ಸಮತೋಲನ ಕಳಕೊಂಡ ಸಿಎಂ ಸಿದ್ದರಾಮಯ್ಯ- ಡಿ.ಎಸ್.ಅರುಣ್ ಟೀಕೆ

ಸಮತೋಲನ ಕಳಕೊಂಡ ಸಿಎಂ ಸಿದ್ದರಾಮಯ್ಯ- ಡಿ.ಎಸ್.ಅರುಣ್ ಟೀಕೆ

ಶಿವಮೊಗ್ಗ: ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಸಮತೋಲನ ಕಳೆದುಕೊಂಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಹೇಳಿದರು.

ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಇತ್ತೀಚೆಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಚಿಂತನೆಗಳೇ ಬದಲಾಗುತ್ತಿವೆ. ಅಹಂಕಾರ ಮನೆಮಾಡಿದೆ. ನಾನೊಬ್ಬನೇ, ನನ್ನದೇ ಸರ್ಕಾರ ಎಂಬ ದರ್ಪದಲ್ಲಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಬೈಯುತ್ತಾರೆ. ಪೊಲೀಸ್ ಅಧಿಕಾರಿಗಳ ಮೇಲೆಯೇ ಕೈಮಾಡಲು ಹೋಗುತ್ತಾರೆ. ಇವರು ಯಾವ ದೇಶದಲ್ಲಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆ ಬಗ್ಗೆ ಇವರಿಗೆ ಅರಿವಿದೆಯೇ? ಹೀಗೇ ಪೊಲೀಸರಿಗೆ ಮಾತನಾಡಿದರೆ ಅವರ ಆತ್ಮವಿಶ್ವಾಸಬೇ ಕುಸಿಯುವುದಿಲ್ಲವೇ ಎಂದು ಪ್ರಶ್ನಿಸಿದರು.

ರಾಷ್ಟ್ರದ ವಿಚಾರಕ್ಕೆ ಬಂದರೆ ಯುದ್ಧ ಬೇಡ ಎನ್ನುತ್ತಾರೆ. ಭದ್ರತಾ ವೈಫಲ್ಯ ಎನ್ನುತ್ತಾರೆ. ಇಂದಿರಾಗಾಂಧಿ, ರಾಜೀವ್ ಗಾಂಧಿ ಹತ್ಯೆಯಾದಾಗ, ಪಾರ್ಲಿಮೆಂಟ್ ಮೇಲೆ ದಾಳಿಯಾದಾಗ ಭದ್ರತಾ ವೈಫಲ್ಯ ಎಂದು ಇವರಿಗೆ ಎಂದು ಇವರಿಗೆ ಅನಿಸಿಲ್ಲವೇ? ಈಗ ಏಕೆ ಹೇಳುತ್ತಿದ್ದಾರೆ ಎಂದರು.
ಸಿದ್ಧರಾಮಯ್ಯ ಅವರ ಕಾಲ ಮುಗಿಯುತ್ತಾ ಬಂದಿದೆ. ಅವರು ಹುದ್ದೆಯನ್ನು ಯಾವಾಗ ಬೇಕಾದರೂ ಕಳೆದುಕೊಳ್ಳಬಹುದು. ರಾಜ್ಯದ ಖಜಾನೆಯೂ ಖಾಲಿಯಾಗಿದೆ. ಪೊಲೀಸ್ ವ್ಯವಸ್ಥೆಯೂ ಹಾಳಾಗಿದೆ. ಕರ್ನಾಟಕದ ಜನತೆ ಅವರ ಅಸಂಬದ್ಧ ಮಾತುಗಳಿಂದ ಬೇಸತ್ತು ಹೋಗಿದ್ದಾರೆ. ಅವರು ರಾಜ್ಯದ ಕ್ಷಮೆ ಕೇಳಬೇಕು ಎಂದರು.

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್ ರವರು ಬಿಜೆಪಿ ಪ್ರತಿಭಟನೆಗೆ ಅವಕಾಶ ಕೊಡುವುದಿಲ್ಲ ಎಂದಿದ್ದಾರೆ. ಬೂತ್ ಮಟ್ಟದಲ್ಲೂ ಪ್ರತಿಭಟಿಸುವ ಶಕ್ತಿ ಬಿಜೆಪಿಗಿದೆ. ನೀವೇನೆಂಬುದು ಗೊತ್ತಿದೆ. ಇದೆಲ್ಲ ಈಗ ನಡೆಯೋದಿಲ್ಲ ಎಂದು ಹೇಳಿದರು.