ಜಿ.ಪಂ. ಕೆಡಿಪಿ ಸಭೆಯಲ್ಲಿ ಗದ್ದಲ* *ಶಾಸಕ ಚನ್ನಬಸಪ್ಪ ಅನರ್ಹರಾದರೂ ಜಿ.ಪಂ. ಸಭೆಯಲ್ಲಿ ಪಾಲ್ಗೊಳ್ಳಬಹುದಾ ಎಂದು ಎಂ.ಎಲ್.ಸಿ. ಬಲ್ಕೀಶ್ ಬಾನು ಪ್ರಶ್ನೆ* ಪ್ರಶ್ನೆ ಕೇಳುತ್ತಿದ್ದಂತೆ ಗರಂ ಆದ ಶಾಸಕ ಚನ್ನಬಸಪ್ಪ ಬಲ್ಕೀಶ್ ಬಾನು ಹಾಗೂ ಚನ್ನಬಸಪ್ಪ ನಡುವೆ ವಾಗ್ವಾದ
*ಜಿ.ಪಂ. ಕೆಡಿಪಿ ಸಭೆಯಲ್ಲಿ ಗದ್ದಲ*
*ಶಾಸಕ ಚನ್ನಬಸಪ್ಪ ಅನರ್ಹರಾದರೂ ಜಿ.ಪಂ. ಸಭೆಯಲ್ಲಿ ಪಾಲ್ಗೊಳ್ಳಬಹುದಾ ಎಂದು ಎಂ.ಎಲ್.ಸಿ. ಬಲ್ಕೀಶ್ ಬಾನು ಪ್ರಶ್ನೆ*
ಪ್ರಶ್ನೆ ಕೇಳುತ್ತಿದ್ದಂತೆ ಗರಂ ಆದ ಶಾಸಕ ಚನ್ನಬಸಪ್ಪ
ಬಲ್ಕೀಶ್ ಬಾನು ಹಾಗೂ ಚನ್ನಬಸಪ್ಪ ನಡುವೆ ವಾಗ್ವಾದ

ಸುಮ್ನೆ ಕೂತ್ಕೊಳಮ್ಮ ಎಂದು ಗದರಿದ ಶಾಸಕ
ನನಗೆ ಸಭೆಯಲ್ಲಿ ಅಪಮಾನ ಮಾಡಲಾಗಿದೆ ಎಂದು ಆಕ್ರೋಶ ಹೊರಹಾಕಿದ ಶಾಸಕ ಚನ್ನಬಸಪ್ಪ…
ಈ ವೇಳೆ ಸುಮ್ನೆ ಕೂತ್ಕೊಳ್ರಿ ಎಂದು ಸಾಕು ಎಂದು ಜೋರಾಗಿ ಗದರಿದ ಶಾಸಕ ಚನ್ನಬಸಪ್ಪ
ನೀವು ಯಾರು ನನಗೆ ಕೇಳೋರು ಎಂದು ಗರಂ
ಹೂ ಆರ್ ಯೂ ಎಂದು ಬಲ್ಕೀಶ್ ಬಾನುಗೆ ಪ್ರಶ್ನೆ
ಸಾಕು ಸುಮ್ನೆ ಕೂತ್ಕಳಮ್ಮ ಸಾಕು ಎಂದ ಶಾಸಕ ಚೆನ್ನಿ
ಈ ವೇಳೆ ಶಾಸಕ ಬೇಳೂರು ಗೋಪಾಲಕೃಷ್ಣ ಕೂಡ ಗರಂ
ಚನ್ನಬಸಪ್ಪ ಅವರೇ ಸುಮ್ಮನೆ ಕೂತ್ಕೊಳಿ ಎಂದ ಬೇಳೂರು
ಈ ವೇಳೆ ನೀವ್ಯಾರು ನನಗೆ ಕೇಳೋರು ಎಂದ ಚನ್ನಬಸಪ್ಪ
ಬೇಳೂರು ಗೋಪಾಲಕೃಷ್ಣ, ಚನ್ನಬಸಪ್ಪ ನಡುವೆ ವಾಗ್ವಾದ
ಗೋಪಾಲಕೃಷ್ಣ ಸುಮ್ನೆ ಕೂತ್ಕೊಳಣಾ ಎಂದ ಚನ್ನಬಸಪ್ಪ
ನೀವು ಕೂತ್ಕೊಳಿ, ನೀವು ಕುತ್ಕೊಳಿ ಎಂದು ಗದ್ದಲ ಗೊಂದಲ
ನನಗೆ ಗೌರವ ನೀಡುವುದಾದರೆ ಎಲ್ಲರೂ ಸುಮ್ನಿರಿ ಎಂದ ಸಚಿವ ಮಧು ಬಂಗಾರಪ್ಪ
ಸಾಕು ಈಗ ಎಲ್ಲರೂ ಸುಮ್ಮನಿರಿ ಸಾರಿ ಎಂದ ಸಚಿವ ಮಧು ಬಂಗಾರಪ್ಪ
ಎಲ್ಲರಿಗಿಂತ ನಾನು ಸಣ್ಣವನು ಹೀಗಾಗಿ ನಾನೆ ಸಾರಿ ಕೇಳುತ್ತೆನೆ ಸುಮ್ಮನಿರಿ
*ಸಭೆಯಲ್ಲಿ ವಕ್ಫ್ ಆಸ್ತಿ ವಿಚಾರವಾಗಿ ದನಿ ಎತ್ತಿದ ಶಾಸಕ ಚನ್ನಬಸಪ್ಪ*
ಕೇವಲ ದೇವಸ್ಥಾನಗಳ ಬಗ್ಗೆ ಯೋಚನೆ ಮಾಡುವ ನೀವುಗಳು ವಕ್ಫ್ ವಿಚಾರವಾಗಿ ಯೋಚಿಸಲ್ಲ
ನಾಗರಿಕರ ಆಸ್ತಿಯನ್ನು ವಕ್ಫ್ ಗೆ ಸೇರಿಸುತ್ತಿರಾ
ಇದಕ್ಕೆ ಶಾಸಕ ಗೋಪಾಲಕೃಷ್ಣ ಬೇಳೂರು ಮಧ್ಯೆ ಪ್ರವೇಶ
ನಾವು ಎರಡರ ಬಗ್ಗೆಯೂ ತಾರತಮ್ಯ ಮಾಡಿಲ್ಲ ಎಂದ ಶಾಸಕ ಬೇಳೂರು ಗೋಪಾಲಕೃಷ್ಣ
ದೇವಾಲಯಕ್ಕೂ ವಕ್ಫ್ ಗೂ ತಾರತಮ್ಯ ಮಾಡಬೇಡಿ ಎಂದ ಶಾಸಕ ಬೇಳೂರು
ವಕ್ಫ್ ಮತ್ತು ದೇವಾಲಯಗಳ ವಿಚಾರವಾಗಿ ತಾರತಮ್ಯ ಮಾಡದೇ ಸರ್ವೆ ಕೆಲಸ ಮುಗಿಸಿ ಎಂದ ಸಚಿವ ಮಧು ಬಂಗಾರಪ್ಪ
ಡಿಸಿ ಗುರುದತ್ ಹೆಗಡೆಗೆ ಸೂಚನೆ ನೀಡಿದ ಸಚಿವ ಮಧು ಬಂಗಾರಪ್ಪ
ಈ ವೇಳೆ ಸಭೆಗೆ ಮಾಹಿತಿ ನೀಡಿದ ಡಿಸಿ ಗುರುದತ್ ಹೆಗಡೆ
ಸುಮಾರು 180 ಆಸ್ತಿಗಳನ್ನು ಗುರುತಿಸಲಾಗಿದ್ದು, ಸಂಪೂರ್ಣ ಡಿಜಿಟಲೈಜ್ ಮಾಡಲಾಗುತ್ತಿದೆ ಎಂದ ಡಿಸಿ
ಸಣ್ಣ, ಸಣ್ಣ ದೇವಾಲಯಗಳ ಆಸ್ತಿಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ
ಇದನ್ನು ಸಮರೋಪಾದಿಯಲ್ಲಿ ಅಳತೆ ಸರ್ವೆ ಮಾಡಬೇಕೆಂದ ಶಾಸಕ ಚನ್ನಬಸಪ್ಪ
ಎಲ್ಲಾ ದೇವಾಲಯಗಳ ಖಾತೆ ಮಾಡಿಕೊಡಿ ಎಂದ ಚನ್ನಬಸಪ್ಪ
2 ತಿಂಗಳಲ್ಲಿ ಈ ಸರ್ವೆ ಕಾರ್ಯ ಪೂರ್ಣಗೊಳಿಸಲಾಗುವುದೆಂದ ಡಿಸಿ
ಈ ವೇಳೆ ಶಾಸಕ ಚನ್ನಬಸಪ್ಪ ಹಾಗೂ ಬೇಳೂರು ಗೋಪಾಲಕೃಷ್ಣ ನಡುವೆ ವಾಗ್ವಾದ
ನಾನು ಕಳೆದ ಬಾರಿ ಸಭೆ ವಿಚಾರ ಪ್ರಸ್ತಾಪಿಸಿದ್ದೆನೆ
ಹಿಂದಿನ ಬಗ್ಗೆ ಚರ್ಚೆಗೆ ಹೋದರೆ ನಾನು ಬಹಳ ಮಾತನಾಡಬೇಕಾಗುತ್ತದೆ
ಕೈಯಲ್ಲಿ ಕೇಸರಿ, ಶರ್ಟ್ ಲೂ ಕೇಸರಿ ಇದೆ ಎಂದ ಶಾಸಕ ಬೇಳೂರು ಗೋಪಾಲಕೃಷ್ಣ
ಇದಕ್ಕೆ ಕೈಯಲ್ಲಿ, ಶರ್ಟ್ ಲಿ ಇದ್ದರೆ ಆಗಲ್ಲ ಮನಸಲ್ಲಿ ಇರಬೇಕೆಂದ ಎಂ.ಎಲ್.ಸಿ. ಭಾರತಿ ಶೆಟ್ಟಿ
ಈ ವೇಳೆ ನಗೆಗಡಲಲ್ಲಿ ತೇಲಿದ ಸಭೆ
ಸಭೆಯಲ್ಲಿ ಡಿಸಿ ಗುರುದತ್ ಹೆಗಡೆ, ಎಸ್ಪಿ ಮಿಥುನ್ ಕುಮಾರ್, ಜಿ.ಪಂ. ಸಿಇಓ ಹೇಮಂತ್ ಕುಮಾರ್ ಉಪಸ್ಥಿತಿ
*ಸಭೆಯಲ್ಲಿ ಪೆಹಲ್ಗಾಮ್ ದಾಳಿಯಲ್ಲಿ ಮೃತರಾದವರಿಗೆ ಶ್ರದ್ಧಾಂಜಲಿ ಸಲ್ಲಿಕೆ*