*ಶಿವಮೊಗ್ಗದ ವಸತಿ ಶಾಲೆಯಲ್ಲಿ ನಿರಂತರವಾಗಿ ಕೆಮ್ಮುತ್ತಿರುವ ವಿದ್ಯಾರ್ಥಿನಿಯರು!* *ನಿರಂತರ ಕೆಮ್ಮಿಂದ ಆತಂಕ ಸೃಷ್ಟಿ* *ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿರುವ ವಿದ್ಯಾರ್ಥಿನಿಯರು ನಿರಂತರವಾಗಿ ಕೆಮ್ಮುತ್ತಿರುವುದೇಕೆ?*
*ಶಿವಮೊಗ್ಗದ ವಸತಿ ಶಾಲೆಯಲ್ಲಿ ನಿರಂತರವಾಗಿ ಕೆಮ್ಮುತ್ತಿರುವ ವಿದ್ಯಾರ್ಥಿನಿಯರು!*
*ನಿರಂತರ ಕೆಮ್ಮಿಂದ ಆತಂಕ ಸೃಷ್ಟಿ*
*ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿರುವ ವಿದ್ಯಾರ್ಥಿನಿಯರು ನಿರಂತರವಾಗಿ ಕೆಮ್ಮುತ್ತಿರುವುದೇಕೆ?*
ಶಿವಮೊಗ್ಗದ ರಾಗಿಗುಡ್ಡದ ಡಾ.ಬಿ.ಆರ್.ಅಂಬೇಡ್ಕರ್ ವಸತಿ ಶಾಲೆಯ ಬಹಳಷ್ಟು ವಿದ್ಯಾರ್ಥಿನಿಯರು ನಿರಂತರವಾಗಿ ಕೆಮ್ಮುತ್ತಿದ್ದು, ಅವರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಾಲೆಯ 14 ವಿದ್ಯಾರ್ಥಿನಿಯರಲ್ಲಿ ನಿರಂತರ ಕೆಮ್ಮು ಕಾಣಿಸಿಕೊಂಡಿದ್ದು, ಕಳೆದ ಮೂರು ದಿನಗಳಿಂದ ಕೆಮ್ಮು ಕಾಣಿಸಿಕೊಂಡಿದೆ.
ಶಾಲೆಯ 6 ರಿಂದ 10 ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಈ 14 ಜನ ವಿದ್ಯಾರ್ಥಿಗಳ ನಿರಂತರ ಕೆಮ್ಮಿನಿಂದಾಗಿ ಶಾಲೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಬಾಲಕಿಯರ ವಸತಿ ಶಾಲೆಯಾಗಿರುವ ಡಾ. ಅಂಬೇಡ್ಕರ್ ಶಾಲೆ ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಯಲ್ಲಿ ಬರುತ್ತದೆ.
ಮೆಗ್ಗಾನ್ ಆಸ್ಪತ್ರೆಗೆ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸೇರಿದಂತೆ ಸಿಇಓ, ಟಿಹೆಚ್ ಓ ಕೂಡ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ನಿರಂತರ ಕೆಮ್ಮಿಗೆ ಕಾರಣ ತಿಳಿದು ಬಂದಿಲ್ಲ.


