ಶಿವಮೊಗ್ಗ ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರದ ಸಮನ್ವಯ ಕೊರತೆಯಿಂದ ಪ್ರಾಧಿಕಾರ ನಿರ್ಮಿತ ಬಡಾವಣೆಯ ಆಸ್ತಿ ಮಾಲೀಕರಿಂದ ಖಾತೆ ಶುಲ್ಕ… ಆಸ್ತಿ ತೆರಿಗೆ ಹೆಸರಲ್ಲಿ ಪಾಲಿಕೆಯಲ್ಲಿ ಹಗಲು ದರೋಡೆ* ಮಾಜಿ ಕೌನ್ಸಿಲರ್ ಎನ್.ಕೆ.ಶ್ಯಾಮಸುಂದರ್ ಗಂಭೀರ ಆರೋಪ
*ಶಿವಮೊಗ್ಗ ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರದ ಸಮನ್ವಯ ಕೊರತೆಯಿಂದ ಪ್ರಾಧಿಕಾರ ನಿರ್ಮಿತ ಬಡಾವಣೆಯ ಆಸ್ತಿ ಮಾಲೀಕರಿಂದ ಖಾತೆ ಶುಲ್ಕ…
ಆಸ್ತಿ ತೆರಿಗೆ ಹೆಸರಲ್ಲಿ ಪಾಲಿಕೆಯಲ್ಲಿ ಹಗಲು ದರೋಡೆ*
ಮಾಜಿ ಕೌನ್ಸಿಲರ್ ಎನ್.ಕೆ.ಶ್ಯಾಮಸುಂದರ್ ಗಂಭೀರ ಆರೋಪ
ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿತವಾದ ಮಲಿಗೆನಹಳ್ಳಿ ವಾಜಪೇಯಿ ಬಡಾವಣೆಯಲ್ಲಿ ಸುಮಾರು 12 ವರ್ಷಗಳ ಹಿಂದೆ ನಿವೇಶನ ಹಂಚಿಕೆ ಮಾಡಿದ್ದು. ಅದರಂತೆ ಸಾವಿರಾರು ನಿವೇಶನಗಳಿಗೆ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಖಾತೆ ಬದಲಾವಣೆ ಶುಲ್ಕ ಪಾವತಿಸಿಕೊಂಡು ಖಾತೆ ದಾಖಲು ಮಾಡಿದೆ.
ಅದರಂತೆ ಪ್ರತಿ ವರ್ಷ ಆಸ್ತಿ ತೆರಿಗೆಯನ್ನು ಸಹ ಪಾವತಿಸಿಕೊಂಡಿರುತ್ತದೆ. ಹಲವು ಅಡೆತಡೆಗಳ ನಂತರ 2024 ರ ಸೆಪ್ಟೆಂಬರ್ ತಿಂಗಳಲ್ಲಿ ಈ ಬಡಾವಣೆಯ ನಿವೇಶನಗಳು ಶಿವಮೊಗ್ಗ ನಗರ ಪಾಲಿಕೆಗೆ ಹಸ್ತಾಂತರವಾಗಿರುತ್ತದೆ.
2024 ಹಾಗೂ 25 ನೇ ಸಾಲಿನ ವರೆಗೆ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರ ಆ ವರ್ಷದ ಸಂಪೂರ್ಣ ಆಸ್ತಿ ತೆರಿಗೆ ಈ ಬಡಾವಣೆ ನಿರ್ಮಾಣ ಆಗಲು ಕಾರಣರಾದ ರೈತರ ನಿವೇಶನಗಳು ಹಾಗೂ ಪ್ರಾಧಿಕಾರದಿಂದ ಹಂಚಿಕೆಯಾದ ಸಾವಿರಾರು ನಿವೇಶನಗಳ ನಾಗರೀಕರಿಂದ ಪಾವತಿಸಿಕೊಂಡಿದೆ.
ಈ ಎಲ್ಲಾ ಆಸ್ತಿಗಳು ಮಹಾನಗರ ಪಾಲಿಕೆಗೆ ಹಸ್ತಾಂತರಗೊಂಡಾಗ ಅವುಗಳನ್ನ ಖಾತೆ ಪುಸ್ತಕಗಳಲ್ಲಿ ದಾಖಲು ಮಾಡಿ ನಂತರದ ಪ್ರತಿ ವರ್ಷದ ತೆರಿಗೆ ಪಾವತಿಸಿಕೊಳ್ಳಬೇಕು. ಈ ಹಿಂದೆ ಪ್ರಾಧಿಕಾರದಿಂದ ಹಸ್ತಾಂತರವಾದ ಹಳೆಯ ಎಲ್ಲಾ ಬಡಾವಣೆಯ ಆಸ್ತಿಗಳು ಪಾಲಿಕೆಯಲ್ಲಿ ಈ ರೀತಿಯ ದಾಖಲಾಗಿವೆ. ಆದರೆ ಈ ಬಾರಿ ರಾಜ್ಯದ ಯಾವುದೇ ಪಾಲಿಕೆಯಲ್ಲಿ ನಗರಸಭೆಗಳಲ್ಲಿ ಇಲ್ಲದ ಕಾನೂನಿನಲ್ಲಿ ಅವಕಾಶವಿಲ್ಲದ ಹೊಸ ಸಂಪ್ರದಾಯ ಶಿವಮೊಗ್ಗ ಪಾಲಿಕೆ ಅಳವಡಿಸಿಕೊಂಡಿದೆ.
2024 ರಲ್ಲಿ ಹಸ್ತಾಂತರವಾದ ನಿವೇಶನಗಳಿಗೆ ಪ್ರಾಧಿಕಾರದಲ್ಲಿ ವರ್ಷದ ಸಂಪೂರ್ಣ ಹಣ ಕಟ್ಟಿದ್ದರು ಪಾಲಿಕೆಯಲ್ಲಿ ಪುನಃ 24 25 ನೇ ಸಾಲಿನ ಆರು ತಿಂಗಳಿನ ಆಸ್ತಿ ತೆರಿಗೆ ಪುನಃ ಪಾವತಿಸಿಕೊಂಡಿದೆ ಹಾಗೂ ಖಾತೆ ಬದಲಾವಣೆ ಶುಲ್ಕ ಸಹ ಪಾವತಿಸಿಕೊಳ್ಳುತ್ತಿದೆ.ಇದು ಆಸ್ತಿ ಮಾಲೀಕರಿಂದ ದೋಚುತ್ತಿರುವ ಹಗಲು ದರೋಡೆ ಅಲ್ಲವೇ?
ಇದರಲ್ಲಿ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ನಡುವೆ ಸಮನ್ವಯ ಕೊರತೆ ಅಲ್ಲವೇ. ಎರಡು ಸ್ಥಳೀಯ ಸಂಸ್ಥೆಗಳ ಪ್ರಾಧಿಕಾರ ಸರ್ಕಾರದಲ್ಲವೇ. ಎರಡೆರಡು ಬಾರಿ ಸ್ಥಳೀಯ ಸಂಸ್ಥೆಗಳಲ್ಲಿ ಖಾತೆ ಬದಲಾವಣೆ ಶುಲ್ಕ ಪಾವತಿಸಿಕೊಳ್ಳಬಾರದು ಎಂದು ಹೇಳುವ ಜ್ಞಾನ ಇವರುಗಳಿಗೆ ಇಲ್ಲವೇ?
ಏಪ್ರಿಲ್ ತಿಂಗಳ 30ನೇ ತಾರೀಖಿನ ಒಳಗೆ ಆಸ್ತಿ ತೆರಿಗೆ ಕಟ್ಟುವವರಿಗೆ 5% ರಿಯಾಯಿತಿ ಘೋಷಣೆ ಇರುತ್ತದೆ. ಆದರೆ ಪ್ರಾಧಿಕಾರ ನಿರ್ಮಿತ ಈ ಬಡಾವಣೆಯ ಕೆಲವು ಕಟ್ಟಡಗಳು ನೆನ್ನೆಯ ದಿನಾಂಕದಲ್ಲು ಸಹ ಹಸ್ತಾಂತರ ಮಾಡಿಕೊಳ್ಳಲಿಕ್ಕೆ ಪಾಲಿಕೆಗೆ ಪತ್ರ ಬರೆಯಲಾಗಿದೆ. ಪ್ರಾಧಿಕಾರದಲ್ಲಿ ಆಸ್ತಿ ತೆರಿಗೆ ಪಾವತಿಸಿಕೊಳ್ಳುತ್ತಿಲ್ಲ ಪಾಲಿಕೆಯಲ್ಲಿ ಕಟ್ಟಲು ಹೋದರೆ ಆಸ್ತಿ ಹಕ್ಕು ದಾಖಲಾಗಿಲ್ಲ ಆಸ್ತಿ ಕಟ್ಟುವವರಿಗೆ ಇದರಿಂದ ಅನ್ಯಾಯ ಆಗುವುದಿಲ್ಲವೇ 5% ರಿಯಾಯಿತಿಯಿಂದ ವಂಚಿತರಾಗುವುದಿಲ್ಲವೇ.ಇವೆಲ್ಲದಕ್ಕೂ ಯಾರು ಹೊಣೆ?
ಪಾಲಿಕೆಯ ಆಡಳಿತದ ಅಧಿಕಾರಿಗಳ ಆಟ ಮೇಲಾಧಿಕಾರಿಗಳಿಗೆ ಹೊಟ್ಟೆ ತುಂಬಾ ಊಟ ಎನ್ನುವಂತಾಗಿದೆ. ಮಾನ್ಯ ಜಿಲ್ಲಾಧಿಕಾರಿಗಳು ಇದನ್ನು ಗಮನಹರಿಸಿ ಪಾಲಿಕೆಯಿಂದ ಆಗುತ್ತಿರುವ ಹಗಲು ದರೋಡೆಯನ್ನು ತಪ್ಪಿಸಬೇಕೆಂದು ಎಲ್ಲಾ ಆಸ್ತಿ ತೆರಿಗೆದಾರರ ಪರವಾಗಿ ಆಗ್ರಹಿಸುತ್ತೇನೆ
*ಎನ್ ಕೆ. ಶ್ಯಾಮಸುಂದರ್ ಮಾಜಿ ನಗರಸಭಾ ಸದಸ್ಯರು ಹಾಗೂ ಪ್ರಧಾನ ಕಾರ್ಯದರ್ಶಿ ಜಿಲ್ಲಾ ಕಾಂಗ್ರೆಸ್ ಶಿವಮೊಗ್ಗ*