗಳಿಂದ ಸೋತಿರಬಹುದು ಆದರೆ ಅವರು ಸೋತ ನಂತರ ಮನೆಯಲ್ಲಿ ಕೂರದೆ ಅಲ್ಲಿಂದಲೂ ಕಷ್ಟ ಹೇಳಿಕೊಂಡು ಬಂದವರ ಕೆಲಸವನ್ನು ಯಾವುದೇ ಪ್ರಚಾರ ಪಡೆಯದೇ ಸದ್ದಿಲ್ಲದೇ ಪ್ರಾಮಾಣಿಕವಾಗಿ ಮಾಡುತಲಿದ್ದಾರೆ. ಮುಂದಿನ ದಿನಗಳಲ್ಲಿ ನರಸಿಂಹ ರವರ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಹೊಸಮನೆ ಬಡಾವಣೆಯ ಪ್ರಜ್ಞಾವಂತರು ನೀಡಲಿದ್ದಾರೆ. ಕಡಿಮೆ ಸಮಯದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಸೇರಿರುವ ಜೆಡಿಎಸ್ ಕಾರ್ಯಕರ್ತರನ್ನು ನೋಡಿದರೆ ನಗರದಲ್ಲಿ ಜೆಡಿಎಸ್ ಪರವಾದ ವಾತಾವರಣ ಇದೆ ಎನ್ನುವ ಇವತ್ತಿನ ಜನಜನಿತ ಮಾತು ಪ್ರತಿಧ್ವನಿಸುವಂತಿದೆ. ಪಕ್ಕದ ಶರಾವತಿನಗರದ ಶ್ಯಾಮ್ ಸಹ ಕಾಲಿಗೆ ಚಕ್ರ ಕಟ್ಟಿ ವಾರ್ಡಿನಾದ್ಯಾoತ ಕಾರ್ಯ ನಿರ್ವಹಿಸುತ್ತಿದ್ದಾರೆ. ಶರಾವತಿ ನಗರದ ಹರಿಶ್ಚಂದ್ರ ಬಡಾವಣೆಯ ಮನೆಗಳ ಹಕ್ಕು ಪತ್ರ ಸಮಸ್ಯೆ ಈಗ ಬಗೆಹರಿದಿದೆ. ಹಿಂದೆ ಶಾಸಕರಾಗಿದ್ದ ಕೆ ಬಿ ಪ್ರಸನ್ನ ಕುಮಾರ್ ಬಡವರು ವಾಸ ಮಾಡುತ್ತಿದ್ದ ಆ ಪ್ರದೇಶವನ್ನು ಸ್ಲಂ ಬೋರ್ಡ್ ಗೆ ಹಸ್ತಾಂತರ ಮಾಡಲು ವಹಿಸಿದ್ದ ಕ್ರಮದ ಪ್ರತಿಫಲವಾಗಿ ಇಂದು 94 ಮನೆಗಳಿಗೆ ಹಕ್ಕು ಪತ್ರ ಸಿಗುವಂತಾಗಿದೆ ಎಂದರು.

ಇದೆ ಸಂದರ್ಭ ಮಾತನಾಡಿದ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಮಾಜಿ ಶಾಸಕ ಕೆ ಬಿ ಪ್ರಸನ್ನ ಕುಮಾರ್ ರವರು ನರಸಿಂಹ ರವರು ಒಬ್ಬ ಕ್ರಿಯಾಶೀಲ ವ್ಯಕ್ತಿ. ಅಲ್ಪ ಮತಗಳಿಂದ ಚುನಾವಣೆ ಸೋತ ಸಹೋದರಿ ಭವಾನಿ ರವರು ಅದಕ್ಕಿಂತಲೂ ಹೆಚ್ಚು ಜನರ ಪ್ರೀತಿ ವಿಶ್ವಾಸ ಗಳಿಸುವಲ್ಲಿ ಯಶಶ್ವಿಯಾಗಿದ್ದಾರೆ ಅನ್ನುವುದಕ್ಕೆ ಅತ್ಯಂತ ಕಡಿಮೆ ಸಮಯದಲ್ಲಿ ಕರೆದಿರುವ ಈ ಸಭೆಯಲ್ಲಿ ಇಷ್ಟೊಂದು ಹೆಚ್ಚಿನ ಸಂಖ್ಯೆಯಲ್ಲಿ ಸೇರಿರುವ ಜನರೇ ಸಾಕ್ಷಿ. ಬರುವ ದಿನಗಳಲ್ಲಿ ಈ ಭಾಗಗಳಲ್ಲಿಯು ಜೆಡಿಎಸ್ ಬಾವುಟ ಹಾರಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಅದ್ಯಾವುದೇ ಕಛೇರಿ ಕೆಲಸವಿರಲಿ ಅದನ್ನು ನರಸಿಂಹ ರವರ ಗಮನಕ್ಕೆ ತಂದಲ್ಲಿ ಅದನ್ನು ಬಗೆಹರಿಸುವ ಕೆಲಸವನ್ನು ಜೆಡಿಎಸ್ ಪಕ್ಷ ಶಿವಮೊಗ್ಗದಲ್ಲಿ ಮಾಡಲಿದೆ. ನಿಮಗೆ ಸೂಕ್ತವಾದವರನ್ನು ವಾರ್ಡ್ ಅಧ್ಯಕ್ಷರನ್ನಾಗಿ ಮಾಡಿಕೊಳ್ಳಿ. ವಾರ್ಡ್ ಅಧ್ಯಕ್ಷರ ಹಾಗೂ ಬೂತ್ ಅಧ್ಯಕ್ಷರ ಮೂಲಕ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಲಾಗುವುದು ಎಂದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಡಾ ಕಡಿದಾಳ ಗೋಪಾಲ್ ರವರು ಮಾತನಾಡಿ ಜೆಡಿಎಸ್ ಜನಸಾಮಾನ್ಯರ ಪಕ್ಷ. ನಿಮ್ಮ ಸಮಸ್ಯೆ ಏನೆ ಇದ್ದರು ವಾರ್ಡಿನ ಜೆಡಿಎಸ್ ಪ್ರಮುಖರು ಅಥವಾ ನಗರ ಸಮಿತಿ ಅಧ್ಯಕ್ಷರಾದ ದೀಪಕ್ ಸಿಂಗ್ ರವರ ಗಮನಕ್ಕೆ ತನ್ನಿ. ಪಕ್ಷವನ್ನು ಪ್ರತಿ ಬೂತ್ ಮಟ್ಟದಲ್ಲೂ ಸಂಘಟಿಸುವುದಕ್ಕೆ ಶ್ರಮವಹಿಸಿ ಎಂದರು.

ಜಿಲ್ಲಾ ವಕ್ತಾರ ಗಂಧದಮನೆ ನರಸಿಂಹ ಮಾತನಾಡಿ ಕಳೆದ ಪಾಲಿಕೆ ಚುನಾವಣೆಯಲ್ಲಿ ಅಭ್ಯರ್ಥಿಯಾದ ನನ್ನ ಶ್ರೀಮತಿ ರವರು ಸೂತಿರಬಹುದು. ಆದರೆ ಅದಕ್ಕಿಂತಲೂ ಹೆಚ್ಚಿನ ಜನರ ವಿಶ್ವಾಸವನ್ನು ಈ ಕಳೆದ ವರ್ಷಗಳಲ್ಲಿ ಪಡೆದಿದ್ದೇವೆ. ಚುನಾವಣೆಯಲ್ಲಿ ಸೂತಾಗಲು ವಾರ್ಡಿನ ಜನರಿಗೆ ಸಿಹಿ ಹಂಚಿ ಅವರು ನಮ್ಮಮೇಲೆ ಇಟ್ಟಿರುವ ಪ್ರೀತಿಗೆ ಕೃತಜ್ಞತೆಗಳನ್ನು ಸಲ್ಲಿಸಿದ್ದೇವೆ. ಹಿಂದಿನ ಚುನಾವಣೆಯಲ್ಲಿ ಸಮಯದ ಕೊರತೆ ಕಾರಣ ನಾವು ಕೆಲವಷ್ಟು ಪ್ರದೇಶಗಳನ್ನು ತಲುಪಲಾಗಿರಲಿಲ್ಲ ಆದರೆ ಈ ಬಾರಿ ಅದಕ್ಕೆ ಆಸ್ಪದವಿಲ್ಲ. ನಿಮ್ಮೆಲ್ಲರ ಆಶೀರ್ವಾದ ಈ ಹಿಂದಿನದಕ್ಕಿಂತಲೂ ಹೆಚ್ಚಾಗಿರಲಿ. ವಾರ್ಡಿನ ಕುಂದುಕೊರತೆಗಳತ್ತ ಗಮನ ಹರಿಸುತ್ತಿದ್ದೇವೆ ಮುಂದೆಯೂ ಹರಿಸುತ್ತೇವೆ ಎಂದರು.

ಇದೆ ಸಂದರ್ಭ ಸಭೆಯಲ್ಲಿ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಬೊಮ್ಮಕಟ್ಟೆ ಮಂಜುನಾಥ್, ಜಿಲ್ಲಾ ಪ್ರದಾನ ಕಾರ್ಯದರ್ಶಿ ತ್ಯಾಗರಾಜ್, ಪ್ರಚಾರ ಸಮಿತಿ ಅಧ್ಯಕ್ಷ ಸಿದ್ದಪ್ಪ, ನಗರ ಜೆಡಿಎಸ್ ಉಪಾಧ್ಯಕ್ಷ ದಯಾನಂದ್ ಸಾಲಾಗಿ, ನಗರ ಪ್ರದಾನ ಕಾರ್ಯದರ್ಶಿ ವಿನಯ್, ಕಾರ್ಮಿಕ ವಿಭಾಗದ ಜಿಲ್ಲಾಧ್ಯಕ್ಷ ಶ್ಯಾಮ್, ನಗರ ಪ್ರದಾನ ಕಾರ್ಯದರ್ಶಿ ಲೋಹಿತ್, ಚಂದ್ರಶೇಖರ್, ಗೋಪಿ ಮೊದಲಿಯರ್, ಗೋವಿಂದರಾಜ್, ಮಹಿಳಾ ಮುಖಂಡರಾದ ಭವಾನಿ ನರಸಿಂಹ, ನಂದ, ಮಂಜುನಾಥ್ ಗೌಡ, ಜಿಲ್ಲಾ ಮುಖಂಡರಾದ ಮಾಜಿ ಮಹಾ ನಗರಪಾಲಿಕೆ ಸದಸ್ಯರಾದ ರಘು, ವೆಂಕಟೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.